Karnataka Free Electricity: ಗೃಹಜ್ಯೋತಿ ಹೊಸ ನಿಯಮ.. ಇನ್ನು ಎಲ್ಲರಿಗೂ ಸಿಗಲ್ಲ ಉಚಿತ 200 ಯುನಿಟ್ ವಿದ್ಯುತ್ ಬೆಂಗಳೂರು: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಉಚಿತ ವಿದ್ಯುತ್ ಯೋಜನೆ (Free Electricity Scheme) ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಬಹುದೊಡ್ಡ ಸಹಾಯ ಮಾಡಿದೆ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಕರೆಂಟ್ ಬಿಲ್ ಕಟ್ಟುತ್ತಿದ್ದ ಜನರಿಗೆ ಇದು ಬಿಗ್ ರಿಲೀಫ್ ನೀಡಿದೆ.ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ತನಕ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಸರ್ಕಾರ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಎಲ್ಲರೂ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.
ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ Free Electricity Scheme ಅಥವಾ ಗೃಹಜ್ಯೋತಿ ಯೋಜನೆಯೂ ಒಂದಾಗಿದೆ. ಇದರ ಮುಖ್ಯ ಉದ್ದೇಶ ಜನರ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು. ಈ ಯೋಜನೆಯಡಿ ಮನೆಗಳಿಗೆ ತಿಂಗಳಿಗೆ 200 ಯೂನಿಟ್ ತನಕ ಉಚಿತ ವಿದ್ಯುತ್ ನೀಡಲಾಗುತ್ತದೆ.
ಗೃಹಜ್ಯೋತಿ ಯೋಜನೆಯ ಮೂಲಕ ಸರ್ಕಾರ ನೇರವಾಗಿ ವಿದ್ಯುತ್ ಕಂಪನಿಗಳಿಗೆ ಸಬ್ಸಿಡಿ ನೀಡುತ್ತದೆ. ಆದ್ದರಿಂದ ಅರ್ಹ ಕುಟುಂಬಗಳಿಗೆ ಶೂನ್ಯ ವಿದ್ಯುತ್ ಬಿಲ್ ಬರುತ್ತದೆ. ಇತ್ತೀಚೆಗೆ ಸರ್ಕಾರ ಕೆಲವು ಪ್ರಮುಖ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.
ಗೃಹಜ್ಯೋತಿ ಯೋಜನೆಯಲ್ಲಿ ಬದಲಾದ ನಿಯಮಗಳು:
1. 200 ಯೂನಿಟ್ ಮೀರಿದರೆ ಸಂಪೂರ್ಣ ಬಿಲ್ ಕಟ್ಟಬೇಕು: ಸರ್ಕಾರ ಜಾರಿಗೆ ತಂದ ಹೊಸ ನಿಯಮದ ಪ್ರಕಾರ, ನೀವು ಒಂದು ತಿಂಗಳಲ್ಲಿ 200 ಯೂನಿಟ್ ಮೀರಿದರೆ ಉಚಿತ ವಿದ್ಯುತ್ ಸಿಗುವುದಿಲ್ಲ. ನೀವು ಸಂಪೂರ್ಣ ಬಿಲ್ ಕಟ್ಟಬೇಕು.
2. ಸರಾಸರಿ ಬಳಕೆಯ ಆಧಾರದಲ್ಲಿ ಅರ್ಹತೆ: ನಿಮ್ಮ ಕಳೆದ 12 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಆಧರಿಸಿ ಉಚಿತ ಯೂನಿಟ್ ನಿರ್ಧರಿಸಲಾಗುತ್ತದೆ. ಉದಾಹರಣೆ: ಸರಾಸರಿ ಬಳಕೆ = 150 ಯೂನಿಟ್, ಉಚಿತ ವಿದ್ಯುತ್ = ಸುಮಾರು 165 ಯೂನಿಟ್. ಇದಕ್ಕಿಂತ ಹೆಚ್ಚು ಬಳಸಿದರೆ ಹೆಚ್ಚುವರಿ ಯೂನಿಟ್‌ಗೆ ಹಣ ಕಟ್ಟಬೇಕು.
3. ಹೊಸ ಮನೆಗಳಿಗೆ ಕಡಿಮೆ ಯೂನಿಟ್ ಆರಂಭದಲ್ಲಿ ಸಿಗಬಹುದು: ಹೊಸ ಮನೆ ಅಥವಾ ಹೊಸ ಮೀಟರ್ ಇದ್ದರೆ ಮೊದಲಿಗೆ ಸುಮಾರು 53-59 ಯೂನಿಟ್ ಮಾತ್ರ ಉಚಿತವಾಗಿ ಸಿಗಬಹುದು. ನಂತರ 1 ವರ್ಷದ ಸರಾಸರಿ ಬಳಕೆಯ ಆಧಾರದಲ್ಲಿ ಹೆಚ್ಚಿಸಲಾಗುತ್ತದೆ.
4. Aadhaar ಲಿಂಕ್ ಮಾಡುವುದು ಕಡ್ಡಾಯ: ಈ ಯೋಜನೆಯ ಲಾಭ ಪಡೆಯಲು ನಿಮ್ಮ ವಿದ್ಯುತ್ ಖಾತೆಯನ್ನು Aadhaar ಜೊತೆ ಲಿಂಕ್ ಮಾಡಬೇಕು. ಈ ಯೋಜನೆ ಕೇವಲ ಮನೆ ಬಳಕೆಗೆ ಮಾತ್ರ ಅನ್ವಯಿಸುತ್ತದೆ. ಅಂಗಡಿ ಅಥವಾ ವ್ಯವಹಾರಗಳಿಗೆ ಅನ್ವಯಿಸುವುದಿಲ್ಲ.
ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಇರುವ ಷರತ್ತುಗಳು:
ಕರ್ನಾಟಕ ನಿವಾಸಿಯಾಗಿರಬೇಕು
ಮನೆ ಬಳಕೆಯ ವಿದ್ಯುತ್ ಮೀಟರ್ ಇರಬೇಕು
ಪ್ರತಿ ತಿಂಗಳ ಸರಾಸರಿ ಬಳಕೆ 200 ಯೂನಿಟ್ ಒಳಗೆ ಇರಬೇಕು
Aadhaar ಲಿಂಕ್ ಮಾಡಿರಬೇಕು
ಉಚಿತ್ ವಿದ್ಯುತ್ ಬಿಲ್‌ಗೆ ಅರ್ಜಿ ಸಲ್ಲಿಸುವ ವಿಧಾನ
Seva Sindhu ವೆಬ್‌ಸೈಟ್ ತೆರೆಯಿರಿ
Gruha Jyothi Scheme ಆಯ್ಕೆ ಮಾಡಿ
Aadhaar ಮತ್ತು Account ID ನಮೂದಿಸಿ
ಅರ್ಜಿ ಸಲ್ಲಿಸಿ
ನಂತರ ನಿಮ್ಮ ವಿದ್ಯುತ್ ಬಿಲ್ಲಿನಲ್ಲಿ ಲಾಭ ಕಾಣಬಹುದು
Free Electricity Scheme ಕರ್ನಾಟಕ ಸರ್ಕಾರದ ಅತ್ಯಂತ ಉಪಯುಕ್ತ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯ ಮೂಲಕ ಲಕ್ಷಾಂತರ ಕುಟುಂಬಗಳು ವಿದ್ಯುತ್ ಬಿಲ್ ಕಟ್ಟುವ ಆತಂಕದಿಂದ ಮುಕ್ತರಾಗಿದ್ದಾರೆ. ಆದರೆ ಹೊಸ ನಿಯಮಗಳ ಪ್ರಕಾರ 200 ಯೂನಿಟ್ ಮೀರಿದರೆ ಸಂಪೂರ್ಣ ಬಿಲ್ ಕಟ್ಟಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ವಿದ್ಯುತ್ ಬಳಕೆಯನ್ನು ನಿಯಂತ್ರಿಸಬೇಕು. Aadhaar ಲಿಂಕ್ ಮಾಡುವುದು ಮತ್ತು ಸರಿಯಾದ ಮಾಹಿತಿ ನೀಡುವುದು ಅತ್ಯಗತ್ಯವಾಗಿದೆ. ಅಲ್ಲದೇ ನಿಮ್ಮ ಮೀಟರ್‌ನ ವರ್ಷದ ವಿದ್ಯುತ್ ಬಳಕೆಯ ಸರಾಸರಿಯನ್ನು ತೆಗೆದು ಈ ವರ್ಷದ ಫ್ರೀ ವಿದ್ಯುತ್ ನೀಡಲಾಗುತ್ತದೆ. ಈ ಯೋಜನೆಯ ಲಾಭವನ್ನು ಪಡೆಯಲು ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು.

