ರಾಜ್ಯ ಸರ್ಕಾರದಿಂದ ಇಂದು ಬರಗಾಲ ತಾಲೂಕುಗಳ ಘೋಷಣೆ
ಕರ್ನಾಟಕದಲ್ಲಿ ತಡವಾಗಿ ಆರಂಭವಾದ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿಯದೇ ಬರಗಾಲ ಸೃಷ್ಟಿಗೆ ಕಾರಣವಾಗಿದೆ. ಆಗಾಗ ಅಲ್ಲೊಮ್ಮೆ ಇಲ್ಲೊಮ್ಮೆ ಮಾತ್ರವೇ ಮಳೆ ಆಗುತ್ತಿದ್ದು, ರಾಜ್ಯದ ಬಹುತೇಕ ಭಾಗದಲ್ಲಿ ಬರಗಾಲ ಆವರಿಸಿದೆ. ಬೆಳೆ ಬಳೆದ ರೈತರು ಕಂಗಾಲಾಗಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ನಾಳೆ ಮಹತ್ವದ ಸಭೆ ನಡೆಸಲಿದ್ದು, ಹೇಳಿದಂತೆ ಅನೇಕ ತಾಲೂಕುಗಳನ್ನು ಬರಗಾಲ ಪ್ರದೇಶಗಳೆಂದು ಘೋಷಿಸಲಿದೆ. ಮುಂಗಾರು ಈ ವರ್ಷ ತೀವ್ರವಾಗಿ ದುರ್ಬಲಗೊಂಡಿದೆ. ಮಳೆಯನ್ನೇ ನೆಚ್ಚಿಕೊಂಡು ಉಳುಮೆ ಮಾಡಿದ್ದವರ ಪೈಕಿ ಹಲವುರು ಈಗಾಗಲೇ ಬೆಳೆ ಒಣಗಿದ್ದಕ್ಕೆ, ರೋಗ ಉಂಟಾಗಿದ್ದಕ್ಕೆ…