ಪ್ರೀಯ ಸಾರ್ವಜನಿಕರೇ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮಧ್ಯಂತರ ಬಜೆಟ್ ಸೇರಿದಂತೆ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ.ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷದ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಿದ್ದಾರೆ. ಗಮನಾರ್ಹವಾಗಿ, 2019 ರಲ್ಲಿ ಸೀತಾರಾಮನ್ ತಮ್ಮ ಮೊದಲ ಬಜೆಟ್ ಮಂಡಿಸಿದಾಗ, ಅವರು ಚರ್ಮದ ಬ್ರೀಫ್‌ಕೇಸ್ ಬದಲಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ ಲೆಡ್ಜರ್ ಅನ್ನು ಹೊತ್ತೊಯ್ದಿದ್ದರು. 2017 ರಿಂದ, ಫೆಬ್ರವರಿ 1 ರಂದು ಬಜೆಟ್ ಅನ್ನು ಮಂಡಿಸಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಕೇಂದ್ರ ಬಜೆಟ್ ಅನ್ನು ಭಾನುವಾರದಂದು ಮಂಡಿಸಿದ್ದಾರೆ.
ಐಟಿಆರ್ ರಿಟರ್ನ್ಸ್ಗಳನ್ನು ಸಲ್ಲಿಸಲು ಜುಲೈ 31ರವರೆಗೂ ಅವಕಾಶ, ಐಟಿಆರ್ ರಿಟರ್ನ್ಸ್ ಸಲ್ಲಿಸಲು ಜುಲೈ 31ರವರೆಗೂ ಅವಕಾಶ ನೀಡಲಾಗಿದೆ. ಮೊದಲು ಡಿಸೆಂಬರ್ 31 ಆಗಿತ್ತು.
ಮದ್ಯ, ಬೀಡಿ, ಔಷಧಿ ಮತ್ತು ಶೂಗಳು ಅಗ್ಗವಾಗಲಿವೆ:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ. ಮದ್ಯ ಮತ್ತು ಸಿಗರೇಟ್‌ಗಳು ಅಗ್ಗವಾಗಲಿವೆ. ಶೂಗಳು ಸಹ ಅಗ್ಗವಾಗಲಿವೆ. ಜವಳಿ ರಫ್ತು ಕೂಡ ಅಗ್ಗವಾಗಲಿದೆ. ಬ್ಯಾಟರಿಗಳು ಸಹ ಅಗ್ಗವಾಗಲಿವೆ ಎಂದರು.
ಷೇರು ಮಾರುಕಟ್ಟೆ ನಿರಾಶೆ –
ಬಜೆಟ್ ಬಗ್ಗೆ ಸರ್ಕಾರಕ್ಕೆ ಬಂದ ಮೊದಲ ಪ್ರತಿಕ್ರಿಯೆ ಎಂದರೆ ಮಾರುಕಟ್ಟೆಗಳು ನಿರಾಶಾದಾಯಕವಾಗಿವೆ. ಸೆನ್ಸೆಕ್ಸ್ 1600 ಪಾಯಿಂಟ್‌ಗಳಿಗೂ ಹೆಚ್ಚು ಮತ್ತು ನಿಫ್ಟಿ 600 ಪಾಯಿಂಟ್‌ಗಳಷ್ಟು ಕುಸಿದಿದೆ.
ರಕ್ಷಣಾ ಬಜೆಟ್ ಬರೋಬ್ಬರಿ 7.85 ಲಕ್ಷ ಕೋಟಿಗೆ ಏರಿಕೆ
ಬಜೆಟ್‌ನಲ್ಲಿ 2026- 27ನೇ ಹಣಕಾಸು ವರ್ಷದಲ್ಲಿ ಆಧುನೀಕರಣಕ್ಕಾಗಿ ಭಾರತದ ಸೇನೆಗೆ 2.19 ಲಕ್ಷ ಕೋಟಿ ರೂ.ಗಳನ್ನು ನೀಡಲಾಗಿದೆ. ಇದು ಶೇ. 21.84 ರಷ್ಟು ಹೆಚ್ಚಳವಾಗಿದೆ.
ಸೆಮಿಕಂಡಕ್ಟರ್ ಮಿಷನ್ ವಿಸ್ತರಣೆ – 40 ಸಾವಿರ ಕೋಟಿ ರೂ. ಮೀಸಲು, ಹೆಚ್ಚುವರಿ 10 ಸಾವಿರ ಕೋಟಿ ಘೋಷಣೆ.
ಮೊಬೈಲ್ ಬೆಲೆ ಇಳಿಕೆ, ಮದ್ಯ ದುಬಾರಿ
ಯಾವುದು ಅಗ್ಗ?
ಚರ್ಮದ ಉತ್ಪನ್ನಗಳು, ಮೊಬೈಲ್ ಫೋನ್‌ಗಳು, ಇವಿ ಬ್ಯಾಟರಿಗಳು, ಮೈಕ್ರೋವೇವ್ ಓವನ್, 17 ಕ್ಯಾನ್ಸರ್ ಔಷಧಿಗಳು, ಸೌರ ಫಲಕಗಳು ಅಗ್ಗವಾಗಲಿವೆ.
ದುಬಾರಿ ಯಾವುದು?
ಮದ್ಯ, ಸಿಗರೇಟ್
ಹಿರಿಯ ನಾಗರಿಕರಿಗೆ ಮತ್ತಷ್ಟು ಗಿಫ್ಟ್?
ಹಿರಿಯ ನಾಗರಿಕರಿಗೆ ಬಜೆಟ್‌ನಲ್ಲಿ ಬಂಪರ್ ನಿರೀಕ್ಷೆ, ಐಟಿ ಕಾಯ್ದೆಯ ಸೆಕ್ಷನ್ 80 ಅಡಿಯಲ್ಲಿ ಇನ್ನಷ್ಟು ವಿನಾಯ್ತಿ. ಬ್ಯಾಂಕ್, ಪೋಸ್ಟ್ ಆಫೀಸ್‌ನಲ್ಲಿನ ಠೇವಣಿಗಳ ಮೇಲಿನ ಬಡ್ಡಿಗೆ ಸದ್ಯ 50,000ವರೆಗೆ ಕಡಿತ. ಈ ಮಿತಿಯನ್ನು 1 ಲಕ್ಷ ರೂಪಾಯಿವರೆಗೆ ಏರಿಸೋ ಸಾಧ್ಯತೆ. 3 ಲಕ್ಷದವರೆಗಿನ ತೆರಿಗೆ ವಿನಾಯ್ತಿಯನ್ನು ಹೆಚ್ಚಿಸಬಹುದು.

