ಪ್ರೀಯ ಸಾರ್ವಜನಿಕರೇ ನಿಮಗೊಂದು ಗುಡ್ ನ್ಯೂಸ್ ಬಂದಿದೆ. ರಾಜ್ಯದಲ್ಲಿ ಮಳೆ ಇಲ್ಲದೆ ಕಂಗೆಟ್ಟಿದ್ದ ರೈತರಿಗೆ ಸರ್ಕಾರದಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ. ಗಂಗಾ ಕಲ್ಯಾಣ ಯೋಜನೆಯ (Ganga Kalyana Scheme) ಅಡಿಯಲ್ಲಿ ರೈತರಿಗೆ ಉಚಿತ ಬೋರ್‌ವೆಲ್ (Free borewell) ಕೊರೆಸಲು ಸಹಾಯಧನ (subsidy) ನೀಡುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ರೈತರು ಸ್ವಾವಲಂಬಿ ಹಾಗೂ ನೇರವಾದ ಜೀವನ ನಡೆಸಲು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ರೈತರಿಗೆ ಒಂದು ಸುವರ್ಣ ಅವಕಾಶ ನೀಡಿದೆ. ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದೊಂದಿಗೆ) ಇದರ ಉದ್ದೇಶ ವ್ಯಾಪಾರ ಮತ್ತು ಇತರ ಉದ್ಯಮಗಳಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ಅರ್ಹರು ಯಾರು? ದಾಖಲೆ ಏನು ಬೇಕು?
* ಪರಿಶಿಷ್ಟ ಜಾತಿ/ ಪಂಗಡದವರಾಗಿರಬೇಕು.
* ಜಾತಿ ಪ್ರಮಾಣಪತ್ರ
* ಆದಾಯ ಮಿತಿ (ಗ್ರಾಮೀಣ ಪ್ರದೇಶವಾದರೆ 1.5 ಲಕ್ಷ ರೂ., ನಗರ ಪ್ರದೇಶವಾದರೆ 2 ಲಕ್ಷ ರೂ.)
* ಕನಿಷ್ಠ 21 ವರ್ಷ ವಯೋಮಿತಿ
* ಸಣ್ಣ ಹಿಡುವಳಿದಾರರ ಪ್ರಮಾಣಪತ್ರ
* ಇತ್ತೀಚಿನ ಪಹಣಿ
* ಆದಾಯ ಪ್ರಮಾಣ ಪತ್ರ
* ಕುಟುಂಬದ ಪಡಿತರ ಚೀಟಿ
* ಬ್ಯಾಂಕ್ ಪಾಸ್ ಬುಕ್
ಆಧಾರ್ ಕಾರ್ಡ್
ನ. 29 ಕೊನೇ ದಿನ ಅರ್ಹ ಫಲಾನುಭವಿಗಳು ಈ ಯೋಜನೆ ಅಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ನವೆಂಬರ್ 29 ಕೊನೇ ದಿನವಾಗಿದೆ. ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರ ಇಲ್ಲವೇ ಸೇವಾಸಿಂಧು ಪೋರ್ಟಲ್‌ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಇದೇ ತಿಂಗಳು 29 ರೊಳಗೆ ಸೇವಾಸಿಂಧು ಪೋರ್ಟಲ್ (https:// sevasindhu.karnataka.gov.in) ಮೂಲಕ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಅದೇ ರೀತಿ ಈಗ ಸರ್ಕಾರವು ಕೂಡ ರೈತರ ಪರವಾಗಿ ನಿಂತು ಕೆಲಸ ಮಾಡುತ್ತಿದೆ. ಹಾಗೂ ರೈತರು ಸಹ ಈ ಎಲ್ಲ ಯೋಜನೆಗಳ ಸಂಪೂರ್ಣ ಮಾಹಿತಿ ಪಡೆದು ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ನಂಬರ್ 9482-300-400 ಹಾಗೂ ಸಹ ಸೇವಾಸಿಂಧು ಗೋರ್ಟಲ್ ಮೂಲಕವೇ ಸಲ್ಲಿಸುವುದು. https://sevasindhu.karnataka.gov.in ಗೆ ಭೇಟಿ ನೀಡಿ.