ಮನೆ ಯಜಮಾನಿ ಮೃತಪಟ್ಟಿದ್ರೆ ಗೃಹಲಕ್ಷ್ಮಿ ಹಣ ಯಾರಿಗೆ ಸಿಗುತ್ತೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಆಹಾರ ಇಲಾಖೆಯಿಂದ ಪಡಿತರ ಚೀಟಿಗಳಲ್ಲಿ ಮರಣ ಹೊಂದಿದವರ ಹೆಸರನ್ನು ತೆಗೆದು ಹಾಕಲು, ಕುಟುಂಬದ ಯಜಮಾನರ ಹೆಸರನ್ನು ಬದಲಾವಣೆ ಮಾಡಲು, ನ್ಯಾಯಬೆಲೆ ಅಂಗಡಿಯಲ್ಲಿ ಅವಕಾಶವನ್ನು ನಿನ್ನೆಯಿಂದ ನೀಡಲಾಗಿದೆ. ರಾಜ್ಯದ ಜನರು ತಮ್ಮ ವ್ಯಾಪ್ತಿಯಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ, ರೇಷನ್ ಕಾರ್ಡ್ ನಲ್ಲಿ ಮೃತ ಕುಟುಂಬದ ಹೆಸರನ್ನು ತೆಗೆಸಿ ಹಾಕಿ, ಹಾಲಿ ಕಾರ್ಡ್ ನಲ್ಲಿ ಇರುವಂತ ಸದಸ್ಯರೊಬ್ಬರನ್ನು ಮುಖ್ಯಸ್ಥರನ್ನಾಗಿ ಬದಲಾವಣೆ ಮಾಡಿಸಬಹುದಾಗಿದೆ.

ರೇಷನ್ ಕಾರ್ಡ್ ಗೆ ಹೊಸ ಕುಟುಂಬ ಸದಸ್ಯರ ಸೇರ್ಪಡೆಗೆ ಬೇಕಾಗುವ ದಾಖಲೆಗಳೇನು ?

1. ರೇಷನ್ ಕಾರ್ಡ್ಗೆ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಲು ಕುಟುಂಬದ ಯಜಮಾನರ ಬಳಿ ರೇಷನ್ ಕಾರ್ಡ್ ಹಾಗೂ ಅದರ ಜೆರಾಕ್ಸ್ ಪ್ರತಿ
2. ಮಗುವಿನ ಅಥವಾ ಕುಟುಂಬದ ಹೊಸ ಸದಸ್ಯರ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್
3. ಮಗುವಾಗಿದಲ್ಲಿ ಪೋಷಕರ ಆಧಾರ್ ಕಾರ್ಡ್.
4. ಹೊಸ ವಿವಾಹಿತ ಮಹಿಳೆಯಾಗಿದ್ದರೆ ಆಧಾರ್ ಕಾರ್ಡ್, ವಿವಾಹ ಪ್ರಮಾಣಪತ್ರ, ತನ್ನ ಪೋಷಕರ ರೇಷನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.

ಈ ಮೇಲ್ಕಂಡ ದಾಖಲೆಗಳಿದ್ದಲೇ, ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಹಾಗಾದ್ರೇ ಅರ್ಜಿ ಸಲ್ಲಿಸೋದು ಹೇಗೆ ಎನ್ನುವ ಹಂತ ಈ ಕೆಳಗಿದೆ.

ರೇಷನ್ ಕಾರ್ಡ್ ನಲ್ಲಿ ಹೊಸ ಕುಟುಂಬ ಸದಸ್ಯರ ಹೆಸರು ಸೇರ್ಪಡೆ ಮಾಡಲು ಈ ಹಂತಗಳನ್ನು ಅನುಸರಿಸಿ, ಅರ್ಜಿ ಸಲ್ಲಿಸಿ kar.nic.in ಈ ಅಧಿಕೃತ ವೆಬ್ ಸೈಟ್ ತಾಣಕ್ಕೆ ಭೇಟಿ ನೀಡಬೇಕು.
ಈ ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ಮುಖಪುಟದಲ್ಲಿನ ಇ-ಸೇವೆಗಳು ಎಂಬಲ್ಲಿ ಕ್ಲಿಕ್ ಮಾಡಿ.
ಹೋಮ್‌ ಪೇಜ್‌ನಲ್ಲಿರುವ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಆಯ್ಕೆ ಒತ್ತಿ ಕ್ಲಿಕ್ ಮಾಡಿ.
ಹೊಸ ಫಾರ್ಮ್ ತೆರೆಯಲಿದೆ, ಹೊಸ ಕುಟುಂಬ ಸದಸ್ಯರ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ
ತಾಣಕ್ಕೂ ನೇರವಾಗಿ ಕ್ಲಿಕ್ ಮಾಡಬಹುದಾಗಿದೆ.
ಈ ಜಾಲತಾಣದಲ್ಲಿ ಕ್ಲಿಕ್ ಮಾಡಿದ ನಂತ್ರ, ನೀವು ಇ-ಪಡಿತರ ಚೀಟಿ ಆಯ್ಕೆ. ಆ ಬಳಿಕ ಕೆಳಗಡೆ ಸ್ಕ್ರಾಲ್ ಮಾಡಿದ್ರೇ.. ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸೋ ಲಿಂಕ್ ಸಿಗಲಿದೆ. ಅಲ್ಲಿ ಕ್ಲಿಕ್ ಮಾಡಿ
ಈ ಬಳಿಕ ಅರ್ಜಿಯ ಜೊತೆಗೆ ಕೇಳುವಂತ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ ಲೋಡ್ ಮಾಡಿ, ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಿ.

ಒಂದು ವೇಳೆ ಕುಟುಂಬದ ಯಜಮಾನಿ ಮೃತಪಟ್ಟರೇ ಯಾರಿಗೆ ಸಿಗಲಿದೆ ಗೃಹಲಕ್ಷ್ಮಿ ಹಣ.?

ಪಡಿತರ ಕಾರ್ಡ್ ನಲ್ಲಿ ಇರುವಂತ ಮನೆಯ ಯಜಮಾನಿ ಒಂದು ವೇಳೆ ಮೃತಪಟ್ಟರೇ ಅಂತಹವರ ಹೆಸರನ್ನು ಕಾರ್ಡ್ ನಿಂದ ತೆಗೆದು ಹಾಕೋದಕ್ಕೆ ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ನೀವು ಮನೆಯ ಯಜಮಾನಿ ಮಹಿಳೆ ಯಾರು ಎಂಬುದಾಗಿ ಬದಲಾವಣೆ ಮಾಡುತ್ತೀರೋ ಅವರಿಗೆ ಗೃಹ ಲಕ್ಷ್ಮಿ ಯೋಜನೆಯ 2000 ರೂ ಹಣ ಸಿಗಲಿದೆ. ಹೀಗಾಗಿ ಕಾರ್ಡ್ ನಲ್ಲಿ ತಿದ್ದುಪಡಿ ಇದ್ದರೇ, ಬೇಗ ಸರಿ ಮಾಡಿಕೊಂಡು, ಆಗಸ್ಟ್ 17ರಂದು ಚಾಲನಗೊಳ್ಳಲಿರುವಂತ ಗೃಹಲಕ್ಷ್ಮಿ ಯೋಜನೆಯಡಿ 2000 ರೂ ಹಣ ಪಡೆಯಿರಿ.

ಗೃಹ ಲಕ್ಷ್ಮಿ ಯೋಜನೆ ( Gruha Lakshmi Scheme ) ಸೇರಿದಂತೆ, ಅನ್ನಭಾಗ್ಯ ಯೋಜನೆಯಡಿ ( Anna Bhagya Scheme ) ಹೆಚ್ಚುವರಿ 5 ಕೆಜಿ ಅಕ್ಕಿ ಹಣವನ್ನು ಪಡೆಯಲು ಕುಟುಂಬದ ಯಜಮಾನಿ ಮಹಿಳೆ ಎಂಬುದಾಗಿ ರೇಷನ್ ಕಾರ್ಡ್ ನಲ್ಲಿ ( Ration Card ) ಇರಬೇಕಾಗಿರುತ್ತದೆ.ಆದ್ರೇ ರಾಜ್ಯದ ಅನೇಕ ಪಡಿತರ ಕುಟುಂಬದ ಕಾರ್ಡ್ ಗಳಲ್ಲಿ ಹೀಗೆ ಇರಲಿಲ್ಲ. ಕೆಲ ಕಾರ್ಡ್ ದಾರರ ಮನೆ ಯಜಮಾನಿ ಸಾವನ್ನಪ್ಪಿರೋದು ಇದೆ.

ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಯ ಮೋಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೊಂದಣಿ ಕೇಂದ್ರದ ವಿವರಗಳನ್ನು ಎಸ್.ಎಂ.ಎಸ್. ಮೂಲಕ ತಿಳಿಸಲಾಗುತ್ತದೆ.ಮೊದಲಿಗೆ ಹೆಡ್ ಆಫ್ ದ ಫ್ಯಾಮಿಲಿ ಆಧಾರ್ ಕಾರ್ಡ್ ಅಲ್ಲಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 8147500500 ಈ ಮೊಬೈಲ್ ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ಮೂಲಕ ಕಳುಹಿಸಬೇಕು.SMS ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ನಿಮಗೆ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ನೀವು ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂಬ ಮೆಸೇಜ್ ಬರುತ್ತದೆ.

ಸರ್ಕಾರ ಈ ಮೊದಲು 8147500500 ಸಹಾಯವಾಣಿ ಸಂಖ್ಯೆಗೆ SMS ಕಳುಹಿಸಿ ಸ್ಲಾಟ್ ಬುಕಿಂಗ್ ಸೂಚಿಸಿತ್ತು, ಈಗ ಮತ್ತೊಂದು ಸಹಾಯವಾಣಿ ಸಂಖ್ಯೆಯನ್ನು ಕೂಡ ನೀಡಿದೆ. 8277000555 ಸಹಾಯವಾಣಿ ಸಂಖ್ಯೆಗೂ ಕೂಡ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ ನೋಂದಣಿ ವೇಳಾಪಟ್ಟಿ ಪಡೆದುಕೊಳ್ಳಬಹುದು.ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ ಫಲಾನುಭವಿಗಳು ಸಮೀಪದ ಕರ್ನಾಟಕ ಒನ್, ವಾರ್ಡ ಕಛೇರಿ, ಸ್ಥಳಿಯ ನಗರಾಡಳಿತ ಸಂಸ್ಥೆಯ ಕಛೇರಿ, ಗೃಹಲಕ್ಷ್ಮೀ ನೋಂದಣಿ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಯ ಮೋಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ ಹಾಗೂ ನೊಂದಣಿ ಕೇಂದ್ರದ ವಿವರಗಳನ್ನು ಎಸ್.ಎಂ.ಎಸ್. ಮೂಲಕ ತಿಳಿಸಲಾಗುತ್ತದೆ.ಮೊದಲಿಗೆ ಹೆಡ್ ಆಫ್ ದ ಫ್ಯಾಮಿಲಿ ಆಧಾರ್ ಕಾರ್ಡ್ ಅಲ್ಲಿ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯಿಂದ 8147500500 ಈ ಮೊಬೈಲ್ ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು SMS ಮೂಲಕ ಕಳುಹಿಸಬೇಕು.SMS ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ನಿಮಗೆ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ನೀವು ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂಬ ಮೆಸೇಜ್ ಬರುತ್ತದೆ.

Spread positive news

Leave a Reply

Your email address will not be published. Required fields are marked *