ಜಮೀನಿನ ಪಹಣಿಯನ್ನು ಬಹು ಮಾಲೀಕತ್ವ ಹೊಂದಿದ್ದಾಗ ಅದನ್ನು ತಿದ್ದುಪಡಿ ಮಾಡುವುದು ಹೇಗೆ ಎನ್ನುವುದು ಹಲವು ಜನರ ಪ್ರಶ್ನೆ. ಸಾಮಾನ್ಯವಾಗಿ ಹಳ್ಳಿ ಗಾಡಿನ ರೈತರಿಗೆ ಇದರ ಬಗ್ಗೆ ಮಾಹಿತಿಯೇ ಇರುವುದಿಲ್ಲ, ಹಾಗಾಗಿ ಅದರ ಬಗ್ಗೆ ಬೆಳಕು ಚೆಲುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ. ಇದರಿಂದ ನಾಡಿನ ಕೋಟ್ಯಂತರ ರೈತರಿಗೆ ಅನುಕೂಲ ಆಗಲಿ ಎನ್ನುವುದೇ ಇದರ ಉದ್ದೇಶವಾಗಿದೆ. ಬಹು ಮಾಲೀಕತ್ವದ ಪಹಣಿಯನ್ನು ತಿದ್ದುಪಡಿ ಮಾಡಬೇಕು ಎಂದರೆ ಮೊದಲಿಗೆ ತತ್ಕಾಲ್ ಪೋಡಿ ಬಗ್ಗೆ ಗೊತ್ತಿರಲೇಬೇಕು. ತಾತ್ಕಾಲ್ ಪೋಡಿ ಎಂದರೇನು? ಏಕಮಾಲಿಕತ್ವದ ಪಹಣಿ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು ಅದಕ್ಕಾಗಿ ಅವರು ಕೇಳುವ ದಾಖಲೆಗಳೇನು ಮತ್ತು ಅದರ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಮುಖ್ಯವಾಗಿ ತಾತ್ಕಾಲ ಪೋಡಿಯ ನಿಯಮಗಳು ಹಾಗೂ ಉದ್ದೇಶಗಳು ಏನು ಇರುತ್ತದೆ ಅವುಗಳ ಬಗ್ಗೆ ಕೂಡ ಇದರಲ್ಲಿ ತಿಳಿಸಲಾಗಿದೆ.
ಈಗಿನ ಜನರಲ್ಲಿ ಹಲವರಿಗೆ ತತ್ಕಾಲ್ ಪೋಡಿಯ ಬಗ್ಗೆ ವಿಷಯವೇ ಗೊತ್ತಿರುವುದಿಲ್ಲ. ರೈತರು ತಿಳಿದುಕೊಳ್ಳಲೇಬೇಕಾದ ಪ್ರಮುಖ ವಿಷಯಗಳಲ್ಲಿ ತಾತ್ಕಾಲ್ ಪೋಡಿಯು ಒಂದು. ನಿಮ್ಮ ಪಹಣಿಯನ್ನು ಗಮನಿಸಿ ಕಾಲ ನಂಬರ್ 9ರಲ್ಲಿ ಹಲವಾರು ರೈತರ ಹೆಸರು ಕಾಣುತ್ತದೆ. ಇದರ ಅರ್ಥ ಇಷ್ಟೇ ಜಮೀನನ್ನು ಹಂಚಿಕೊಂಡಿದ್ದಾರೆ ಅವರ ವಿಸ್ತೀರ್ಣಕ್ಕೆ ತಕ್ಕಂತೆ ರೈತರು ಈಗಾಗಲೇ ಅವರ ಕಬ್ಜೆಯಲ್ಲಿ ಹೊಲವನ್ನು ಇಟ್ಟುಕೊಂಡಿರುತ್ತಾರೆ ಎಂದು. ಜೊತೆಗೆ ಅದನ್ನು ಅಳತೆ ಮಾಡಿಲ್ಲ ಹಾಗೂ ಪ್ರತಿ ರೈತರ ವಿಸ್ತೀರ್ಣಕ್ಕೆ ತಕ್ಕಂತೆ ನಕ್ಷೆ ಕೂಡ ಮಾಡಿಲ್ಲ ಎನ್ನುವುದು ಕೂಡ ಇದರಿಂದ ಸ್ಪಷ್ಟ ಆಗುತ್ತದೆ. ಇದನ್ನೇ ಸರಿಪಡಿಸಿಕೊಂಡು ಪ್ರತ್ಯೇಕ ನಕ್ಷೆಯೊಂದಿಗೆ ಹೊಸ ಏಕ ಮಾಲೀಕತ್ವದ ಪಹಣಿ ಪಡೆದುಕೊಳ್ಳುವುದಕ್ಕೆ ಅದನ್ನು ತತ್ಕಲ್ ಪೋಡಿ ಎಂದು ಕರೆಯುತ್ತಾರೆ.
ತತ್ಕಲ್ ಪೋಡಿ ಎಂದರೆ ನೀವು ಸಾಗುವಳಿ ಮಾಡುತ್ತಿರುವ ಜಮೀನಿನ ಭಾಗಕ್ಕೆ ಅಳತೆ ಮಾಡಿ ಹೊಸ ನಕ್ಷೆ ರಚಿಸಿ ಏಕ ಮಾಲೀಕತ್ವದ ಪಹಣಿ ಮಾಡುವ ಕ್ರಮಕ್ಕೆ ಹೀಗೆನ್ನುತ್ತಾರೆ ಎನ್ನಬಹುದು. ಇದನ್ನು ಉದಾಹರಣೆ ಸಮೇತ ವಿವರಿಸಬೇಕು ಎಂದರೆ ಯಾವುದೇ ಒಂದು ಜಮೀನು ಅದರ ಸರ್ವೇ ನಂಬರ್ 100 ಇರುತ್ತದೆ ಎಂದು ಇಟ್ಟುಕೊಳ್ಳೋಣ, ಅದು 1 2 3 4 ಮತ್ತು 5 ಎಂದು ಕ್ರಮವಾಗಿ ಹಿಸ್ಸಾ ಸಂಖ್ಯೆ ಇರುತ್ತದೆ. ಪ್ರತಿಯೊಂದು ಹಿಸ್ಸಾ ಸಂಖ್ಯೆಯು ಪ್ರತ್ಯೇಕವಾದ ಪಹಣಿ ಹೊಂದಿದೆ. ಅದೇ ಇದರಲ್ಲಿ ಐದು ಹಿಸ್ಸಾ ಸಂಖ್ಯೆಯ ಅಡಿಯಲ್ಲೂ ಕೂಡ ಒಂದೇ ಪಹಣಿ ಇರುತ್ತದೆ. ಆದರೆ ಐದು ಹಿಸ್ಸಾ ಸಂಖ್ಯೆಯಲ್ಲಿ ಎರಡು ಜನರು ಅನುಭವದಲ್ಲಿ ಇದ್ದಾರೆ, ಎರಡು ಜನರ ಪ್ರತ್ಯೇಕವಾದ ಪಹಣಿ ಇರುವುದಿಲ್ಲ. ಆದರೆ ಒಂದೇ ಪಹಣಿಯಲ್ಲಿ ಎರಡು ಜನ ರೈತರ ಹೆಸರು ಒಂದೇ ಪಹಣಿಯಲ್ಲಿ ಬಂದಿರುತ್ತದೆ.
ಈ ಎರಡು ಜನ ರೈತರ ಹೆಸರಿನಲ್ಲಿ ಪ್ರತ್ಯೇಕವಾದ ಪಹಣಿ ಬರಬೇಕು ಎಂದರೆ ಅವರ ತತ್ಕಾಲ್ ಪೋಡಿ ಮೂಲಕ ಪ್ರತ್ಯೇಕವಾದ ಪಹಣಿ ಮಾಡಿಸಿಕೊಳ್ಳಲು ಅವಕಾಶ ಇರುತ್ತದೆ. ತಾತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಆನಂತರ ಸಪರೇಟ್ ಆಗಿ ಹೆಸರುಗಳು ಆಗುವಂತೆ ಮಾಡಲು ಮತ್ಯಾವ ಕ್ರಮಗಳನ್ನು ಕೈಗೊಳ್ಳಬೇಕು ಇನ್ನು ಮುಂತಾದ ಈ ವಿಷಯದ ಕುರಿತ ಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ತಪ್ಪದೆ ಪೂರ್ತಿಯಾಗಿ ನೋಡಿ ಹಾಗೂ ಇತರರಿಗೂ ಕೂಡ ಈ ಇಂಫಾರ್ಮೇಷನ್ ತಲುಪುವಂತೆ ಶೇರ್ ಮಾಡಿ ಅನುಕೂಲ ಮಾಡಿ.