ಅಕ್ರಮ-ಸಕ್ರಮ ಯೋಜನೆಯಡಿ ರಾಜ್ಯದಲ್ಲಿ ಸುಮಾರು 4.5 ಲಕ್ಷ ಕೃಷಿ ಪಂಪ್‍ಸೆಟ್ ಗಳು ಇವೆ. ಈ ಪೈಕಿ ಈಗಾಗಲೆ 2.5 ಲಕ್ಷ ಪಂಪ್‍ಸೆಟ್‍ಗಳನ್ನು ಅಕ್ರಮ-ಸಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ, ಇನ್ನೂ 2 ಲಕ್ಷ ಪಂಪ್‍ಸೆಟ್‍ಗಳಿಗೆ ಸಂಪರ್ಕ ಒದಗಿಸಲು ಈಗಾಗಲೆ ಏಜೆನ್ಸಿ ಅವರನ್ನು ನಿಗದಿಪಡಿಸಿ ವಹಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಈ ಯೋಜನೆ ಸಂಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ರೈತರ ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕುಸುಮ್ ಯೋಜನೆ ರೈತರಿಗೆ ವರದಾನವಾಗಲಿದೆ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕುಸುಮ್ ಬಿ ಮತ್ತು ಸಿ ಯೋಜನೆಗೆ ರಾಜ್ಯದಲ್ಲಿ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಯೋಜನೆಯಿಂದಾಗಿ ರೈತರಿಗೆ ತಮ್ಮ ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿ 7 ಗಂಟೆಗಳ ಕಾಲ ನಿರಂತರ ಗುಣಮಟ್ಟದ ವಿದ್ಯುತ್ ದೊರೆಯಲಿದೆ ಎಂದು ಹೇಳಿದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತು ವಿದ್ಯುತ್ ನೀಡಲು ಹಳ್ಳಿಗಳಲ್ಲಿ ಸಣ್ಣ ಪ್ರಮಾಣದ ಸೋಲಾರ್ ಪಾರ್ಕ್ ನಿರ್ಮಿಸುವ ಪಿಎಂ- ಕುಸುಮ್ ಯೋಜನೆಯನ್ನು ಪ್ರಾಯೋಗಿಕವಾಗಿ ಶಿರಾ, ಹೊಸದುರ್ಗ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆ ಯಶಸ್ವಿಯಾಗಿದ್ದು ರಾಜ್ಯದ ಇತರ ಕಡೆಗೂ ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ರೈತರು ಸಲ್ಲಿಸಬೇಕಾದ ದಾಖಲೆಗಳು –
ರೈತರ ಅರ್ಜಿ, ರೈತರ ಭಾವಚಿತ್ರ, FID (FID ಇಲ್ಲವಾದಲ್ಲಿ ಅಧಾರ್ ಪ್ರತಿ, ಪಹಣಿ ಪ್ರತಿ, ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿ)
ನಿಮಗೆ ಈ ಯೋಜನೆಯ ಬೇರೆ ಎಲ್ಲಾ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ.
https://pmkusum.mnre.gov.in/#/landing#state-wise-details. PM-KUSUM ನ ಕೇಂದ್ರ ಪೋರ್ಟಲ್‌ಗೆ ಭೇಟಿ ನೀಡಲು ದಯವಿಟ್ಟ https://pmkusum.mnre.gov.in/#/landing ಗೆ ಭೇಟಿ ನೀಡಿ.ಕಾರ್ಯಗತಗೊಳಿಸುವ ಏಜೆನ್ಸಿಗಳು ಮತ್ತು ಮಾಹಿತಿಯನ್ನು ಹೇಗೆ ಅನ್ವಯಿಸಬೇಕು ಎಂದು ದಯವಿಟ್ಟು https://pmkusum.mnre.gov.in/#/landing#state-wise-details ಗೆ ಭೇಟಿ ನೀಡಿ.ಸ್ವತಂತ್ರ ಸೋಲಾರ್ ಪಂಪ್ ಮಾಹಿತಿಯ ಮಾರಾಟಗಾರರು ಮತ್ತು ದರಗಳಿಗಾಗಿ ದಯವಿಟ್ಟು https://pmkusum.mnre.gov.in/#/vendor-list ಗೆ ಭೇಟಿ ನೀಡಿ.
ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕಗಳನ್ನು ಚೆಕ್ ಮಾಡಿ ಕೂಡಲೇ ಬೆಳೆ ವಿಮೆ ಮಾಡಿಸಿ ಏಕೆಂದರೆ ಬಹಳಷ್ಟು ಬೆಳೆಗಳಿಗೆ ಡಿಸೆಂಬರ್ 31ರವರೆಗೆ ಮಾತ್ರ ನೊಂದಣಿ ಮಾಡಿಸಲು ಸಾಧ್ಯವಿದ್ದು
ಆದ್ದರಿಂದ ನೀವು ಬೆಳೆದ ಬೆಳೆ ವಿಮೆಯ ಕೊನೆಯ ದಿನಾಂಕವನ್ನು ಚೆಕ್ ಮಾಡಿ ಕೂಡಲೇ ವಿಮೆ ಮಾಡಿಸಿ ಕಡಲೆ ಬೆಳೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿದ್ದು ಯಾರೆಲ್ಲ ರೈತರು ಕಡಲೆಯನ್ನು ಬೆಳೆದಿದ್ದೀರೋ ಅವರು 31ರೊಳಗಾಗಿ ಬೆಳೆ ವಿಮೆ ಮಾಡಿಸಬೇಕು.
2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಯೋಜನೆಯನ್ನು ಅನುಷಾನಗೊಳಿಸುತ್ತಿದ್ದು ಆಸಕ್ತ ತೋಟಗಾರಿಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ರೈತರಿಗೆ 5 ಎಕರೆ ವರೆಗೆ ಶೇಕಡಾ 90 ರಷ್ಟು ಹಾಗೂ 5 ಎಕರೆ ಮೇಲ್ಪಟ್ಟ ಜಮೀನಿಗೆ ಶೇಕಡಾ 45 ರಷ್ಟು ಸಹಾಯಧನ ನೀಡಲಾಗುವದು. ಎಲ್ಲ ವರ್ಗದ ರೈತರಿಗೆ 12 ಎಕರೆ 20 ಗುಂಟೆ ವರೆಗೆ ಸಹಾಯಧನ ನೀಡಲಾಗುವುದು ಆದರೆ ತರಕಾರಿ ಮತ್ತು ಹೂ ಬೆಳೆಗಳಿಗೆ 5 ಎಕರೆ ಪ್ರದೇಶಕ್ಕೆ ಮಾತ್ರ ಸಹಾಯಧನ ನೀಡಲಾಗುವದು.