ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 22ನೇ ಕಂತಿನ ಹಣ ಯಾವಾಗ ಬರಲಿದೆ

ಕೇಂದ್ರ ಸರ್ಕಾರವು ಪರಿಚಯಿಸುವ ಪ್ರಮುಖ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಹ ಪ್ರಮುಖವಾಗಿದೆ. ಇದು ದೇಶದ ಲಕ್ಷಾಂತರ ಜನ ರೈತರಿಗೆ ಆರ್ಥಿಕವಾಗಿ ನೆರವಾಗಿದೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಇಂದಿಗೂ ಕೋಟ್ಯಾಂತರ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ.

ಇದೀಗ ಭಾರತದ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 22ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.

ಇಂದಿಗೂ ಭಾರತದಲ್ಲಿ ಮಳೆಯಾಧಾರಿತ ಕೃಷಿ ಮುಂದುವರಿದಿದೆ. ರೈತರು ಅಕಾಲಿಕ ಮಳೆ, ಬರ ಮತ್ತು ಇತರ ನೈಸರ್ಗಿಕ ವಿಕೋಪಗಳಂತಹ ಗಮನಾರ್ಹ ಸವಾಲುಗಳನ್ನು ಕೃಷಿಯಲ್ಲಿ ಎದುರಿಸುತ್ತಿದ್ದಾರೆ. ಈ ಕಠಿಣ ಪರಿಸ್ಥಿತಿಗಳು ರೈತರು ದೈಹಿಕ ಪರಿಶ್ರಮದ ಜೊತೆ ಜೊತೆ ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಆರ್ಥಿಕ ತೊಂದರೆಗಳನ್ನು ನಿವಾರಿಸಲು ಹಾಗೂ ರೈತರಿಗೆ ಆರ್ಥಿಕ ಸಹ ಮಾಡುವ ಉದ್ದೇಶದಿಂದ ಕೇಂದ್ರ ಬಿಜೆಪಿ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿತು. ಪ್ರಸ್ತುತ ಈ ಯೋಜನೆಯು ದೇಶದ ಕೋಟ್ಯಾಂತರ ಜನ ರೈತರಿಗೆ ವರದಾನವಾಗಿದೆ. ಕೃಷಿ ಸಲಕರಣೆಗಳು, ಬಿತ್ತನೆ ಬೀಜಗಳು ಮತ್ತು ರಸಗೊಬ್ಬರಗಳನ್ನು ಖರೀದಿಸಲು ಸೇರಿದಂತೆ ಹಲವು ಕೃಷಿ ಸಂಬಂಧಿತ ಖರ್ಚುಗಳಿಗೆ ಈ ಯೋಜನೆಯ ಹಣವು ಸಹಕಾರಿಯಾಗಿದೆ.

ಇದೀಗ ಕಿಸಾನ್ ಸಮ್ಮಾನ್ ನಿಧಿಯ 22ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದು, ಇದರ ಬಗ್ಗೆ ಅಪ್ಡೇಟ್ಸ್‌ ಬಂದಿದೆ. ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ 6,000 ರೂ. ನೇರ ಹಣ ವರ್ಗಾವಣೆ ಮಾಡಲಾಗುತ್ತಿದೆ. ಈಗ ದೇಶಾದ್ಯಂತ ಫಲಾನುಭವಿ ರೈತರು ಯೋಜನೆಯ ಮುಂದಿನ 22 ನೇ ಕಂತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಎಷ್ಟು ಹಣ ರೈತರಿಗೆ ಸಿಗುತ್ತದೆ ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕವಾಗಿ ಒಟ್ಟು 6,000 ರೂ. ಸಹಾಯವನ್ನು ನೀಡುತ್ತದೆ. ಸಂಪೂರ್ಣ ಮೊತ್ತವನ್ನು ಏಕಕಾಲದಲ್ಲಿ ವಿತರಿಸುವ ಬದಲು ಈ ಹಣವನ್ನು ವರ್ಷವಿಡೀ ತಲಾ 2,000 ರೂಪಾಯಿಯಂತೆ ಮೂರು ಪ್ರತ್ಯೇಕ ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವುದರಿಂದ ಇದರಲ್ಲಿ ಯಾವುದೇ ಮಧ್ಯಮ ವರ್ಗದವರು ಭಾಗಿಯಾಗುವುದಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣದಿಂದ ರೈತರು ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು, ದೊಡ್ಡ ಮತ್ತು ಸಣ್ಣ ವರ್ಗದ ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ. ಇನ್ನು ಈ ಬಾರಿಯ 22 ನೇ ಕಂತಿನ ಹಣವು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 2,000 ರೂ. ಮೊತ್ತ ಜಮೆ ಆಗಲಿದೆ.

PM Kisan Samman Nidhi ಫೆ. 22ನೇ ಕಂತಿನ ಹಣದ ನಿರೀಕ್ಷೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ನಿಯಮಗಳು ಮತ್ತು ದಾಖಲೆಗಳ ಆಧಾರದ ಮೇಲೆ, ರೈತರಿಗೆ ಪ್ರತಿ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರತಿ ಕಂತನ್ನು ಸರಿಸುಮಾರು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಇದಕ್ಕೂ ಮೊದಲು, ಯೋಜನೆಯ 21 ನೇ ಕಂತನ್ನು ಕಳೆದ ವರ್ಷ ನವೆಂಬರ್ 19 ರಂದು ರೈತರ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಮುಂದಿನ ಕಂತಿನ ನಾಲ್ಕು ತಿಂಗಳ ಅವಧಿ ಇದೇ ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಹೀಗಾಗಿ, ಕೇಂದ್ರ ಸರ್ಕಾರವು ಫೆಬ್ರವರಿಯಲ್ಲಿ 22 ನೇ ಕಂತಿನ ಹಣವನ್ನು ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ಆದಾಗ್ಯೂ ಈ ಕಂತಿನ ಹಣವನ್ನು ಫೆಬ್ರವರಿ ಯಾವ ವಾರದಂದು ಬಿಡುಗಡೆ ಮಾಲಾಗುತ್ತದೆ ಎನ್ನುವ ಬಗ್ಗೆ ಇನ್ನಷ್ಟೇ ಕೇಂದ್ರ ಸರ್ಕಾರವು ಮಾಹಿತಿ ಹಂಚಿಕೊಳ್ಳಬೇಕಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಕೆವೈಸಿ ಕಡ್ಡಾಯ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಕೆವೈಸಿ ಕಡ್ಡಾಯ ಮಾಡಲಾಗಿದೆ. ಅರ್ಹ ರೈತರಿಗೆ ಈ ಯೋಜನೆಯನ್ನು ಮುಟ್ಟಿಸುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನು ಕಡ್ಡಾಯ ಮಾಡಲಾಗಿದೆ. ಈ ಯೋಜನೆಯ ಮುಂದಿನ ಕಂತು ಸಂಪೂರ್ಣವಾಗಿ ಅರ್ಹ ರೈತರಿಗೆ ಮಾತ್ರ ತಲುಪಲಿದೆ. ಇದರಲ್ಲಿ ಪ್ರಮುಖವಾಗಿ ಇ-ಕೆವೈಸಿ ಸೇರಿದೆ. ಇದು ಪ್ರತಿಯೊಬ್ಬ ಫಲಾನುಭವಿಗೆ ಕಡ್ಡಾಯವಾಗಿದೆ. ಇದರಲ್ಲಿ ಭೂ ಪರಿಶೀಲನೆ, ಅಂದರೆ, ಭೂ ದಾಖಲೆಗಳ ಪರಿಶೀಲನೆಯನ್ನು ಸಹ ಆ ರೈತರಿಗೆ ಪೂರ್ಣಗೊಳಿಸಬೇಕು. ಅಲ್ಲದೇ ರೈತರು ಬ್ಯಾಂಕ್ ಖಾತೆಯಲ್ಲಿ ಡಿಬಿಟಿ (ನೇರ ಪ್ರಯೋಜನ ವರ್ಗಾವಣೆ) ಆಯ್ಕೆಯನ್ನು ಸಕ್ರಿಯಗೊಳಿಸಿರಬೇಕು ಎಂದು ಹೇಳಲಾಗಿದೆ.

Spread positive news

Leave a Reply

Your email address will not be published. Required fields are marked *