PM kissan: 14ನೇ ಕಂತಿನ ಬಿಡುಗಡೆ ದಿನಾಂಕ ಪ್ರಕಟ

ಪಿ ಎಂ ಕಿಸಾನ್ ಯೋಜನೆ ಅಡಿಯಲ್ಲಿ ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮ ಮಾಡುತ್ತದೆ. ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14ನೇ ಕಂತಿನ ಹಣ 2023 ಮೇ ತಿಂಗಳಲ್ಲಿ ಬಿಡಗಡೆ ಆಗಬಹುದು ಎಂಬ ಮಾಹಿತಿ ದೊರೆತಿದೆ.ಬೆಂಗಳೂರು: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Yojana) ಕೇಂದ್ರ ಸರ್ಕಾರ ಈವರೆಗೆ 2,000 ರೂಗಳ 13ಕಂತುಗಳನ್ನು ಬಿಡುಗಡೆ ಮಾಡಿದ್ದು. ಮಾರ್ಚ್ 27ರಂದು ಬೆಳಗಾವಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ 13ನೇ ಕಂತಿನ ಹಣ ಬಿಡುಗಡೆ ಆಗಿರುವುದನ್ನು ಘೋಷಿಸಿದ್ದರು. ಇದೀಗ 14ನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡುತ್ತದೆ. ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14ನೇ ಕಂತಿನ ಹಣ ಮೇ ತಿಂಗಳಲ್ಲಿ ಬಿಡಗಡೆ ಆಗಬಹುದು ಎಂದು ಊಹಿಸಲಾಗಿದ್ದು. ಕರ್ನಾಟಕದಲ್ಲಿ ಮೇ ಎರಡನೇ ವಾರ ಚುನಾವಣೆಗಳು ಇವೆ. ಮೇ 3ನೇ ವಾರದಂದು ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಂದು ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 3 ಬಾರಿ PM ಕಿಸಾನ್ ಯೋಜನೆಯ ಹಣ ರಿಲೀಸ್ ಮಾಡುತ್ತದೆ. ಏಪ್ರಿಲ್ನಿಂದ ಜುಲೈವರೆಗಿನ ಒಂದು ಅವಧಿ, ಆಗಸ್ಟ್ನಿಂದ ನವೆಂಬರ್ವರೆಗಿನ ಇನ್ನೊಂದು ಅವಧಿ, ಹಾಗು ಡಿಸೆಂಬರ್ನಿಂದ ಮಾರ್ಚ್ವರೆಗಿನ ಮತ್ತೊಂದು ಮೂರನೇ ಅವಧಿಯಲ್ಲಿ PM ಕಿಸಾನ್ ಯೋಜನೆಯ ಕಂತಿನ ಹಣ ಬಿಡುಗಡೆ ಆಗುತ್ತದೆ. ಕೇಂದ್ರ ಸರ್ಕಾರ ಒಟ್ಟು 6 ಸಾವಿರ ರೂಗಳನ್ನು ಒಂದು ವರ್ಷದಲ್ಲಿ ಫಲಾನುಭವಿ ರೈತರಿಗೆ ನೀಡುತ್ತದೆ. ಕರ್ನಾಟಕ ಸರ್ಕಾರ ಇದಕ್ಕೆ ಹೆಚ್ಚುವರಿಯಾಗಿ ಇನ್ನೆರಡು ಕಂತುಗಳನ್ನು ನೀಡುತ್ತದೆ. ಅಂದರೆ ಕರ್ನಾಟಕದಲ್ಲಿ ಫಲಾನುಭವಿ ರೈತರ ಖಾತೆಗಳಿಗೆ ಒಂದು ವರ್ಷದಲ್ಲಿ 10,000 ರೂಗಳಷ್ಟು ಹಣ ಜಮೆ ಆಗುತ್ತದೆ.

2019 ಫೆಬ್ರುವರಿಯಲ್ಲಿ ಆರಂಭವಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಸಣ್ಣ ರೈತರ ವ್ಯವಸಾಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒದಗಿಸುವ ಸಹಾಯಧನವಾಗಿದೆ. ಮೊದಲಿಗೆ 5 ಎಕರೆಯೊಳಗಿನ ಜಮೀನು ಹೊಂದಿರುವ ರೈತರಿಗೆ ಮಾತ್ರ ಈ ಯೋಜನೆ ಸೀಮಿತವಾಗಿತ್ತು. ಈಗ ಎಲ್ಲಾ ರೈತರಿಗೂ ವಿಸ್ತರಣೆ ಆಗಿದೆ.

PM ಕಿಸಾನ್ ಯೋಜನೆ ಪಡೆಯಲು ಅರ್ಹ ರೈತರು ಯಾರು?

ಕೃಷಿ ಜಮೀನು ಮಾಲೀಕರಾಗಿರಬೇಕು ಸರ್ಕಾರಿ ನೌಕರಿಯಲ್ಲಿರಬಾರದು, ಪಿಂಚಣಿ ದಾರರಿರಬಾರದು ಶಾಸಕ, ಸಂಸದ, ಮಂತ್ರಿ ಇತ್ಯಾದಿ ಅಧಿಕಾರದಲ್ಲಿರಬಾರದು, ಹಿಂದೆಯೂ ಇದ್ದಿರಬಾರದು ವೈದ್ಯ, ಎಂಜಿನಿಯರ್, ಲಾಯರ್ ಇತ್ಯಾದಿ ವೃತ್ತಿಗಳಲ್ಲಿರಬಾರದು ಆದಾಯ ತೆರಿಗೆ ಪಾವತಿದಾರರಾಗಿರಬಾರದು.

ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸುವುದು ಹೇಗೆ?
ಪಿಎಂ ಕಿಸಾನ್ ಯೋಜನೆಯಲ್ಲಿ ಕೋಟ್ಯಂತರ ರೈತರು ನೊಂದಾಯಿಸಿಕೊಂಡಿದ್ದಾರೆ. ಕೆವೈಸಿ ಪ್ರಕ್ರಿಯೆ ವೇಳೆ ಕೆಲವರ ಹೆಸರು ಕೈಬಿಟ್ಟಿರಬಹುದು. ಅಂಥವರು ಅಥವಾ ಈವರೆಗೂ ಯೋಜನೆ ಪಡೆಯದ ಅರ್ಹ ರೈತರು ಹೊಸದಾಗಿ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳಲು ಅವಕಾಶ ಇದೆ.

ಆನ್ಲೈನ್ ಮೂಲಕವೂ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದು:
ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ http://www.pmkisan.gov.in ಇಲ್ಲಿಗೆ ಹೋಗಿ ಮುಖ್ಯಪುಟದಲ್ಲಿ ಕಾಣುವ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಮೊದಲ ಸಾಲಿನಲ್ಲಿರುವ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡ ಅಲ್ಲಿ ಆಧಾರ್ ನಂಬರ್, ಮೊಬೈಲ್ ನಂಬರ್ ನಮೂದಿಸಿ. ಬಳಿಕ ರಾಜ್ಯವನ್ನು ಆಯ್ಕೆ ಮಾಡಿ ಓಟಿಪಿ ಪಡೆಯಿರಿ. ನಂತರ ಕೇಳಲಾಗುವ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ನಂತರ ಪಿಎಂ ಕಿಸಾನ್ ಅಪ್ಲಿಕೇಶನ್ ಫಾರ್ಮ್ ತುಂಬಿಸಿ ಅದನ್ನು ಸೇವ್ ಮಾಡಿ. ಬೇಕಾದರೆ ಈ ಅರ್ಜಿಯ ಪ್ರಿಂಟೌಟ್ ಪಡೆಯಬಹುದು.

ಆನ್ಲೈನ್ ಮೂಲಕ ಸಾಧ್ಯವಾಗದಿದ್ದರೆ ನಿಮ್ಮ ಗ್ರಾಮದ ಸಮೀಪದ ಪಂಚಾಯಿತಿ ಕೇಂದ್ರಕ್ಕೆ ಹೋಗಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ಜಮೀನು ಪಹಣಿ ನೀಡಿ ಪಿಎಂ ಕಿಸಾನ್ ಯೋಜನೆಗೆ ಹೆಸರು ನೊಂದಾಯಿಸಬಹುದು.
ಪಿಎಂ ಕಿಸಾನ್ ಯೋಜನೆಯಲ್ಲಿ ಫಲಾನುಭವಿ ಪಟ್ಟಿ ವೀಕ್ಷಿಸಬಹುದು . ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ನಲ್ಲಿ ವಿವಿಧ ರೀತಿಯ ಮಾಹಿತಿಯನ್ನು ಪಡೆಯಬಹುದು. ಫಲಾನುಭವಿ ಸ್ಥಿತಿಗತಿ, ಫಲಾನುಭವಿ ಪಟ್ಟಿ ಇತ್ಯಾದಿಯನ್ನು ವೀಕ್ಷಿಸಬಹುದು.

Spread positive news

Leave a Reply

Your email address will not be published. Required fields are marked *