ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚೆ ಮಾಡೋಣ. ರೈತರಿಗೆ ಎಫ್ ಐಡಿ ಎಷ್ಟು ಮುಖ್ಯ? ಎಫ್ ಐಡಿ ಇರದಿದ್ದರೆ ರೈತರಿಗೆ ಹೇಗೆಲ್ಲಾ ಸೌಲಭ್ಯಗಳು ಸಿಗಲ್ಲ? ಇದರಿಂದ ರೈತರಿಗೆ ಉಪಯೊಗ ಏನು? ಸಂಪೂರ್ಣ ಮಾಹಿತಿ ಪಡೆಯೋಣ.
ಕರ್ನಾಟಕ ಸರ್ಕಾರವು ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (FRUITS) ಪೋರ್ಟಲ್ ಯೋಜನೆಯನ್ನು ಪ್ರಾರಂಭಿಸಿದೆ. ರೈತರು ಸರ್ಕಾರದ ಯಾವುದೇ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು, ಸುಲಭವಾಗಿ ಸಾಲ ಸೌಲಭ್ಯ ಪಡೆಯಲು ಫ್ರೂಟ್ಸ್ ಪೋರ್ಟ್‌ಲ್ ನೆರವಾಗಲಿದೆ. ಡಿಪಿಎಆರ್-ಎಆರ್ (ಇ-ಆಡಳಿತ ಇಲಾಖೆ) ಸಹಯೋಗದೊಂದಿಗೆ ಎನ್ಐಸಿ ಅಭಿವೃದ್ಧಿಪಡಿಸಿದ ಫ್ರೂಟ್ಸ್ ಪೋರ್ಟಲ್ ಅರ್ಜಿ-ಪರಿಶೀಲನೆ-ಅನುಮೋದನೆ-ಪಾವತಿ ಪ್ರಕ್ರಿಯೆಯನ್ನು ಒಳಗೊಳ್ಳದೆ ಅರ್ಹತೆ ಆಧಾರಿತ ಪ್ರಯೋಜನ ವಿತರಣೆಯನ್ನು ಸುಗಮಗೊಳಿಸುತ್ತದೆ.
ರೈತರಿಗೆ ಬರ ಪರಿಹಾರ ಈಗಾಗಲೇ ಮೊದಲನೇ ಕಂತು ಹಣ ಬಿಡುಗಡೆ ಮಾಡಿದ್ದು ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರವು ಒಂದು ಹೆಜ್ಜೆ ಇಟ್ಟಿದೆ. Check your FID status in mobile :- ಇಂದಿನ ಲೇಖನದಲ್ಲಿ ನಾವು ನೀವು ಈಗಾಗಲೇ ಫ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಹೊಲದ ವಿಸ್ತೀರ್ಣವನ್ನು ದಾಖಲಿಸಿದ್ದೀರಿ. (ನಿಮ್ಮ ಹೊಲದ ಎಷ್ಟು ಸರ್ವೇ ನಂಬರ್ ಗಳು ಇದರಲ್ಲಿ ದಾಖಲೆಯಾಗಿ ನೋಡಿ👇🏻).
ಎನ್.ಡಿ.ಆರ್.ಎಫ್.ನಿಂದ(NDRF) ಬಿಡುಗಡೆ ಮಾಡಿದ 3454.22 ಕೋಟಿ ರೂ.ಗಳನ್ನು ಅರ್ಹ ರೈತರಿಗೆ ತಲುಪಿಸುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. 3454 ಕೋಟಿ ಬರ ಪರಿಹಾರ ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ. ಆದರೆ ರೈತರೇ ಬಹುಮುಖ್ಯವಾದ ಮಾಹಿತಿ ನಿಮ್ಮ ಹೊಲದ ಪಹಣಿಯೊಂದಿಗೆ ಫ್ರೂಟ್ಸ್ ಐಡಿ ಜೋಡಣೆಯಾಗುವುದು ಕಡ್ಡಾಯ. ಒಂದು ವೇಳೆ ನಿಮ್ಮ ಹೊಲದ ಪಹಣಿಯ ಜೊತೆ ಫ್ರೂಟ್ಸ್ ಐಡಿ ಜೋಡಣೆಯಾಗದಿದ್ದರೆ ನಿಮಗೆ ಪರಿಹಾರ ಹಣ ಸಿಗುವುದಿಲ್ಲ ತಿಳಿಯಿರಿ ರೈತರೇ, ನಿಮ್ಮ ಹೊಲದ ಇಷ್ಟು ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿದ್ದೀರಾ ಇಲ್ಲವಾ ಎಂಬುದನ್ನು ಇಲ್ಲಿ ಚೆಕ್ ಮಾಡಿಕೊಳ್ಳಿ.
ಕರ್ನಾಟಕ ಸರ್ಕಾರವು ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (FRUITS) ಪೋರ್ಟಲ್ ಯೋಜನೆಯನ್ನು ಪ್ರಾರಂಭಿಸಿದೆ. ರೈತರು ಸರ್ಕಾರದ ಯಾವುದೇ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು, ಸುಲಭವಾಗಿ ಸಾಲ ಸೌಲಭ್ಯ ಪಡೆಯಲು ಫ್ರೂಟ್ಸ್ ಪೋರ್ಟ್‌ಲ್ ನೆರವಾಗಲಿದೆ. ಡಿಪಿಎಆರ್-ಎಆರ್ (ಇ-ಆಡಳಿತ ಇಲಾಖೆ) ಸಹಯೋಗದೊಂದಿಗೆ ಎನ್ಐಸಿ ಅಭಿವೃದ್ಧಿಪಡಿಸಿದ ಫ್ರೂಟ್ಸ್ ಪೋರ್ಟಲ್ ಅರ್ಜಿ-ಪರಿಶೀಲನೆ-ಅನುಮೋದನೆ-ಪಾವತಿ ಪ್ರಕ್ರಿಯೆಯನ್ನು ಒಳಗೊಳ್ಳದೆ ಅರ್ಹತೆ ಆಧಾರಿತ ಪ್ರಯೋಜನ ವಿತರಣೆಯನ್ನು ಸುಗಮಗೊಳಿಸುತ್ತದೆ.
ಸರ್ಕಾರದ ಸೌಲಭ್ಯ ಹಾಗೂ ಪರಿಹಾರ ಮತ್ತು ಬೆಳೆ ವಿಮೆ ಪಡೆದುಕೊಳ್ಳಲು
FID farmer information details ಮಾಡಿಸುವುದು ಕಡ್ಡಾಯವಾಗಿದ್ದು ಈ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ನಿಮ್ಮ ಗ್ರಾಮ ಲೆಕ್ಕಿಗ (ತಲಾಟಿ) ಕಚೇರಿಗೆ ಭೇಟಿ ನೀಡಿ ನಿಮ್ಮ ಎಲ್ಲಾ ಪಹಣಿ/RTC (ಉತಾರಿ) ನಿಮ್ಮ FID ಗೇ ಲಿಂಕ್ ಆಗಿದಿಯೋ ಇಲ್ಲವೋ ಎಂದ ಖಚಿತ ಪಡಿಸಿಕೊಳ್ಳಿ.
ಎನ್ ಡಿಆರ್‌ಎಫ್(NDRF) ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತವನ್ನು ಮೇ 2 ರಂದು ಒಟ್ಟು 40810 ರೈತರಿಗೆ 2038.91 ಲಕ್ಷ ರೂ.ಗಳ ಇನ್ಪುಟ್ (infut) ಸಬ್ಸಿಡಿಯನ್ನು ಜಮೆ ಮಾಡಲು ಅನುಮೊದನೆ ನೀಡಲಾಗಿದ್ದು ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಜೋಡಣೆಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಿರುತ್ತಾರೆ. ಯಾವ ರೈತರು ಆಧಾರ್ ಕಾರ್ಡ್ ಲಿಂಕ್ ಇರುತ್ತದೆ ಅವರಿಗೆ ಮಾತ್ರ ಬರ ಪರಿಹಾರ ಹಣ ಬರುತ್ತದೆ.
ಇನ್ನೂಅದೇ ರೀತಿ ಸರ್ಕಾರವು ಈಗಾಗಲೇ ಅರ್ಹ ರೈತರಿಗೆ ಬರ ಪರಿಹಾರ ತಲುಪಿಸಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಕುರಿತ ಪಟ್ಟಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ,” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ರೈತರು ಸಂಬಂಧಿ ಸಿದ ಗ್ರಾಮ ಪಂಚಾಯಿತಿಗಳಲ್ಲಿ ಪಟ್ಟಿ ಪರಿಶೀಲಿಸ ಬಹುದು. ಹೆಸರು ಬಿಟ್ಟು ಹೋಗಿದ್ದರೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕಂದಾಯ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ ಸೇರ್ಪಡೆ ಮಾಡಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.

