ಪ್ರೀಯ ರೈತರೇ, ಇವತ್ತು ನಾವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಒಂದು ಹೊಸ ಮುಖ್ಯವಾದ ಮಾಹಿತಿ ಬಗ್ಗೆ ಚರ್ಚಿಸೋಣ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 15ನೇ ಕಂತಿನ ಮೊತ್ತವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದ್ದು, ನಮ್ಮ ಕರ್ನಾಟಕ ರಾಜ್ಯದ ಒಟ್ಟು 50.36 ಲಕ್ಷ ರೈತರು ಒಟ್ಟು 1007.26 ಕೋಟಿ ಸಹಾಯಧನವನ್ನು ನೇರ ನಗದು ಪಾವತಿ ಮೂಲಕ ಪಡೆದುಕೊಳ್ಳಲಿದ್ದಾರೆ.
ಮುಖ್ಯವಾಗಿ ಹೇಳಬೇಕೆಂದರೆ ಪಿಎಂ ಕಿಸಾನ್ ಯೋಜನೆ ಹಣವು ಈಗಾಗಲೇ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕೆಲವು ರೈತರಿಗೆ ಇನ್ನೂ ಪಿಎಂ ಕಿಸಾನ್ ಯೋಜನೆ ತಮ್ಮ ಅಪ್ಲಿಕೇಶನ್ ನಂಬರ್ ಗೊತ್ತು ಇಲ್ಲದೆ ಇರುವುದು ಮುಖ್ಯ ಸಂಗತಿ ಆಗಿದೆ. ಹಾಗಾದರೆ ಬನ್ನಿ ಪಿಎಂ ಕಿಸಾನ್ ಯೋಜನೆ ಅಪ್ಲಿಕೇಶನ್ ನಂಬರ್ ತಿಳಿಯುವುದು ಹೇಗೆ ಎಂದು ನೋಡೋಣ.
ಅಪ್ಲಿಕೇಶನ್ ನಂಬರ್ ತಿಳಿದುಕೊಳ್ಳುವುದು ಹೇಗೆ?
• ಮೊದಲಿಗೆ ಗೂಗಲ್ ಓಪನ್ ಮಾಡಿ.
• ನಂತರ ಅಲ್ಲಿ https://pmkisan.gov.in ಎಂಬ ಲಿಂಕ್ ಹಾಕಿ ಸರ್ಚ್ ಮಾಡಬೇಕು.
• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಕೇಳುತ್ತದೆ. ಮೊಬೈಲ್ ನಂಬರ್ ಹಾಕಬೇಕು.
• ನಂತರ ಅಲ್ಲಿ ಒಂದು ಕ್ಯಾಪ್ಚಾ ಅಲ್ಲಿ ಬರೆದ ಅಕ್ಷರಗಳನ್ನು ಹಾಕಬೇಕು.
• ನಂತರ get OTP ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ಲಿಂಕ್ ಇರುವ ನಿಮ್ಮ ಮೊಬೈಲ್ ನಲ್ಲಿ ಬಂದ OTP ಹಾಕಬೇಕು.
• ನಂತರ ಅಲ್ಲಿ ನಿಮಗೆ ನಿಮ್ಮ ಪಿಎಂ ಕಿಸಾನ್ ಯೋಜನೆ ಅಪ್ಲಿಕೇಶನ್ ನಂಬರ್ ಕಾಣಿಸುತ್ತದೆ.
ಏನಿದು ಪಿಎಂ ಕಿಸಾನ್ ಯೋಜನೆ ಅಪ್ಲಿಕೇಶನ್ ನಂಬರ್? ಹೇಗೆ ಪಡೆಯಬೇಕು?
ರೈತರೇ ಪಿಎಂ ಕಿಸಾನ್ ಯೋಜನೆ ಅಪ್ಲಿಕೇಶನ್ ನಂಬರ್ ಎಂಬುದು ಒಂದು ಈ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಾದರೆ ನಿಮಗೆ ಈ ನಂಬರ್ ಅವಶ್ಯಕತೆ ತುಂಬಾ ಇದೆ. ಈ ನಂಬರ್ ಅನ್ನು ನಾವು ಪಿಎಂ ಕಿಸಾನ್ ಯೋಜನೆ ಹೊಸ ಫಾರ್ಮ್ ತುಂಬುವಾಗ ಕೊಡುತ್ತಾರೆ.
ಇದು ಕೂಡ ರೈತರಿಗೆ ಉಪಯುಕ್ತ ಆಗಿದೆ. ರೈತರು ಒಂದು ವೇಳೆ ಈ ಯೋಜನೆಯ ಅಡಿಯಲ್ಲಿ ಹಣ ಬರದೆ ಇದ್ದರೆ ಈ ಅಪ್ಲಿಕೇಶನ್ ನಂಬರ್ ಹಾಕಿ ನಿಮ್ಮ ಹಣದ ಸ್ಥಿತಿ ಬಗ್ಗೆ ತಿಳಿಯಬಹುದು.
ನಿಮಗೆ ಹಣ ಬಂದಿಲ್ಲವೇ, ಸಮಸ್ಯೆ ಇದೆಯೇ?
ಹೌದು ದೇಶದ ಕೆಲವು ರೈತರಿಗೆ ಹಣವೂ ಬರುತ್ತಿಲ್ಲ. ಹಾಗೂ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ನೀವು ಅಧಿಕೃತ ಇಮೇಲ್ ಐಡಿಯಲ್ಲಿ ಸಂಪರ್ಕಿಸಬಹುದು. ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ- 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಹ ಸಂಪರ್ಕಿಸಬಹುದು. ಈ ಯೋಜನೆಗೆ ಸಂಬಂಧಿಸಿದ ನಿಮ್ಮ ಪ್ರತಿಯೊಂದು ಸಮಸ್ಯೆಯನ್ನು ಇಲ್ಲಿಯೂ ಪರಿಹರಿಸಲಾಗುವುದು.