ಪ್ರಿಯ ಓದುಗರೇ ಇವತ್ತಿನಿಂದ ಧಾರವಾಡ ಕೃಷಿ ಮೇಳ ಆರಂಭ. 2024-25ನೇ ಸಾಲಿನ ಕೃಷಿ ಮೇಳವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 21-24ರವರೆಗೆ ಆಯೋಜಿಸಲಾಗಿದೆ. ಶಿರ್ಷಿಕೆ ಹವಾಮಾನ ವೈಪರೀತ್ಯ ನಿರ್ವಹಣೆ ಕೃಷಿ ತಾಂತ್ರಿಕತೆ (Climate Change Management Agricultural Technology)ಎಂಬ ಮುನ್ನುಡಿಯಲ್ಲಿ ಈ ವರ್ಷ ಕೃಷಿ ಮೇಳ ಆಯೋಜಿಸಲಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಇವತ್ತಿನಿಂದ ಅಂದರೆ, ಸೆಪ್ಟೆಂಬರ್ 21ರಿಂದ ಪ್ರಾರಂಭವಾಗಲಿದ್ದು, ಮೂರು ದಿನ ಈ ಕೃಷಿ ಮೇಳ ನಡೆಯಲಿದೆ. ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 24ರ ವರೆಗೆ ಕೃಷಿ ಮೇಳ ನಡೆಯಲಿದ್ದು, ಕೃಷಿ ಮೇಳ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಬಾರಿಯ ಕೃಷಿ ಮೇಳದ ವಿಶೇಷತೆಗಳೇನು, ಕೃಷಿ ಮೇಳದಲ್ಲಿ ಏನೆಲ್ಲ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಧಾರವಾಡ ಪ್ರಾದೇಶಿಕ ನಿರ್ದೇಶಕ ಶ್ರೀ. ವಸಂತ ಸಾಲಿಯಾನ್ ಸಿರಿ ಮಿಲ್ಲೆಟ್ ಸ್ಟಾಲ್ ಉದ್ಘಾಟಿಸಿದರು.ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎನ್.ಪಾಟೀಲ್, ಐಐಎಂಆರ್‌ನ ನಿವೃತ್ತ ನಿರ್ದೇಶಕ ಡಾ.ವಿಲಾಸ್ ಕುಮಾರ್ ಟೋನಾಪಿ ಮತ್ತು ಎಸ್‌ಕೆಡಿಆರ್‌ಡಿಪಿ ಕೃಷಿ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಶ್ರೀ. ಮನೋಜ್ ಮಿನೇಜಸ್ ಮಳಿಗೆಗಳಿಗೆ ಭೇಟಿ ನೀಡಿ ಎಲ್ಲರನ್ನೂ ಶ್ಲಾಘಿಸಿದರು. ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ 2024ರ ಕೃಷಿ ಮೇಳದಲ್ಲಿ ರೈತರು, ರೈತ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ವಿಸ್ತರಣಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಈ ಬಾರಿ ಕೃಷಿ ಮೇಳ ವಿಶೇಷತೆ ಹಾಗೂ ರೈತರಿಗೆ ಅನುಕೂಲಗಳು –
* ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿ.
* ಕೃಷಿಗೆ ಪೂರಕ ಪರಿಕರಗಳ ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ.
* ನೀರಾವರಿ ಸಾಧನಗಳ ಪ್ರದರ್ಶನ ಹಾಗೂ ಮಾರಾಟ
* ಮೌಲ್ಯಯುತವಾದ ಕೃಷಿ ಉತ್ಪನ್ನಗಳು ಇಲ್ಲಿ ಲಭ್ಯವಿರಲಿವೆ.
* ರೈತ ವಿಜ್ಞಾನಿಗಳೊಂದಿಗೆ ಸಂವಾದ ನಡೆಯಲಿದೆ.
* ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಕಿಸಾನ್ ಡ್ರೋನ್ ಬಳಕೆ, ಬರ ನಿರ್ವಹಣಾ ತಾಂತ್ರಿಕತೆಗಳು, ಒಣ ಬೇಸಾಯ, ಜಲಾನಯನ ಅಭಿವೃದ್ಧಿ, ಮಣ್ಣು ಆರೋಗ್ಯ, ಜಲಸಾಕ್ಷರತೆ, ಜಲ ಸಂರಕ್ಷಣೆ ತಾಂತ್ರಿಕತೆಗಳು, ಕೃಷಿ ಹಾಗೂ ತೋಟಗಾರಿಕೆ ಹುಟ್ಟುವಳಿಗಳ ರಫ್ತು ಅವಕಾಶಗಳನ್ನು ಬಿಂಬಿಸುವ ಪ್ರದರ್ಶನಗಳು ಹಾಗೂ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
* ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಬೆಳೆ ಪದ್ಧತಿಗಳು ಹಾಗೂ ಕೃಷಿ ತಾಂತ್ರಿಕತೆಗಳು.ಎಣ್ಣೆ ಕಾಳು ಹಾಗೂ ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಿಸಲು ಅಗತ್ಯ ಕೃಷಿ ತಾಂತ್ರಿಕತೆಗಳು.
* ಆಧುನಿಕ ಕೃಷಿ ತಾಂತ್ರಿಕತೆ ಅಳವಡಿಕೆಯಲ್ಲಿ ಯುವ ಪೀಳಿಗೆ ಮತ್ತು ನವೋದ್ಯಮಿಗಳ ಪಾತ್ರ.
ನೀವು ಅಂಗಡಿಗಳನ್ನು ಹಾಕಲು ಬಯಸಿದರೆ ಕೆಳಗೆ ಕಾಣುವ qr code annu ಸ್ಕ್ಯಾನ್ ಮಾಡಿಕೊಳ್ಳಬಹುದು ಮತ್ತು ನೋಂದಣಿ ಮಾಡಿಕೊಳ್ಳಬಹುದು.
ಈ ಬಾರಿಯ ಕೃಷಿಮೇಳದಲ್ಲಿ ಅಂದಾಜು 15 ಲಕ್ಷಕ್ಕಿಂತಲೂ ಹೆಚ್ಚು ರೈತರು, ರೈತ ಮಹಿಳೆಯರು, ವಿಸ್ತರಣಾ ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಮಳಿಗೆಗಳನ್ನು ಬುಕ್ ಮಾಡಲು ಸಂಪರ್ಕ ಮಾಡಲು ಮೇಳದಲ್ಲಿ ರೈತರು ಅಥವಾ ಇತರೆ ಕಂಪನಿಯರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅಥವಾ ಪ್ರದರ್ಶನ ಮಾಡಲು ಮುಂಚಿತವಾಗಿ ಮಳಿಗೆಗಳನ್ನು ಬುಕ್ ಮಾಡಲು ಈ ಮೊಬೈಲ್ 8277478507, 0836-2214497ಸಂಪರ್ಕಿಸಬಹುದು.