ಪ್ರೀಯ ಸಾರ್ವಜನಿಕರೇ ಇವತ್ತು ನಾವು ಒಂದು ಮುಖ್ಯವಾದ ವಿಷಯ ಬಗ್ಗೆ ಚರ್ಚಿಸೋಣ.
ಕೆಲವು ದಿನಗಳಿಂದ ಹೊಸ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಕಾರ್ಡುಗಳಿಗಾಗಿ ಅರ್ಜಿ ಸ್ವೀಕಾರವನ್ನು ನಿಲ್ಲಿಸಲಾಗಿದೆ. ಏನಿದು ಹೊಸ ರೇಷನ್ ಕಾರ್ಡ್ ಅರ್ಜಿ? ಏನು ಮಾಡಬೇಕು? ಹೇಗೆ ಅರ್ಜಿ ಸಲ್ಲಿಸಬೇಕು?
ಹೌದು ಈಗಾಗಲೇ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಯನ್ನು ಸದುಪಯೋಗ ಪಡೆಯಲು ರೇಷನ್ ಕಾರ್ಡ್ ಅಲ್ಲಿ ಮನೆಯ ಒಡತಿ ಹೆಸರು ಮುಖ್ಯವಾಗಿ ಇರಬೇಕಾಗುತ್ತದೆ. ಇದರಲ್ಲಿ ಕೆಲವೊಂದು ರೇಷನ್ ಕಾರ್ಡ್ ಅಲ್ಲಿ ಮನೆಯ ಒಡತಿ ಹಾಗೂ ಮನೆಯ ಸದಸ್ಯರ ಹೆಸರು ಸೇರಿಸುವ ಕೆಲಸ ಮಾಡಬೇಕಾಗಿದೆ. ಇನ್ನೂ ಯಾರೂ ಹೆಸರು ಸೇರಿಸಿಲ್ಲ ಕೂಡಲೇ ನಿಮ್ಮ ಸದಸ್ಯರ ಹೆಸರು ಸೇರಿಸಿ. ಅದೇ ರೀತಿ ಈಗ ರಾಜ್ಯದಲ್ಲಿ ಹೊಸರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸರ್ಕಾರವು ಮುಂದಾಗಿದೆ.
ಅರ್ಜಿ ಸಲ್ಲಿಕೆ ಎಲ್ಲಿ?
ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದ್ರೆ ಹತ್ತಿರದ ಆಹಾರ ಪೂರೈಕೆ ಕೇಂದ್ರಕ್ಕೆ ಹೋಗಬೇಕು. ಗ್ರಾಮ್ ಒನ್ ಅಥವಾ ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಎಲ್ಲಾ ಅಗತ್ಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು. ಹೊಸ ಸದಸ್ಯರ ಹೆಸರನ್ನು ಸೇರಿಸುವ ಅರ್ಜಿ ಭರ್ತಿ ಮಾಡಬೇಕು. ಅರ್ಜಿ ಶುಲ್ಕವನ್ನು ಜಮಾ ಮಾಡಬೇಕು. ನಮೂನೆಯನ್ನು ಸಲ್ಲಿಸಿದ ನಂತರ, ಅಧಿಕಾರಿಗಳು ರಶೀದಿಯನ್ನು ನೀಡುತ್ತಾರೆ. ರಶೀದಿಯ ಮೂಲಕ, ಆನ್ಲೈನ್ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.
ಅರ್ಜಿ ಏಕೆ ರದ್ದಾಗಿದೆ?
• ಅತ್ತೆ, ಸೊಸೆ ಫಲಾನುಭವಿಗಳಾಗಲು ಫ್ಯಾನ್, ಡಿಲೀಟ್‌ಗೆ ಅರ್ಜಿ.
• ಕುಟುಂಬ ಸದಸ್ಯರು ಬೇರ್ಪಡೆ ತೋರಿಸಿರೋದು.
• ಸರ್ಕಾರಿ ಕೆಲಸದಲ್ಲಿದ್ದವರು ತಿದ್ದುಪಡಿಗೆ ಅರ್ಜಿ.
• ನಕಲಿ ವಿಳಾಸ ಬದಲಾವಣೆ ಅರ್ಜಿಗೆ ಸಲ್ಲಿಕೆ.
• ತಿದ್ದುಪಡಿ ಅರ್ಜಿ ಹಾಕಿದರಲ್ಲಿ ಒಂದು ಲಕ್ಷದಷ್ಟು ಅರ್ಜಿ ರಿಜೆಕ್ಟ್.
ರೇಷನ್ ಕಾರ್ಡ್ ಆನ್ಲೈನ್ ನಲ್ಲಿ ಹೇಗೆ ಪಡೆಯಬೇಕು?
ಮೊದಲಿಗೆ ಹೊಸ ಪಡಿತರ ಚೀಟಿಯನ್ನು ಆನ್ಲೈನ್ ನಲ್ಲಿ ಪಡೆಯಲು ನೀವು ಈ ಕೆಳಗಿನ ahara.kar.nic.in ಮೂಲಕ ಪಡೆಯಬಹುದಾಗಿದೆ.
• ಮೊದಲು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಒಂದು ಹೊಸ ಮುಖಪುಟ ಕಂಡು ಬರುತ್ತದೆ ಅಲ್ಲಿ ಈ ಸೇವೆ ಎಂಬ ಮೆನುವು ಕಾಣಿಸುತ್ತದೆ.
• ನಂತರ ಅಲ್ಲಿ ಹೊಸ ರೇಷನ್ ಕಾರ್ಡ್ ಎಂಬ option ಬರುತ್ತದೆ,
• ಅದಾದ ನಂತರ ಹೊಸ ಕಾರ್ಡ್ ಪಡೆಯಲು ಅರ್ಜಿಗಾಗಿ ಕನ್ನಡ ಅಥವಾ ಇಂಗ್ಲೀಷನ್ನು ಆಯ್ಕೆ ಮಾಡಿಕೊಳ್ಳಬೇಕು.
• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ಆಗ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ OTP ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ಅಲ್ಲಿ ನೀಡುವ ಕ್ಯಾಪ್ಟರ್ ಸರಿಯಾಗಿ ಟೈಪ ಮಾಡಿ Go ಮೇಲೆ ಕ್ಲಿಕ್ ಮಾಡಿ ನಂತರ ಹೆಸರು, ಜನನ ದಿನಾಂಕ, ಲಿಂಗ, ಛಾಯಾಚಿತ್ರ ಮೊದಲಾದವುಗಳು ಕಾಣುತ್ತವೆ.
• ನಂತರ ಅಲ್ಲಿ ನೀವು ಹಾಕಿರುವ ಆಧಾರ್ ಮಾಹಿತಿ ಸರಿಯಾಗಿ ಇದ್ದರೆ Add ಒತ್ತಿ , ಅಲ್ಲಿ ಕುಟುಂಬ ಸದಸ್ಯರ ಮಾಹಿತಿ ಹಾಗೂ ಕುಟುಂಬದ ಯಜಮಾನನಿಗೆ ಇರುವ ಸಂಬಂಧಗಳನ್ನು ಅಲ್ಲಿ ನಮೂದಿಸಿದ ನಂತರ ಅಪ್ಲಿಕೇಶನ್ ನಂಬರ್ ಜನರೇಟ್ ಆಗುತ್ತದೆ.
• ನಂತರ ನೀವು 70 ರೂಪಾಯಿ ಪಾವತಿಸಿ ಪಡೆಯಬೇಕು. ಇದು ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರುತ್ತದೆ.