ಕೃಷಿ ಇಲಾಖೆಯಿಂದ ರೈತರಿಗೆ 28 ಸಾವಿರ ವರೆಗೆ ಸಹಾಯಧನ ಇಂದೇ ಅರ್ಜಿ ಸಲ್ಲಿಸಿ.

ರೈತರೇ ಇವತ್ತು ನಾವು ಒಂದು ಹೊಸ ವಿಷಯವನ್ನು ಚರ್ಚೆ ಮಾಡೋಣ. ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಪರಿಶಿಷ್ಠ ಜಾತಿ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕಗಳ ವಿತರಣೆಯಡಿ ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ತುಂತುರು ನೀರಾವರಿ ಘಟಕಗಳ ವಿತರಣೆಗೆ ಕೊಪ್ಪಳ ತಾಲ್ಲೂಕಿಗೆ ಪರಿಶಿಷ್ಠ ಜಾತಿ ವರ್ಗದ ರೈತರಿಗೆ 651 ಹೆಕ್ಟರ್‌ಗಳಿಗೆ ಗುರಿಯನ್ನು ನಿಗದಿಪಡಿಸಿದ್ದು, ಇಲ್ಲಿಯವರೆಗೆ 192 ಹೆಕ್ಟರ್ ಘಟಕಗಳನ್ನು ವಿತರಣೆ ಮಾಡಲಾಗಿದೆ. ಈ ಕೃಷಿ ಸಿಂಚಾಯಿ ಯೋಜನೆ ರೈತರಿಗೆ ಬಹಳ ಅನುಕೂಲ ಮಾಡಿಕೊಡುವ ಯೋಜನೆ ಇದಾಗಿದೆ.

ಸರ್ಕಾರದ ಕಡೆಯಿಂದ ರೈತರಿಗೆ ಯಾವ ಯಾವ ರೂಪದಲ್ಲಿ ಈ ಯೋಜನೆ ಲಾಭ ದೊರೆಯುತ್ತದೆ ಎಂದು ಇಲ್ಲಿ ತಿಳಿಸಲಾಗಿದೆ. ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ರೈತರು 2 ಹೆಕ್ಟರ್‌ಗಳವರೆಗೆ ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅವಕಾಶವಿರುತ್ತದೆ. ಈ ರೈತರು 75 ಎಂ.ಎಂ.ಗೆ 1 ಹೆಕ್ಟರ್‌ಗೆ ರೈತ ವಂತಿಕೆ 4667 ರೂ. ಹಾಗೂ ಸಹಯಧನ 21,775 ಇದ್ದು ರೂ., 2 ಹೆಕ್ಟರ್‌ಗೆ ರೈತ ವಂತಿಕೆ 6540 ರೂ. ಮತ್ತು ಸಹಾಯಧನ 31,191 ರೂ.ಇದೆ. 63 ಎಂ.ಎಂ.ಗೆ 1 ಹೆಕ್ಟರ್‌ಗೆ ರೈತ ವಂತಿಕೆ 4139 ರೂ. ಹಾಗೂ ಸಹಾಯಧನ 19429 ರೂ. ಇದ್ದು, 2 ಹೆಕ್ಟರ್‌ಗೆ ರೈತ ವಂತಿಕೆ 5772 ಮತ್ತು ಸಹಾಯಧನ 28050 ರೂ.ಇರುತ್ತದೆ.

ರೈತರ ಅರ್ಜಿಯೊಂದಿಗೆ ಯಾವ ದಾಖಲೆಗಳು ಇರಬೇಕು?
ಎಫ್.ಐ.ಡಿ, ಭಾವಚಿತ್ರ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸಬುಕ್ ಪ್ರತಿ ಹಾಗೂ ಆಧಾರ ಪ್ರತಿಗಳನ್ನು ಸಲ್ಲಿಸುವುದು. ಮೇಲಿನ ನಿಗಧಿತ ದಿನಾಂಕದೊಳಗಾಗಿ ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ/ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರು ಈ ಯೋಜನೆಯ ಸದಪಯೋಗವನ್ನು ಪಡೆದುಕೊಳ್ಳಲು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಸದಪಯೋಗವನ್ನು ಪಡೆದುಕೊಳ್ಳುವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಭಾಗ್ಯ ಯೊಜನೆ. ಶ್ರೀ ಸಿದ್ದರಾಮಯ್ಯ ಸನ್ಮಾನ್ಯ ಮುಖ್ಯಮಂತ್ರಿಗಳು 2023-24 ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆಯ ಅನುಷ್ಠಾನ. ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೃಷಿ ಇಲಾಖಾ ಸವಲತ್ತುಗಳ ವಿತರಣಾ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾನ್ಯ ಶ್ರೀ ಎನ್.ಚಲುವರಾಯಸ್ವಾಮಿ, ಕೃಷಿ ಸಚಿವರು ಭಾಗವಹಿಸಿರುವ ಸಂದರ್ಭ. ಕೃಷಿ ಭಾಗ್ಯ ಪ್ಯಾಕೇಜ್‌ನಲ್ಲಿ ಈ ಕೆಳಕಂಡ ಘಟಕಗಳು ಒಳಗೊಂಡಿದ್ದು, ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ರೈತ ಬಾಂಧವರಲ್ಲಿ ವಿನಂತಿ ಕ್ಷೇತ್ರ ಬದು ನಿರ್ಮಾಣ

ರೈತರ ಜಮೀನಿನಲ್ಲಿ ಬಿದ್ದ ಮಳೆ ನೀರನ್ನು ಪೋಲಾಗದಂತೆ ಅದೇ ಜಮೀನಿನಲ್ಲಿ ಇಂಗಿಸಲು ಹಾಗೂ ಕೃಷಿ ಹೊಂಡದಲ್ಲಿ ಸಂಗ್ರಹಿಸಲು ಕ್ಷೇತ್ರ ಬದು ನಿರ್ಮಾಣ. ಕೃಷಿ ಹೊಂಡ
ಎಲ್ಲಾ ರೀತಿಯ ಮಣ್ಣುಗಳಲ್ಲಿ ಮಳೆ ನೀರು ಸಂಗ್ರಹಣೆಗಾಗಿ ವಿವಿಧ ಅಳತೆಯ (10x10x3 ಮೀ, 12x12x3 ಮೀ 15x15x3 ಮೀ, 18x18x3 ше, 21x21x3 ಮೀ) ಕೃಷಿ ಹೊಂಡಗಳ ನಿರ್ಮಾಣ.

Spread positive news

Leave a Reply

Your email address will not be published. Required fields are marked *