ಆತ್ಮೀಯ ರೈತ ಬಾಂಧವರೇ,
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ನೀಡಲಾಗಿದೆ ಎಂದು ಧಾರವಾಡ ಕೃಷಿ ಇಲಾಖೆ ಅಧಿಕಾರಿಗಳು ಪ್ರಕಟಿಸಿದ್ದಾರೆ.
2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಯೋಜನೆಯನ್ನು ಅನುಷಾನಗೊಳಿಸುತ್ತಿದ್ದು ಆಸಕ್ತ ತೋಟಗಾರಿಕೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ರೈತರಿಗೆ 5 ಎಕರೆ ವರೆಗೆ ಶೇಕಡಾ 90 ರಷ್ಟು ಹಾಗೂ 5 ಎಕರೆ ಮೇಲ್ಪಟ್ಟ ಜಮೀನಿಗೆ ಶೇಕಡಾ 45 ರಷ್ಟು ಸಹಾಯಧನ ನೀಡಲಾಗುವದು. ಎಲ್ಲ ವರ್ಗದ ರೈತರಿಗೆ 12 ಎಕರೆ 20 ಗುಂಟೆ ವರೆಗೆ ಸಹಾಯಧನ ನೀಡಲಾಗುವುದು ಆದರೆ ತರಕಾರಿ ಮತ್ತು ಹೂ ಬೆಳೆಗಳಿಗೆ 5 ಎಕರೆ ಪ್ರದೇಶಕ್ಕೆ ಮಾತ್ರ ಸಹಾಯಧನ ನೀಡಲಾಗುವದು.
ಹೆಚ್ಚಿನ ಮಾಹಿತಿಗಾಗಿ ಅಮ್ಮಿನಭಾವಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ (9916114535), ಗರಗ ಸಹಾಯಕ ತೋಟಗಾರಿಕೆ ಅಧಿಕಾರಿ ಲಕ್ಷ್ಮೀ ಕುರಬೇಟ್ಟ (7353674533), ಧಾರವಾಡದ ಸಹಾಯಕ ತೋಟಗಾರಿಕೆ ಅಧಿಕಾರಿ ಮಹಾಂತೇಶ ಯಮಕನಮರಡಿ (8310143782) ಹಾಗೂ ಅಳ್ಳಾವರದ ಸಹಾಯಕ ತೋಟಗಾರಿಕೆ ಅಧಿಕಾರಿ ದೀಪ್ತಿ ವಾಲಿ (8310143782) ಅವರನ್ನು ಸಂಪರ್ಕಿಸಬಹುದು ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ಬೇಟಿ ನೀಡಬಹುದು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಲ ಸಂರಕ್ಷಣೆ ಮತ್ತು ಅದರ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲು ಭಾರತ ಸರ್ಕಾರ ಬದ್ಧವಾಗಿದೆ. ಈ ಪರಿಣಾಮಕ್ಕಾಗಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ನೀರಾವರಿ ವ್ಯಾಪ್ತಿಯನ್ನು ವಿಸ್ತರಿಸುವ ದೃಷ್ಟಿಯೊಂದಿಗೆ ರೂಪಿಸಲಾಗಿದೆ ‘ಹರ್ ಖೇತ್ ಕೋ ಪಾನಿ’ ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವ ‘ಒಂದು ಹನಿಗೆ ಹೆಚ್ಚು ಬೆಳೆ’ ಅನ್ನು ಕೇಂದ್ರೀಕೃತ ರೀತಿಯಲ್ಲಿ ಕೊನೆಯಿಂದ ಅಂತ್ಯದ ಪರಿಹಾರದೊಂದಿಗೆ. ಮೂಲ ನಿರ್ವಹಣೆ, ರಚನೆ, ಕ್ಷೇತ್ರ ವಿತರಣೆ, ಅಪ್ಲಿಕೇಶನ್ ಮತ್ತು ವಿಸ್ತರಣೆ ಚಟುವಟಿಕೆಗಳು. ಗೌರವಾನ್ವಿತ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಜುಲೈ 1, 2015 ರಂದು ನಡೆದ ತನ್ನ ಸಭೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ (PMKSY) ಅನುಮೋದನೆ ನೀಡಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ಲಿಸ್ಟ್ -(required Documents)
• ಪಹಣಿ(ಉತಾರ್) ಪತ್ರ ಕಡ್ಡಾಯ
• ರಹವಾಸಿ ಪತ್ರ
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್ ನಕಲು
* ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
* ನಾಟಿ ಮಾಡಲು ಉದ್ದೇಶಿಸಿರುವ ಜಮೀನಿನ ಪಹಣಿ
* ಭೂಮಿಯ ಕೈ-ಸ್ಕೆಚ್
* ಸಸಿಗಳ ವಿವರಗಳು (ಜಾತಿಗಳು, ಮೊಳಕೆಗಳ ಸಂಖ್ಯೆ, ಪಾಲಿ-ಬ್ಯಾಗ್ಗಳ ಗಾತ್ರ, ಇತ್ಯಾದಿ)
* ಅರ್ಜಿದಾರರ ಬ್ಯಾಂಕ್ ಖಾತೆಯ ವಿವರಗಳು.
ಹೆಚ್ಚಿನ ಮಾಹಿತಿಗಾಗಿ ನೀವು ಇಲ್ಲಿ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.myscheme.gov.in/
* ನಂತರ ಅಲ್ಲಿ ಅಗ್ರೀ ಕಲ್ಚರ್ ಸ್ಕೀಮ್ (ಕೃಷಿ ಯೋಜನೆ) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
• ನಂತರ ಅಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಮಾಹಿತಿ ಪಡೆಯಲು (Central schemes) ಮೇಲೆ ಕ್ಲಿಕ್ ಮಾಡಿ.
• ರಾಜ್ಯ ಸರ್ಕಾರದ ಯೋಜನೆಯ ಮಾಹಿತಿ ಪಡೆಯಲು (States schemes) ಮೇಲೆ ಕ್ಲಿಕ್ ಮಾಡಿ.
• ನಿಮಗೆ ಬೇಕಾದ ಸಂಪೂರ್ಣ ಮಾಹಿತಿ ಪಡೆಯಲು ಈ ವೆಬ್ಸೈಟ್ ಭೇಟಿ ನೀಡಿ.