ಪ್ರಿಯ ಓದುಗರೇ ಇವತ್ತಿನಿಂದ ವಿಜಯಪುರ ಕೃಷಿ ಮೇಳ ಆರಂಭ. 2025-26 ನೇ ಸಾಲಿನ ಕೃಷಿ ಮೇಳವನ್ನು ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 11-13 ರವರೆಗೆ ಆಯೋಜಿಸಲಾಗಿದೆ. ಶಿರ್ಷಿಕೆ ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಸುಸ್ಥಿರ ಕೃಷಿ
ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಹಾಗೂ ಪ್ರದರ್ಶನ ಎಂಬ ಮುನ್ನುಡಿಯಲ್ಲಿ ಈ ವರ್ಷ ಕೃಷಿ ಮೇಳ ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವಿಜಯಪುರ ಆವರಣದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಿಂಗಾರಿ ಬೆಳೆಗಳ ಕೃಷಿ ಮೇಳವನ್ನು 11, 12 & 13ನೇ ಜನವರಿ 2025 (ಶನಿವಾರ, ರವಿವಾರ, ಮತ್ತು ಸೋಮವಾರ) ರಂದು ಏರ್ಪಡಿಸಲು ನಿರ್ಧರಿಸಲಾಗಿದೆ. ಈ ಕೃಷಿ ಮೇಳದಲ್ಲಿ ವಿಜಯಪುರ, ಬಾಗಲಕೋಟ ಮತ್ತು ಪಕ್ಷದ ಇತರ ಜಿಲ್ಲೆಗಳಿಂದ ಸುಮಾರು ಎರಡು ಲಕ್ಷ ರೈತ ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ವಿವಿಧ ಬೆಳೆಗಳ ಕ್ಷೇತ್ರ ಭೇಟಿ, ಕೃಷಿ ಸಲಹಾ ಕೇಂದ್ರ, ಕೃಷಿ ವಿಚಾರ ಸಂಕೀರ್ಣ ಮತ್ತು ಪ್ರಮುಖವಾಗಿ 03 ದಿನಗಳ ಕೃಷಿ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸದರಿ ಕೃಷಿ ಮೇಳದಲ್ಲಿ ಸನ್ಮಾನ್ಯ ಸಚಿವರು, ಜಿಲ್ಲೆಯ ಮಾನ್ಯ ಸಂಸದರು/ಶಾಸಕರು/ ವಿಧಾನ ಪರಿಷತ್ ಸದಸ್ಯರು, ಪ್ರತಿನಿಧಿಗಳು ಮತ್ತು ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಮಾನ್ಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರು ಹಾಗೂ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಮಾನ್ಯ ಕುಲಪತಿಗಳು ಮತ್ತು ಇತರೆ ಗಣ್ಯರು ಭಾಗವಹಿಸಲಿದ್ದಾರೆ.
ಇಂತಹ ಸುಸಂಧರ್ಭದಲ್ಲಿ ಭೇಟಿ ನೀಡುವ ರೈತರ/ ರೈತ ಮಹಿಳೆಯರ ಉಪಯೋಗಕ್ಕಾಗಿ ಹಾಗೂ ತಮ್ಮ ಸಂಸ್ಥೆಯ ಕೃಷಿ ಪರಿಕರ/ಸೇವಾ ಚಟುವಟಿಕೆಗಳ ಪರಿಚಯ ಮಾಡುವುದಕ್ಕಾಗಿ ತಾವು ತಮ್ಮ ಸಂಸ್ಥೆಯ ವತಿಯಿಂದ ವಸ್ತು ಪ್ರದರ್ಶನ ಮಳಿಗೆ ಏರ್ಪಡಿಸಬೇಕೆಂದು ತಮ್ಮನ್ನು ಈ ಮೂಲಕ ಆದರಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇನೆ. ತಮ್ಮ ಸಂಸ್ಥೆಯು ಕೃಷಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸುವುದರ ಕುರಿತು ಧೃಡೀಕೃತ ಪತ್ರವನ್ನು ದಿನಾಂಕ 04-01-2025 ರೊಳಗಾಗಿ ಈ ಕೆಳಗೆ ಸಹಿ ಮಾಡಿದವರಿಗೆ ಕಳುಹಿಸಿ ಅದಕ್ಕಾಗಿ ನಿಗದಿಪಡಿಸಿದ ಮೊತ್ತವನ್ನು ಚೇರಮನ್, ಕೃಷಿಮೇಳ ಸಮಿತಿ, ಕೃಷಿ ಮಹಾವಿದ್ಯಾಲಯ, ವಿಜಯಪುರ ಇವರಿಗೆ ಡಿ.ಡಿ. / ಬ್ಯಾಂಕ್ ವರ್ಗಾವಣೆ / ಯು.ಪಿ.ಐ. ಮುಖಾಂತರ ಸಂದಾಯ ಮಾಡಿ ಪಾವತಿ ಪಡೆಯಬಹುದಾಗಿದೆ.
ಮಳಿಗೆಗಳ ಮೊತ್ತ –
* ವಿವಿಧ ಬೀಜಗೊಬ್ಬರ/ಪರಿಕರ ಮತ್ತು ಮಿತ್ರ ಸಂಸ್ಥೆಗಳು ಅಳತೆ 10×10 ಮಳಿಗೆಯ ಮೊತ್ತ 10,030.00ರೂಪಾಯಿ.
* ಕೃಷಿ ಯಂತ್ರೋಪಕರಣಗಳು ಅಳತೆ 20*10 ಮಳಿಗೆಗೆ ಮೊತ್ತ 20,060.00 ರೂಪಾಯಿ.
ಬ್ಯಾಂಕ್ ವಿವರಗಳು –
ಬ್ಯಾಂಕ್ ಹೆಸರು: ಅಧ್ಯಕ್ಷರು ಕೃಷಿ ಮೇಳ ಕೃಷಿ ಮಹಾವಿದ್ಯಾಲಯ ವಿಜಯಪುರ (ಸಹಾಯಕ ಕಂಟ್ರೋಲರ್ ಅಗ್ರಿ ಕಾಲೇಜು, ವಿಜಯಪುರ)
ಖಾತೆ ಸಂಖ್ಯೆ: 43626965947
IFSC ಕೋಡ್: SBIN0015639 (ಶೂನ್ಯ)
ಶಾಖೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಿಟ್ನಳ್ಳಿ ಶಾಖೆ
UPI: krishimelavip@sbi