ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಬಹುತೇಕ ಜನಸಾಮಾನ್ಯರು ಕಾತರದಿಂದ ಕಾಯುತ್ತಿರುವ ಈಗ ಸರ್ಕಾರವು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ರೇಷನ್ ಕಾರ್ಡ್ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ ಹಳೆಯ ರೇಷನ್ ಕಾರ್ಡ್ ಅರ್ಹರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದೇ ರೀತಿ ಯಾರಿಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತವರಿಗೆ ಮತ್ತೊಂದು ಅವಕಾಶ ನೀಡುತ್ತಿದೆ.
ಹೊಸ ಸದಸ್ಯರ ಹೆಸರು ಸೇರಿಸುವುದು ಹೇಗೆ? ತಿದ್ದುಪಡಿ ಮಾಡುವುದು ಹೇಗೆ?
ಹೊಸ ಸದಸ್ಯರ ಹೆಸರು ಸೇರ್ಪಡೆ : ಮದುವೆಯಾದ ನಂತ್ರ ಮನೆಗೆ ಬರುವ ಸೊಸೆಯ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಬೇಕಾಗುತ್ತದೆ. ಮಹಿಳೆಯ ಆಧಾರ್ ಕಾರ್ಡ್, ಮದುವೆ ಪ್ರಮಾಣಪತ್ರ, ಗಂಡನ ಪಡಿತರ ಚೀಟಿಯ ಫೋಟೋ ಕಾಪಿ ನೀಡಬೇಕು. ಹಾಗೆ ಆಕೆಯ ತಂದೆ ಮನೆಯ ರೇಷನ್ ಕಾರ್ಡ್ ನಲ್ಲಿರುವ ಹೆಸರನ್ನು ತೆಗೆಯಬೇಕು.
ಆನ್ಲೈನ್ ಮೂಲಕ ಹೆಸರು ಸೇರಿಸುವ ವಿಧಾನ –
• ಮೊದಲು ಆಹಾರ ಪೂರೈಕೆ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು. ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ವೆಬ್ಸೈಟ್ ಹೊಂದಿವೆ.
• ವೆಬ್ಸೈಟ್ ಗೆ ಲಾಗಿನ್ ಆದ ನಂತ್ರ ಐಡಿ ರಚಿಸಬೇಕು. ಈಗಾಗಲೇ ಐಡಿ ರಚಿಸಿದ್ದರೆ ಲಾಗಿನ್ ಆಗಬೇಕು.
• ಲಾಗಿನ್ ಆದ್ಮೇಲೆ ಹೊಸ ಸದಸ್ಯರ ಆಯ್ಕೆ ಕಾಣಿಸುತ್ತದೆ. ಅದ್ರ ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ಹೊಸ ಫಾರ್ಮ್ ಕಾಣಿಸುತ್ತದೆ.
• ಅಲ್ಲಿ ಕುಟುಂಬಸ್ಥರ ಎಲ್ಲ ಮಾಹಿತಿ ಭರ್ತಿ ಮಾಡಬೇಕು. ಫಾರ್ಮ್ ಜೊತೆಗೆ ಅಗತ್ಯ ದಾಖಲೆಗಳ ಸಾಫ್ಟ್ ಕಾಪಿಯನ್ನು ಅಪ್ಲೋಡ್ ಮಾಡಬೇಕು. ನಂತ್ರ ಶುಲ್ಕ ಪಾವತಿ ಮಾಡಬೇಕಾಗುತ್ತದೆ.
• ನಂತರ ನಮೂನೆ ಸಲ್ಲಿಕೆಯ ನಂತರ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತದೆ. ಫಾರ್ಮ್ ಅನ್ನು ಈ ಪೋರ್ಟಲ್ ನಲ್ಲಿ ಟ್ರ್ಯಾಕ್ ಮಾಡಬಹುದು. ಅಧಿಕಾರಿಗಳು ನಮೂನೆ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಎಲ್ಲವೂ ಸರಿಯಾಗಿದ್ದರೆ ನಮೂನೆಯನ್ನು ಸ್ವೀಕರಿಸಲಾಗುತ್ತದೆ ಮತ್ತು ಪಡಿತರ ಚೀಟಿಯನ್ನು ಅಂಚೆ ಮೂಲಕ ಮನೆಗೆ ತಲುಪಿಸಲಾಗುತ್ತದೆ.
ಏನಿದು ರೇಷನ್ ಕಾರ್ಡ್ ತಿದ್ದುಪಡಿ? ಏನು ಮಾಡಬೇಕು?
ಹೌದು ಈಗಾಗಲೇ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಯನ್ನು ಸದುಪಯೋಗ ಪಡೆಯಲು ರೇಷನ್ ಕಾರ್ಡ್ ಅಲ್ಲಿ ಮನೆಯ ಒಡತಿ ಹೆಸರು ಮುಖ್ಯವಾಗಿ ಇರಬೇಕಾಗುತ್ತದೆ. ಇದರಲ್ಲಿ ಕೆಲವೊಂದು ರೇಷನ್ ಕಾರ್ಡ್ ಅಲ್ಲಿ ಮನೆಯ ಒಡತಿ ಹಾಗೂ ಮನೆಯ ಸದಸ್ಯರ ಹೆಸರು ಸೇರಿಸುವ ಕೆಲಸ ಮಾಡಬೇಕಾಗಿದೆ. ಇನ್ನೂ ಯಾರೂ ಹೆಸರು ಸೇರಿಸಿಲ್ಲ ಕೂಡಲೇ ನಿಮ್ಮ ಸದಸ್ಯರ ಹೆಸರು ಸೇರಿಸಿ. ಇದರ ಉಪಯೋಗ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
*ಬೆಳಗಾವಿ/ಮೈಸೂರು ವಿಭಾಗ*
ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರಕನ್ನಡ, ವಿಜಯಪುರ ಜಿಲ್ಲೆಗಳು ಮಾತ್ರ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಈ – ಕೆ ವೈ ಸಿ ಯನ್ನು ಮಾಡಲು ಕೊನೆಯ ದಿನಾಂಕ ಫೆಬ್ರವರಿ 29 ನೇ ತಾರೀಕು 2024 ಕೊನೆಯ ದಿನಾಂಕ ವಾಗಿರುತ್ತದೆ ಅದರ ಒಳಗೆ ನೀವು ರೇಷನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಈಕೆ ವಹಿಸಿಯನ್ನು ಮಾಡಿಸಿಕೊಳ್ಳಿ ಅಂದಾಗ ನಿಮ್ಮ ಸಮಸ್ಯೆ ಬಗೆಹರಿಯಬಹುದು.