ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಉದ್ಯೋಗಿನಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯು ನಿರುದ್ಯೋಗಿ ಮಹಿಳೆಯರು ಸ್ವಉದ್ಯೋಗ ಮಾಡಲು ಪ್ರೋತ್ಸಾಹ ನೀಡುವ ಯೋಜನೆಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಗೆ ಗರಿಷ್ಠ 3 ಲಕ್ಷ ರೂಪಾಯಿವರಗೆ ಸಾಲ ದೊರೆಯಲಿದ್ದು, ಸಬ್ಸಿಡಿ ಕೂಡ ಲಭ್ಯವಾಗಲಿದೆ. ಹಾಗಾದ್ರೆ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಉದ್ಯೋಗಿನಿ ಯೋಜನೆಗೆ ಮಹಿಳೆಯರು ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶವಿದೆ. ಹಾಗಂತ ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಆನ್ಲೈನ್ನಲ್ಲಿ ಅವಕಾಶವಿಲ್ಲ. ಬದಲಿಗೆ ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ನೀವು ನಿಮ್ಮ ತಾಲೊಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗೆ ಬೇಟಿ ನೀಡಿ ವಿಚಾರಿಸಬಹುದಾಗಿದೆ.
ಉದ್ಯೋಗಿನಿ ಯೋಜನೆಯಲ್ಲಿ ಲಭ್ಯವಾಗುವ ಸಾಲದ ಪ್ರಮಾಣ ಎಷ್ಟು?
ಉದ್ಯೋಗಿನಿ ಯೋಜನೆಯಲ್ಲಿ ಸ್ವಯಂ ಉದ್ಯೋಗ ಮಾಡಲು ಬಯಸುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಮಹಿಳೆಗೆ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಬ್ಯಾಂಕ್ ಮೂಲಕ ಸಾಲ ನೀಡಲಾಗುತ್ತದೆ. ಇದರಲ್ಲಿ ಪರಿಶಿಷ್ಠ ಪಂಗಡ/ ಪರಿಶಿಷ್ಠ ಜಾತಿಯ ಮಹಿಳೆಯರಿಗೆ 50%ರಷ್ಟು ಅಥವಾ ಗರಿಷ್ಠ 1,50,000 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಅಲ್ಲದೆ ಇತರ ವರ್ಗದ ಮಹಿಳೆಯರಿಗೆ ಶೇಕಡ 30ರಷ್ಟು ಅಥವಾ ಗರಿಷ್ಠ 90,000 ರೂಪಾಯಿ ಸಬ್ಸಿಡಿ ದೊರೆಯಲಿದೆ.
ಇನ್ನು ಈ ಯೋಜನೆಯು ಕರ್ನಾಟಕದ ಖಾಯಂ ನಾಗರಿಕ ಮಹಿಳೆಯರಿಗೆ ಮಾತ್ರ ಅನ್ವಯವಾಗಲಿದೆ. ಅಲ್ಲದೆ ಇದು 18 ವರ್ಷದಿಂದ 55 ವರ್ಷದೊಳಿಗಿನ ಮಹಿಳೆಯರಿಗೆ ಸೌಲಭ್ಯ ದೊರೆಯಲಿದೆ. ಇದಲ್ಲದೆ ಈ ಯೋಜನೆಯಲ್ಲಿ ಸಾಲ ಪಡೆಯಬೇಕಾದರೆ ಎಸ್ಸಿ/ಎಸ್ಟಿ ವರ್ಗದವರು ವಾರ್ಷಿಕ ಆದಾಯ 2 ಲಕ್ಷ ರೂ. ಮೀರಿರಬಾರದು. ಸಾಮಾನ್ಯ ವರ್ಗದವರಿಗೆ ಸಾಲ ನೀಡಬೇಕಾದರೆ ಅವರ ವಾರ್ಷಿಕ ಆದಾಯವು 1.5 ಲಕ್ಷ ರೂಪಾಯಿಗಿಂತ ಒಳಗಡೆ ಇರಬೇಕಾದ ಅನಿವಾರ್ಯತೆಯಿದೆ.
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲಿಗೆ ನಿಮ್ಮ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿಗೆ ಬೇಟಿ ನೀಡಿ
* ಇಲ್ಲಿ ಉದ್ಯೋಗಿನಿ ಯೋಜನೆಯ ಅರ್ಜಿಯನ್ನು ಕೇಳಿ ಪಡೆಯಿರಿ
* ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ
* ನಂತರ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಸಬ್ಮಿಟ್ ಮಾಡಿರಿ
* ಇದಾದ ನಂರ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ
* ನಿಮ್ಮ ಅರ್ಜಿಯಲ್ಲಿ ಎಲ್ಲಾ ಮಾಹಿತಿಯ ಸರಿಯಿದ್ದು, ಅರ್ಜಿ ಅನುಮೋದನೆಯಾದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಹಣವು ಜಮೆಯಾಗಲಿದೆ.
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ವಿವರ ಇಲ್ಲಿದೆ
ಉದ್ಯೋಗಿನಿ ಯೋಜನೆಯಲ್ಲಿ ಮಹಿಳೆಯರು ಸಾಲ ಪಡೆದುಕೊಳ್ಳುವುದಕ್ಕೆ ಕೆಲವು ಪ್ರಮುಖ ದಾಖಲೆಗಳನ್ನು ಒದಗಿಸಲೇಬೇಕು. ಅವುಗಳ ವಿವರ ಈ ಕೆಳಗಿನಂತಿದೆ.
* ಅರ್ಜಿ ಸಲ್ಲಿಸುವ ಮಹಿಳೆಯ ಆಧಾರ್ ಕಾರ್ಡ್
* ಅರ್ಜಿ ಸಲ್ಲಿಸುವ ಮಹಿಳೆಯ ಜನನ ಪ್ರಮಾಣ ಪತ್ರ
* ಅರ್ಜಿ ಸಲ್ಲಿಸುವ ಮಹಿಳೆಯ ವಿಳಾಸ ಹಾಗೂ ಆದಾಯ ಪ್ರಮಾಣಪತ್ರ
* ಅರ್ಜಿ ಸಲ್ಲಿಸುವ ಮಹಿಳೆಯ ಬಿಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿ
* ಎಸ್ಟಿ/ ಎಸ್ಸಿ ಮಹಿಳೆಯರಾಗಿದ್ದರೆ ಜಾತಿ ಪ್ರಮಾಣಪತ್ರ ಕಡ್ಡಾಯ
* ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿ
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈ ಮೂಲಕ ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ. ಪ್ರತಿ ತಿಂಗಳು ಬಂದು ಸೇರುವುದು ಪಕ್ಕಾ ಆಗಿದೆ. ಈ ಮೂಲಕ ಮಹಿಳೆಯರ ಸ್ವಾವಲಂಬನೆಯತ್ತ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.