ಪ್ರೀಯ ರೈತರೇ ನಾವು ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಮುಖ ಯೋಜನೆಗಳು, ಹಾಗೂ ರೈತರು ಇದರ ಸದುಪಯೋಗ ಹೇಗೆ ಪಡೆಯುವುದು? ರೈತರಿಗೆ ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ಸಿಗುತ್ತವೆ. ಪಶುಪಾಲನಾ ಇಲಾಖೆಯ ವತಿಯಿಂದ ರೈತರಿಗೆ ಎಷ್ಟು ಪ್ರೋತ್ಸಾಹ ಧನ ಸಾಧ್ಯತೆ ಇದೆ. ರೈತರು ಇದನ್ನು ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು. ರೈತರಿಗೆ 24*7 ಸಹಾಯವಾಣಿ ಇದೆಯೇ? ಬನ್ನಿ ಯಾವ ಯಾವ ಸಹಾಯವಾಣಿ ರೈತರ ಪರವಾಗಿ ಇದೆ ಎಂದು ನೋಡೋಣ.
ಪ್ರೀಯ ರೈತರೇ ರಾಜ್ಯದಲ್ಲಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಹಾಗೂ ಹಲವಾರು ಕೃಷಿಯೇತರ ಸಂಸ್ಥೆಗಳು ರೈತರ ಪರವಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಹಾಗೂ ರೈತರಿಗೆ ಸದಾಕಾಲ ಸೇವೆ ಒದಗಿಸುವ ನಿಟ್ಟಿನಲ್ಲಿ ರೈತರು ಕೃಷಿಯಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರವು ಹಾಗೂ ಕೃಷಿ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ 24*7 ಟೋಲ್ ಫ್ರೀ ಸಂಖ್ಯೆ ಒದಗಿಸಿದೆ. ರೈತರು ತಮ್ಮ ಕೃಷಿ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ನಂಬರ್ ಕಾಲ್ ಮಾಡಿ ಸಂಪೂರ್ಣ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಹಾಗೂ ರೈತರು ನಮಗೆ ಸಹಾಯಕ್ಕೆ ಯಾರೂ ಬರುತ್ತಿಲ್ಲ ಎಂದು ಹೇಳುವುದಕ್ಕಿಂತ ಒಮ್ಮೆ ಈ ಸಹಾಯವಾಣಿಗೆ ಕರೆ ಮಾಡಿ ಮಾತನಾಡಿ ಇದರ ಲಾಭ ಪಡೆಯಿರಿ.
ರೈತರಿಗೆ ಫ್ರುಟ್ ಐಡಿ ಏಕೆ ಬೇಕು ಎಂಬುದನ್ನು ತಿಳಿಯೋಣ. ಮುಖ್ಯವಾಗಿ ಫ್ರುಟ್ ಐಡಿ ಇದ್ದರೆ ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಹಾಗೂ ರೈತರು ಎಷ್ಟು ಸರ್ಕಾರದ ಯೋಜನೆ ಹಾಗೂ ಸರ್ಕಾರದ ಕಡೆಯಿಂದ ಯಾವ ಯಾವ ಬೀಜ, ಗೊಬ್ಬರ, ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ಸುಲಭವಾಗಿ ನೋಡಬಹುದು. ಅದೇ ರೀತಿ ಫ್ರುಟ್ ಐಡಿಯಿಂದ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸ್ಕಾಲರ್ಶಿಪ್ ಅನ್ನು ಅಂದರೆ ರೈತ ವಿದ್ಯಾನಿಧಿ ಹಣವನ್ನು ರೈತರ ಮಕ್ಕಳಿಗೆ ಅವರ ಫ್ರುಟ್ ಐಡಿ ಮೂಲಕ ಹಾಕುತ್ತಾರೆ.
• ರೈತರಿಗಾಗಿ ತುರ್ತು ಸಹಾಯವಾಣಿಗಳು (ಉಚಿತ ಕರೆ)
• ರೈತ ಚೇತನ ಸಹಾಯವಾಣಿ (ಅಗ್ರಿ ವಾರ್ ರೂಮ್) (ಧಾರವಾಡ ಕೃವಿವಿ) 1800-425-1150.
• ಉದ್ಯಾನ ಸಹಾಯವಾಣಿ (ಬಾಗಲಕೋಟೆ ತೋಟಗಾರಿಕೆ ವಿವಿ) 1800-425-7910.
• ರೈತರ ಸಹಾಯವಾಣಿ (ಕರ್ನಾಟಕ ಸರ್ಕಾರದ ಕೃಷಿ ಇಲಾಖೆ) 1800-425-3553.
• ಪಶುಪಾಲಕರ ಸಹಾಯವಾಣಿ (ಕರ್ನಾಟಕದ ಪಶುಪಾಲನೆ ಇಲಾಖೆ) 1800-425-0012.
• ಕಿಸಾನ್ ಕಾಲ್ ಸೆಂಟರ್, ಬೆಂಗಳೂರು (ಕರ್ನಾಟಕ ಸರ್ಕಾರ) 1800-180-1551.
• ಕೃಷಿ ಉತ್ಪನ್ನಗಳ ಬೆಲೆ ಸಹಾಯವಾಣಿ (ಕರ್ನಾಟಕ ಸರ್ಕಾರ) 1800-425-1552.
• ಕೃಷಿ ಸಮಸ್ಯೆ ಸಹಾಯವಾಣಿ 1800-425-3553.
• ವರುಣ ಮಿತ್ರ (ಮಳೆ ಬರುವುದರ ಬಗ್ಗೆ ಸಹಾಯವಾಣಿ 9243345433.
ಕೃಷಿ ಇಲಾಖೆಯ ಯೋಜನೆಗಳು / ಸವಲತ್ತುಗಳು –
1) ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ:-ತಾಲೂಕಿನ ಆಯ್ದ ಪ್ರದೇಶದಲ್ಲಿ ಮಣ್ಣು ಹಾಗೂ ನೀರಿನ ಸಂರಕ್ಷಣೆ, ರೈತರ ಸಾಮಾಜಕ ಹಾಗೂ ಆರ್ಥಿಕ ಮಟ್ಟ ಹೆಚ್ಚಿಸುವುದು ಮತ್ತು ನೀರಿನ ಕುರಿತು ಮಾನವ ಸಂಪನ್ಮೂಲ ಕಾರ್ಯಕ್ರಮ ಕೈಗೊಳ್ಳುವುದು.
2) ರಾಷ್ಟ್ರೀಯ ಕೃಷಿ ವಿಕಾಸ & ಬೀಜ ಹುಟ್ಟುವಳಿ ಯೋಜನೆಗಳು :- ದೊಡ್ಡ, ಸಣ್ಣ & ಅತೀ ಸಣ್ಣ ರೈತರಿಗೆ ಸಹಾಯಧನದಲ್ಲಿ ಬೀಜಗಳ ವಿತರಣೆ.
3) ಲಘು ನೀರಾವರಿ ಯೋಜನೆ :- ತುಂತುರು ನೀರಾವರಿ & ಹನಿ ನೀರಾವರಿ ಘಟಕಗಳಿಗೆ ಶೇ 90% ಸಹಾಯಧನ
4) ಕೃಷಿ ಯಾಂತ್ರೀಕರಣ ಯೋಜನೆ:- ರೈತ ಗುಂಪುಗಳಿಗೆ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ಟ್ರಾಕ್ಟರ್ ಚಾಲಿತ & ಮಾನವ ಚಾಲಿತ ಉಪಕರಣಗಳು ಹಾಗೂ ಡಿಸೇಲ್ ಪಂಪಸೆಟ್ ವಿತರಣೆ.
5) ಕೃಷಿ ಸಂಸ್ಕರಣೆ ಯೋಜನೆ :-ಗಿರಣಿ, ಬಾರ ಕುಬ್ಬುವ ಮಶೀನ, ಶಾವಿಗೆ ಮಶೀನ ಹಾಗೂ ರಾಶಿ ಯಂತ್ರಗಳು ಸರ್ಕಾರದ ಸಹಾಯಧನದಲ್ಲಿ,
6) ಪರಂಪರಾಗತ ಕೃಷಿ ವಿಕಾಸ ಹಾಗೂ ಸಾವಯವ ಭಾಗ್ಯ ಯೋಜನೆಗಳು :-ಸಾವಯವ ಉತ್ಪನ್ನ ಉತ್ಪಾದನೆಗೆ ಪ್ರೋತ್ಸಾಹ, ಮಾನವ ಸಂಪನ್ಮೂಲ ಹೆಚ್ಚಿಸುವುದು ಹಾಗೂ ಸಾವಯವ ಧೃಡೀಕರಣ,
7) ಮಣ್ಣು ಆರೋಗ್ಯ ಅಭಿಯಾನ :- ಮಣ್ಣಿನ ಮಾದರಿಗಳ ಸಂಗ್ರಹಣೆ, ವಿಶ್ಲೇಷಣೆ, ರೈತರಿಗೆ ಮಣ್ಣು ಆರೋಗ್ಯ ಕಾರ್ಡ ವಿವರಣೆ ಹಾಗೂ ಬೆಳೆಗಳಿಗೆ ಅನುಗುಣವಾಗಿ ಪೋಷಕಾಂಶಗಳ ಶಿಫಾರಸ್ಸು,
8) ಕೃಷಿ ಭಾಗ್ಯ ಯೋಜನೆ :- ಖುಷಿ ಪ್ರದೇಶದಲ್ಲಿ ನೀರಿನ ಸಂಗ್ರಹಣೆ, ಸಂರಕ್ಷಣೆ, ಬಳಕೆ ಹಾಗೂ ಲಾಭದಾಯಕ ಬೆಳೆ ಪದ್ಧತಿ ಅಳವಡಿಕೆಗೆ ಶೇ 80-90% ಸಹಾಯಧನ
9) ಕೃಷಿ ಉಪಕರಣಗಳ ವಿತರಣೆ :- ಎತ್ತುಚಾಲಿತ ಕೃಷಿ ಉಪಕರಣಗಳು ಸರ್ಕಾರದ ಸಹಾಯಧನದಲ್ಲಿ
10) ಸಾವಯವ ಗೊಬ್ಬರ ಯೋಜನೆ:- ಎರೆಹುಳು ಗೊಬ್ಬರ ಉತ್ಪಾದನೆ, ಐಯೋಡೈಸೆಸ್ಟರ್ ಫಟಕ ನಿರ್ಮಾಣ, ಹಸಿರೆಲೆ, ನಿಜಕಾಂಪೊಸ್ಟ, ಎರೆಹುಳು ಮತ್ತು ಜೈವಿಕ ಗೊಬ್ಬರಗಳ ವಿತರಣೆ ಸರ್ಕಾರದ ಸಹಾಯಧನದಲ್ಲಿ ಸಿಗುತ್ತದೆ.
ಹೀಗೆ ರೈತರು ಈ ಮೇಲಿನ ಎಲ್ಲಾ ನಂಬರ್ ಕಾಲ್ ಮಾಡಿ ನಿಮ್ಮ ಕೃಷಿಯಲ್ಲಿ ತೊಡಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಾಗೂ ರೈತರು ಇದರ ಸದುಪಯೋಗವನ್ನು ದಿನದ 24 ಗಂಟೆ ನಿರಂತರ ಪಡೆಯಬಹುದು. ಮಳೆ, ಗಾಳಿ, ರೋಗ, ಕೀಟ, ಬೆಳೆಗಳ ಬೆಳವಣಿಗೆ, ಬೆಳೆಗಳ ಉತ್ಪನ್ನ ಹೆಚ್ಚಿಸುವಿಕೆ, ಸೈಕ್ಲೋನ್ ಎಫೆಕ್ಟ್, ಸಸ್ಯಗಳಿಗೆ ಬರುವ ಎಲ್ಲಾ ಕೀಟ, ರೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಈ ಸಹಾಯವಾಣಿ ಸಂಖ್ಯೆಗಳು ಸಹಾಯ ಮಾಡುತ್ತವೆ.