ಸರ್ಕಾರದ ಬೆಳೆ ವಿಮೆ ಅಥವಾ ಬರಪರಿಹಾರ ಪಡೆಯಲು ರೈತರು ತಮ್ಮ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆಯೇ ಇಲ್ಲವೋ ಎಂಬುದನ್ನು ಇಂದೇ ಬೆಳೆ ದರ್ಶಕ app ಮೂಲಕ ಖಚಿತ ಪಡಿಸಿಕೊಳ್ಳಿ. ಬೆಳೆ ಸಮೀಕ್ಷೆ ಮಾಹಿತಿ ತಪ್ಪಾಗಿದ್ರೆ ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ.
ರೈತರ ಭಾಂದವರ ಗಮನಕ್ಕೆ ಮುಂಗಾರು ಬೆಳೆ ಆಕ್ಷೇಪಣೆ ಹಾಗೂ ಮಹಜರ್ ಮಾಡಲು ಅವಕಾಶ ನೀಡಲಾಗಿದ್ದು ತಪ್ಪಾಗಿ ನಮೂದಿಸಿರುವ ಬೆಳೆ ಮಾಹಿತಿಯನ್ನು ಶೀಘ್ರವಾಗಿ ಸರಿಪಡಿಸಿಕೊಳಲ್ಲು ಈ ಮೂಲಕ ತಿಳಿಸಲಾಗಿದೆ. ಸದ್ಯದಲ್ಲಿ ರಾಜ್ಯ ಸರ್ಕಾರ ಜನರಿಗೆ ಸರ್ಕಾರವು ಬೆಳೆವಿಮೆ ಪರಿಹಾರ ಇತ್ಯರ್ಥಕ್ಕೆ ಸೂಚನೆ ನೀಡಿದ್ದಾರೆ. ಈಗಾಗಲೇ ಬೆಳೆವಿಮೆ ಇತ್ಯರ್ಥ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 2022-23 ಸಾಲಿನ ಬೆಳೆವಿಮೆ ಕೂಡಲೇ ಪರಿಹಾರ ಬಿಡುಗಡೆ ಆಗಬೇಕು. ಅದೇ ರೀತಿ ಬೇಗನೆ ಇದರ ಸಂಪೂರ್ಣ ಮಾಹಿತಿ ಪಡೆದು ಇಲ್ಲವಾದರೆ ಮಾಹಿತಿ ಪಡೆದುಕೊಂಡ ಸಚಿವರು ಯಾವುದೇ ಕಾರಣಕ್ಕೂ ಬೆಳೆವಿಮ ಪರಿಹಾರ ತಡವಾಗಬಾರದು ಎಂದು ಹೇಳಿದರು. ರೈತರು ಎಲ್ಲರೂ ಬೆಳೆವಿಮೆ ಪರಿಹಾರಕ್ಕಾಗಿ ಕಾದುಕುಳಿತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಇನ್ಸೂರೆನ್ಸ್ ಕಂಪನಿಗಳೊಂದಿಗೆ ನಿರಂತರ ಸಂಪರ್ಕವನ್ನು ಕೃಷಿ ಅಧಿಕಾರಿಗಳು ಹೊಂದಿರಬೇಕು. ಇನ್ನೂ ಸಾಕಷ್ಟು ರೈತರು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿಲ್ಲ. ಅದಷ್ಟು ಬೇಗ ರೈತರು ಆಧಾರ್ ಕಾರ್ಡ್ ಬೆಳೆವಿಮೆಗೆ ಸರಿಯಾಗಿ ಲಿಂಕ್ ಮಾಡಿ ಪಡೆಯಬೇಕು.
ಮುಂಗಾರು ಬೆಳೆ ಸಮೀಕ್ಷೆ ವೇಳೇಯಲ್ಲಿ ಯಾವುದೇ ತಪ್ಪುಗಳು ಕಂಡುಬಂದಲ್ಲಿ ಹಾಗೂ ನೀವು ಸಮೀಕ್ಷೇ ಮಾಡುವಾಗ ಬೆಳೆಗಳ ಮಾಹಿತಿ ತಪ್ಪಾಗಿ ನೀಡಿದ್ದರೆ ಕೂಡಲೇ ಅದನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದ್ದು ರೈತರಿಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಇದೊಂದು ಮಹತ್ವದ ವಿಷಯವಾಗಿದೆ. ಆಕ್ಷೇಪಣೆ ಹಾಗೂ ಮಹಜರ್ ಮಾಡಲು ಅವಕಾಶ ನೀಡಲಾಗಿದ್ದು ತಪ್ಪಾಗಿ ನಮೂದಿಸಿರುವ ಬೆಳೆ ಮಾಹಿತಿಯನ್ನು ಶೀಘ್ರವಾಗಿ ಸರಿಪಡಿಸಿಕೊಳಲ್ಲು ಸರ್ಕಾರವು ಮತ್ತೊಂದು ಬಾರಿ ಅವಕಾಶ ಕಲ್ಪಿಸಿದೆ.
ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?
ಪ್ರೀಯ ರೈತರೇ ಈಗಾಗಲೇ ಬೆಳೆವಿಮೆ ಆಗಿದೆ ಹಾಗೂ ಬೆಳೆ ಸಮೀಕ್ಷೆ ಕೂಡ ಆಗಿದೆ ಆದರೆ ಬೆಳೆ ಸಮೀಕ್ಷೆ ಮಾಡಿದ ರೈತರು ತಮ್ಮ ಬೆಳೆ ಸಮೀಕ್ಷೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಬಹಳ ಸೂಕ್ತ ಎನಿಸುತ್ತದೆ. ಅದೇ ರೀತಿ ಈಗ ಒಂದೊಂದಾಗಿ ತಿಳಿಯೋಣ.
• First this https://play.google.com/store/apps/details?id=com.crop.offcskharif_2021
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
• ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ Bele darshak 2023-24 ಎಂದು ಟೈಪ್ ಮಾಡಿ ಡೌನ್ಹೋಡ್ ಮಾಡಿಕೊಳ್ಳಬಹುದು.
• ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಬೆಳೆ ದರ್ಶಕ್ ಆ್ಯಪ್ ಕಾಣಿಸುತ್ತದೆ. ಅಲ್ಲಿ install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.
• ಆಗ ನಿಮಗೆ ಬೆಳೆ ದರ್ಶಕ್ 23-24 ಕೆಳಗಡೆ ಬೆಳೆ ಸಮೀಕ್ಷೆ ಮಾಹಿತಿ ವೀಕ್ಷಣೆ ಕಾಣಿಸುತ್ತದೆ.
• ಅದರ ಕೆಳಗಡೆ ಸರ್ಕಾರಿ ಸಿಬ್ಬಂದಿ ಪ್ರೈವೆಟ್ ರೆಸಡೆಂಟ್ಸ್ ಹಾಗೂ ರೈತ ಎಂಬ ಆಯ್ಕೆಗಳು ಕಾಣಿಸುತ್ತವೆ. ರೈತ ಮೇಲೆ ಕ್ಲಿಕ್ ಮಾಡಬೇಕು.
• ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ಆ್ಯಪ್ ಓಪನ್ ಆದ ತಕ್ಷಣ ಅಲ್ಲಿ ನಿಮ್ಮ ತಾಲೂಕು, ಜಿಲ್ಲೆ, ಸರ್ವೇ ನಂಬರ್, ಹಿಸ್ಸಾ ನಂಬರ್ ಹೀಗೆ ಕೇಳಲಾಗುತ್ತದೆ.
• ನಂತರ ಎಲ್ಲ ಮಾಹಿತಿ ಹಾಕಿ ಸಮೀಕ್ಷೇಗಳ ವಿವರಗಳನ್ನು ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ನಿಮಗೆ ಬೇಕಾದ ಮಾಹಿತಿ ದೊರೆಯುತ್ತದೆ.