ಬಿಮಾಸಖಿ ಯೋಜನೆ : ಸಾರ್ವಜನಿಕರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ನಿಮಗೆ ಈಗಾಗಲೇ ತಿಳಿದಿರುವ ಹಾಗೆ ಭಾರತೀಯ ಜೀವ ವಿಮಾ ನಿಗಮ (LIC)ವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಪ್ರಮುಖವಾದ ಒಂದು ಯೋಜನೆ “ಬಿಮಾ ಸಾಕಿ ಯೋಜನೆ” (Bima Sakhi Yojana) ಆಗಿದೆ. ಈ ಯೋಜನೆಯ ಉದ್ದೇಶ ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಸುವುದರ ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ವಿಮೆಯ ಮಹತ್ವವನ್ನು ತಲುಪಿಸುವುದು.
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಯಿಂದ ಮಹಿಳೆಯರಿಗೆ ಪ್ರಾರಂಭಿಸಲಾದ ಒಂದು ಸಬಲೀಕರಣ ಉಪಕ್ರಮವಾಗಿದ್ದು, ಈ ಯೋಜನೆಯಡಿ ಅರ್ಹ ಮಹಿಳೆಯರನ್ನು ಎಲ್ಐಸಿ ಏಜೆಂಟ್ಗಳಾಗಿ ನೇಮಿಸಿ ತರಬೇತಿ ನೀಡಲಾಗುತ್ತದೆ. ಈ ಯೋಜನೆಯು ಮಹಿಳೆಯರಿಗೆ ವಿಮಾ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಆದಾಯ ಗಳಿಸಲು, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಮಾ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ.
ಯೋಜನೆಯ ಮುಖ್ಯ ಉದ್ದೇಶಗಳು –
* ಮಹಿಳಾ ಸಬಲೀಕರಣ: ಮಹಿಳೆಯರಿಗೆ ಹಣಕಾಸು ಸೇವಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ನೀಡಿ, ಅವರನ್ನು ಸಬಲೀಕರಿಸುವುದು.
* ವಿಮಾ ಜಾಗೃತಿ: ಗ್ರಾಮೀಣ ಪ್ರದೇಶಗಳಲ್ಲಿ ವಿಮೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ವಿಮಾ ಉತ್ಪನ್ನಗಳನ್ನು ಜನರಿಗೆ ತಲುಪಿಸುವುದು.
* ಆದಾಯದ ಅವಕಾಶ: ಎಲ್ಐಸಿ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುವ ಮೂಲಕ ಕಮಿಷನ್ ಮತ್ತು ನಿರ್ದಿಷ್ಟ ಸ್ಟೈಫಂಡ್ ಗಳಿಸುವ ಅವಕಾಶ ಕಲ್ಪಿಸುವುದು.
ಎಲ್ಐಸಿಯ ಬಿಮಾ ಸಖಿ ಯೋಜನೆಯಲ್ಲಿ ನೀವು ಎಷ್ಟು ಹಣವನ್ನು ಗಳಿಸಬಹುದು?
ಈ ಯೋಜನೆಯಡಿ ಆಯ್ಕೆಯಾದ ಮಹಿಳಾ ಏಜೆಂಟರು ತಮ್ಮ ಕಾರ್ಯಕ್ಷಮತೆಯನ್ನು ಆಧರಿಸಿ ಮೊದಲ ಮೂರು ವರ್ಷಗಳವರೆಗೆ ಮಾಸಿಕ ಸ್ಟೈಫಂಡ್ ಪಡೆಯಲಿದ್ದಾರೆ. ಮೊದಲ ವರ್ಷದಲ್ಲಿ ಪ್ರತಿ ತಿಂಗಳು 7,000 ರೂ. ಸ್ಥಿರ ಸ್ಟೈಫಂಡ್ ದೊರೆಯಲಿದೆ.
ಯಾರೆಲ್ಲ ಅರ್ಜಿ ಸಲ್ಲಿಸುವಂತಿಲ್ಲ?
ಈಗಾಗಲೇ ಎಲ್ಐಸಿ ಏಜೆಂಟರಾಗಿರುವವರು ಅಥವಾ ನೌಕರರ ಸಂಬಂಧಿಕರು ಅರ್ಜಿ ಸಲ್ಲಿಸುವಂತಿಲ್ಲ. ಸಂಬಂಧಿಕರು ಎಂದರೆ ಪತಿ/ಪತ್ನಿ, ಮಕ್ಕಳು (ಜೈವಿಕ, ದತ್ತು, ಮಲ), ಪೋಷಕರು, ಸಹೋದರ-ಸಹೋದರಿಯರು ಮತ್ತು ಅತ್ತೆ-ಮಾವಂದಿರು. ಅಲ್ಲದೆ, ನಿವೃತ್ತ ಎಲ್ಐಸಿ ನೌಕರರು ಮತ್ತು ಮಾಜಿ ಏಜೆಂಟರು ಈ ಯೋಜನೆಯಡಿ ಮರು ನೇಮಕಾತಿಗೆ ಅರ್ಹರಾಗಿರುವುದಿಲ್ಲ. ಪ್ರಸ್ತುತ ಏಜೆಂಟರಾಗಿರುವವರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
ಮಹಿಳೆಯರಿಗೆ ಪ್ರತಿ ತಿಂಗಳು 7000 ರೂಪಾಯಿ –
ಎಲ್ಐಸಿ ಬಿಮಾ ಸಖಿ ಯೋಜನೆಯಡಿ ಆಯ್ಕೆಯಾದ ಮಹಿಳಾ ಏಜೆಂಟ್ಗಳು ತಮ್ಮ ಕಾರ್ಯಕ್ಷಮತೆಯ ಆಧಾರದ ಮೇಲೆ ಮೊದಲ 3 ವರ್ಷಗಳಲ್ಲಿ ಮಾಸಿಕ ಸ್ಟೈಫಂಡ್ ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಯಡಿ ಆಯ್ಕೆಯಾದ ಮಹಿಳೆಯರಿಗೆ ಮೊದಲ ವರ್ಷದಲ್ಲಿ ತಿಂಗಳಿಗೆ 7000 ರೂ.ಗಳ ಸ್ಥಿರ ಸ್ಟೈಫಂಡ್ ನೀಡಲಾಗುತ್ತದೆ. ಇದರ ನಂತರ ಎರಡನೇ ವರ್ಷದಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 6000 ರೂ.ಗಳನ್ನು ನೀಡಲಾಗುತ್ತದೆ. ಆದಾಗ್ಯೂ, 6000 ರೂ.ಗಳನ್ನು ಪಡೆಯಲು ಕೆಲವು ಷರತ್ತುಗಳಿವೆ. ಮೊದಲ ವರ್ಷದಲ್ಲಿ ಮಹಿಳೆ ಪ್ರಾರಂಭಿಸಿದ ಒಟ್ಟು ಪಾಲಿಸಿಗಳಲ್ಲಿ ಕನಿಷ್ಠ 65 ಪ್ರತಿಶತವು ಎರಡನೇ ವರ್ಷದಲ್ಲಿ ಪ್ರತಿ ತಿಂಗಳು ಮುಂದುವರಿದರೆ, ಅವರಿಗೆ ಪ್ರತಿ ತಿಂಗಳು 6000 ರೂ.ಗಳನ್ನು ನೀಡಲಾಗುತ್ತದೆ.
ಕರ್ನಾಟಕ ಸರ್ಕಾರ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ್ದು, ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಟ್ಟಿನ ದಿನದಲ್ಲಿ ದೈಹಿಕ ಕಿರಿಕಿರಿ ಒಂದೆಡೆಯಾದ್ರೆ, ಮಾನಸಿಕ ಕಿರಿಕಿರಿ ಮತ್ತೊಂದು ಕಡೆ. ಈ ಎಲ್ಲ ಸಮಸ್ಯೆ ಮಧ್ಯೆ ಕಂಪನಿಗಳಲ್ಲಿ ಕೆಲಸ ಮಾಡುವುದು ಕಷ್ಟಕರ. ಹೀಗಾಗಿ ಸರ್ಕಾರದ ನಿರ್ಧಾರ ಸರಿ ಇದೆ ಎಂದು ಮಹಿಳೆಯರು ಹೇಳುತ್ತಿದ್ದಾರೆ. ಕೆಲವು ಉದ್ಯಮಿಗಳು ಸಾಮಾನ್ಯ ರಜೆಗಳೇ ಇರುತ್ತದೆ. ಅದರೊಂದಿಗೆ ಇತರ ರಜೆ ಕೊಟ್ಟರಾಗದು ಎನ್ನುತ್ತಿದ್ದಾರೆ.