ರೈತ ಭಾಂದವರ ಗಮನಕ್ಕೆ ಸರ್ಕಾರವು ರೈತರಿಗೆ ಬರದ ನಡುವೆ ಒಂದು ಒಳ್ಳೆ ಸಂದೇಶವನ್ನು ನೀಡುತ್ತಿದೆ. ಹಾಗೂ ರೈತರು ಈ ವರ್ಷ ಮಳೆ ಆಗಿಲ್ಲ ಎಂಬ ಕಾರಣಕ್ಕೆ ಬರಗಾಲಕ್ಕೆ ತುತ್ತಾಗಿದ್ದಾರೆ. ಇದರ ನಡುವೆ ಸರ್ಕಾರವು ಸಹ ಈಗ ಬರ ಪರಿಹಾರ ಘೋಷಣೆ ಮಾಡಿದೆ. ಎಲ್ಲಾ ರೈತ ಬಾಂಧವರಿಗೆ ತಿಳಿಸುದೆನೆಂದರೆ ಬರಗಾಲ ಘೋಷಣೆಯಾದ ಹಿನ್ನಲೆಯಲ್ಲಿ ಇನ್ನೆನು ಕೆಲವು ದಿನಗಳಲ್ಲಿ ಬೆಳೆ ಪರಿಹಾರವನ್ನು ಸರ್ಕಾರದಿಂದ ನೆರವಾಗಿ ನಿಮ್ಮ ಖಾತೆಗೆ ಪರಿಹಾರ ಮೊತ್ತವನ್ನು ಜಮಾ ಮಾಡುವವರಿದ್ದು ಈ ಕೂಡಲೆ ಎಲ್ಲಾ ರೈತರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ FID(farmer identification document) en n D233 ಪಡಿಸಿಕೊಳ್ಳಿ ಈಗಾಗಲೇ FID ಆಗಿದ್ದಲ್ಲಿ ನಿಮ್ಮ ಎಲ್ಲಾ ಜಮೀನು ರಿ.ಸ.ನಂ ಗಳು ಜೋಡನೆಯಾಗಿದೆಯೆ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಿ ಮತ್ತು ಇನ್ನುವರೆಗೂ FID ಮಾಡಿಸದೆ ಉಳಿದ ರೈತರು ನಿಮ್ಮ ಜಮೀನಿನ ಪಹಣಿ,ಅಧಾರಕಾರ್ಡ,ಬ್ಯಾಂಕ ಪಾಸಬುಕ,ಪೊಟೊ ತೆಗೆದುಕೊಂಡು ಹೋಗಿ ಕೂಡಲೆ FID ಮಾಡಿಸಿಕೊಳ್ಳಲು ತಿಳಿಸಿದಿ ಒಂದು ವೇಳೆ FID ಮಾಡಿಸದೆ ಉಳಿದಿದ್ದಲ್ಲಿ ನಿಮಗೆ ಸರ್ಕಾರದಿಂದ ಬರುವ ಪರಿಹಾರ ಮೊತ್ತ ಸಿಗದೆ ವಂಚಿತರಾಗುತ್ತಿರಿ ತಿಳಿಯಿರಿ.
ನಿಮ್ಮ ಮೊಬೈಲ್ ನಲ್ಲೇ FID ನೊಂದಣೆ ಮಾಡುವುದು ಹೇಗೆ?
• ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://fruits.karnataka.gov.in/OnlineUserLogin.aspx
ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.
“Citizen Registration” ಮೇಲೆ ಕ್ಲಿಕ್ ಮಾಡಿ
• ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,I agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.
• ನಂತರ ನಿಮ್ಮ ಮೊಬೈಲ್ ನಂಬರ್, ಇಮೆಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ.
• ನಂತರ ನಿಮ್ಮ ಮೊಬೈಲ್ ಗೆ ಬರುವ OTP ಹಾಕಿ,Submit ಮೇಲೆ ಕ್ಲಿಕ್ ಮಾಡಿ.
• ನಂತರ Password create ಮಾಡಿ,ಲಾಗಿನ್ ಆಗಿ ಅಗತ್ಯ ಮಾಹಿತಿ ಭರ್ತಿ ಮಾಡಿದರೆ ನಿಮ್ಮ FID ಸಿಗಲಿದೆ.
• ಹೀಗೆ ಸೃಜಿಸಲಾದ FID ಯನ್ನು ಕೃಷಿ ಇಲಾಖೆ,ರೇಷ್ಮೆ ಇಲಾಖೆ,ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.
FID ಹೊಸದಾಗಿ ರಚಿಸಲು
1) ಆಧಾರ ಪ್ರತಿ
2) ಚಾಲ್ತಿ ಉತಾರ್
3)ಬ್ಯಾಂಕ ಪಾಸ ಬುಕ್ ನೊಂದಿಗೆ
ರೈತ ಸಂಪರ್ಕ ಕೇಂದ್ರ ತಿಕೋಟಾದಲ್ಲಿ ಭೇಟಿ ನೀಡಲು ಈ ಮೂಲಕ ತಿಳಿಸಿದೆ.
ಫ್ರೂಟ್ಸ್ ಐಡಿ (ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮಶನ್ ಸಿಸ್ಟಮ್). ರೈತರಿಗೆ ಕೃಷಿಯಲ್ಲಿ ಎಷ್ಟು ಮಹತ್ವ ಪಡೆದಿದೆ ಎಂದು ತಿಳಿಯುವುದು ಮುಖ್ಯ ಪಾತ್ರ ವಹಿಸುತ್ತದೆ. ಫ್ರೂಟ್ಸ್ ಐಡಿ ಎಂಬುದು ನಂಬರ್ ರೂಪದಲ್ಲಿ ಇರುತ್ತದೆ. ಹಾಗೂ ರೈತರ ಸಂಪೂರ್ಣ ಮಾಹಿತಿ ಇದರಲ್ಲಿ ಇರುತ್ತದೆ. ಜಮೀನು ಹೊಂದಿರುವ ಪ್ರತಿಯೊಬ್ಬ ರೈತರೂ ಕೂಡ ಫ್ರೂಟ್ಸ್ ಐಡಿ ನೊಂದಣಿ ಮಾಡಲು ಅರ್ಹರಾಗಿರುತ್ತಾರೆ. ಏಕೆಂದರೆ ಫ್ರೂಟ್ಸ್ ಐಡಿ ಇಲ್ಲದಿದ್ದರೆ ಸರ್ಕಾರದಿಂದ ಸಿಗುವ ಹಲವಾರು ಯೋಜನೆಗಳು ಸಿಗುವುದಿಲ್ಲ. ಹಾಗೂ ಸರ್ಕಾರವು ರೈತರ ಸಲುವಾಗಿ ಈ ಪೋರ್ಟಲ್ ಇಟ್ಟಿದ್ದಾರೆ.