ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿ ಮಹಿಳೆಯರು ನೋಂದಾಯಿಸಿಕೊಳ್ಳೋದಕ್ಕೆ ಈಗಾಗಲೇ ಮುಖ್ಯಂತ್ರಿ ಸಿದ್ಧಾರಮಯ್ಯ ಜುಲೈ.20ರಂದು ಚಾಲನೆ ನೀಡಿದ್ದರು. ಆ ಬಳಿಕ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಕೂಡ ಆರಂಭಗೊಂಡಿತ್ತು. ಈಗಾಗಲೇ 70 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ನೋಂದಾಯಿಸಿಕೊಳ್ಳುತ್ತಿದ್ದಾರೆ.
ಈ ನಡುವೆ ಗೃಹಲಕ್ಷ್ಮಿ ಯೋಜನೆಯ ಹಣ ಯಜಮಾನಿ ಮಹಿಳೆಯರ ಖಾತೆಗೆ ಯಾವಾಗ ಜಮಾ ಆಗಲಿದೆ ಎನ್ನುವ ಬಗ್ಗೆ ಅನೇಕ ಮಹಿಳೆಯರು ಕೇಳುತ್ತಿದ್ದರು. ಹಲವರನ್ನು ವಿಚಾರಿಸುತ್ತಿದ್ದರು. ಅವರಿಗೆ ಸಿಎಂ ಕಾರ್ಯಾಲಯದಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಆಗಸ್ಟ್ 17ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಜಮಾನಿ ಮಹಿಳೆಯರ ಖಾತೆಗೆ 2000ರೂ ಹಣ ಜಮಾ ಗೆ ಉದ್ಘಾಟನೆಯನ್ನು ಮಾಡಲಿದ್ದಾರೆ. ಈ ಬಳಿಕ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡಂತ ಮಹಿಳೆಯರ ಬ್ಯಾಂಕ್ ಖಾತೆಗೆ ರೂ.2000 ಹಣ ಜಮಾ ಆಗಲಿದೆ.
ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರು ಅರ್ಜಿ ಸಲ್ಲಿಸಲು ಇನ್ನು ಮುಂದೆ ಸ್ಲಾಟ್ ಬುಕ್ಕಿಂಗ್ ಗಾಗಿ SMS ಅನ್ನು ಕಾಯುವ ಅವಶ್ಯಕತೆ ಇಲ್ಲ. ಬದಲಾಗಿ ನೇರವಾಗಿಯೇ ಹೋಗಿ ಫಲಾನುಭವಿಗಳು ತಮಗೆ ಹತ್ತಿರದಲ್ಲಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಸೇವಾಸಿಂಧು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ. ನೀವು ನಿಮ್ಮ ಒಟಿಪಿ ಬರುವ ಮೊಬೈಲ್ ತೆಗೆದುಕೊಂಡು ಹೋಗಿ ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಸಬಹುದು. ನೇರವಾಗಿ ಪೂರಕ ದಾಖಲೆಗಳ ಜೊತೆ ಹೋಗಿ ಇಂದಿನಿಂದಲೇ ಈ ಮೇಲೆ ತಿಳಿಸಿದ ಸೇವಾಕೇಂದ್ರಗಳಿಗೆ ಅರ್ಜಿ ಸಲ್ಲಿಸಬಹುದು
ನಿಮ್ಮ ಮೆಸೇಜ್ ಗೆ ರಿಪ್ಲೈ ಬಂದಿಲ್ಲ ಎಂದರೆ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು. ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ https://sevasindhugs.karnataka.gov.in/ ಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ ನೀವು ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡಿಕೊಳ್ಳಬಹುದು.
ರೇಷನ್ ಕಾರ್ಡ್ ಗೆ ಹೊಸ ಕುಟುಂಬ ಸದಸ್ಯರ ಸೇರ್ಪಡೆಗೆ ಬೇಕಾಗುವ ದಾಖಲೆಗಳೇನು ?
1. ರೇಷನ್ ಕಾರ್ಡ್ಗೆ ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಲು ಕುಟುಂಬದ ಯಜಮಾನರ ಬಳಿ ರೇಷನ್ ಕಾರ್ಡ್ ಹಾಗೂ ಅದರ ಜೆರಾಕ್ಸ್ ಪ್ರತಿ
2. ಮಗುವಿನ ಅಥವಾ ಕುಟುಂಬದ ಹೊಸ ಸದಸ್ಯರ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್
3. ಮಗುವಾಗಿದಲ್ಲಿ ಪೋಷಕರ ಆಧಾರ್ ಕಾರ್ಡ್.
4. ಹೊಸ ವಿವಾಹಿತ ಮಹಿಳೆಯಾಗಿದ್ದರೆ ಆಧಾರ್ ಕಾರ್ಡ್, ವಿವಾಹ ಪ್ರಮಾಣಪತ್ರ, ತನ್ನ ಪೋಷಕರ ರೇಷನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.
ಈ ಮೇಲ್ಕಂಡ ದಾಖಲೆಗಳಿದ್ದಲೇ, ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಹಾಗಾದ್ರೇ ಅರ್ಜಿ ಸಲ್ಲಿಸೋದು ಹೇಗೆ ಎನ್ನುವ ಹಂತ ಈ ಕೆಳಗಿದೆ. ರೇಷನ್ ಕಾರ್ಡ್ ನಲ್ಲಿ ಹೊಸ ಕುಟುಂಬ ಸದಸ್ಯರ ಹೆಸರು ಸೇರ್ಪಡೆ ಮಾಡಲು ಈ ಹಂತಗಳನ್ನು ಅನುಸರಿಸಿ, ಅರ್ಜಿ ಸಲ್ಲಿಸಿ
kar.nic.in ಈ ಅಧಿಕೃತ ವೆಬ್ ಸೈಟ್ ತಾಣಕ್ಕೆ ಭೇಟಿ ನೀಡಬೇಕು.
ಈ ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ಮುಖಪುಟದಲ್ಲಿನ ಇ-ಸೇವೆಗಳು ಎಂಬಲ್ಲಿ ಕ್ಲಿಕ್ ಮಾಡಿ.
ಹೋಮ್ ಪೇಜ್ನಲ್ಲಿರುವ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವ ಆಯ್ಕೆ ಒತ್ತಿ ಕ್ಲಿಕ್ ಮಾಡಿ.
ಹೊಸ ಫಾರ್ಮ್ ತೆರೆಯಲಿದೆ, ಹೊಸ ಕುಟುಂಬ ಸದಸ್ಯರ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ
https://ahara.kar.nic.in/Home/EServices ತಾಣಕ್ಕೂ ನೇರವಾಗಿ ಕ್ಲಿಕ್ ಮಾಡಬಹುದಾಗಿದೆ.
ಈ ಜಾಲತಾಣದಲ್ಲಿ ಕ್ಲಿಕ್ ಮಾಡಿದ ನಂತ್ರ, ನೀವು ಇ-ಪಡಿತರ ಚೀಟಿ ಆಯ್ಕೆ. ಆ ಬಳಿಕ ಕೆಳಗಡೆ ಸ್ಕ್ರಾಲ್ ಮಾಡಿದ್ರೇ.. ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸೋ ಲಿಂಕ್ ಸಿಗಲಿದೆ. ಅಲ್ಲಿ ಕ್ಲಿಕ್ ಮಾಡಿ
ಈ ಬಳಿಕ ಅರ್ಜಿಯ ಜೊತೆಗೆ ಕೇಳುವಂತ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ ಲೋಡ್ ಮಾಡಿ, ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಿ.