ಸರ್ಕಾರದ ಗ್ಯಾರಂಟಿಗಳ ಎಲ್ಲ ಮಾಹಿತಿ ʼಯುವ ಕಣಜʼ ವೆಬ್ ಸೈಟ್ ನಲ್ಲಿ.

ನನ್ನ ರೈತ ಮಿತ್ರರೇ ರಾಜ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದ್ದು, ಈಗಾಗಲೇ ಹೊಸ ಸರ್ಕಾರವು ಕೂಡ ರಚನೆ ಆಗಿದೆ. ಹಾಗೂ ರೈತರು ಸಹ ಕೃಷಿ ಚಟುವಟಿಕೆಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ ಮಳೆ ಸಮಸ್ಯೆ ಎದುರಾಗಿದ್ದು ಈಗ ಸರ್ಕಾರವು ರೈತರ ಹಿತದೃಷ್ಟಿಯಿಂದ ಹಾಗೂ ರೈತರಿಗೆ ಕೃಷಿಯಲ್ಲಿ ಆರ್ಥಿಕ ಉತ್ತೇಜನ ನೀಡುವ ನಿಟ್ಟಿನಲ್ಲ ಹಾಗೂ ಸರ್ಕಾರವು ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀಡುವ ಪ್ರತಿಯೊಂದು ಸೇವೆಗಳು ರೈತರ ಮನೆ ಬಾಗಿಲಿಗೆ ತಲುಪಬೇಕು ಎಂಬ ಹಿತದೃಷ್ಟಿಯಿಂದ ಸರ್ಕಾರವು ಒಂದು ಹೊಸ ಯೋಜನೆಗೆ ಕೈ ಹಾಕುತ್ತಿದೆ. ಅದುವೇ ಯುವ ಕಣಜ ಯೋಜನೆ. ಏನಿದು ಯೋಜನೆ? ಜನರಿಗೆ ಇದರ ಲಾಭ ಏನು? ಎಂದು ಸಂಪೂರ್ಣ ವಿವರವಾದ ಮಾಹಿತಿ ನೋಡೋಣ ಬನ್ನಿ.

ಹೌದು ತಾಂತ್ರಿಕ ಸಹಾಯದಿಂದ ರಾಜ್ಯ ಸರ್ಕಾರದ 5 ಗ್ಯಾರಂಟಿಗಳನ್ನು ಒಳಗೊಂಡಂತೆ ಯಾವುದೇ ಜನಪರ ಯೋಜನೆಗಳ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ʼಯುವ ಕಣಜʼ ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆಯಲು ಸಹಾಯ ಮಾಡಿದ್ದಾರೆ. ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಲ್ಲಿ ತಮಗೆ ಅವಶ್ಯವಿರುವ ಮಾಹಿತಿ ಮತ್ತು ವಿವರ ಪಡೆಯಲು ಮತ್ತು ಗ್ರಾಮ ಪಂಚಾಯಿತಿಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವಾರು ವೆಬ್‌ಸೈಟ್ ಮತ್ತು ಪೋರ್ಟಲ್‌ಗಳನ್ನು ತಡಕಾಡಬೇಕಾಗಿತ್ತು. ಅನೇಕರಿಗೆ ಯಾವ ವೆಬ್‌ಸೈಟ್/ಪೋರ್ಟಲ್‌ನಲ್ಲಿ ಯಾವ ಮಾಹಿತಿ ಸಿಗುತ್ತದೆ ಎಂಬ ಗೊಂದಲ ಉಂಟಾಗಿತ್ತು. ಆದರೆ ಯುವ ಕಣಜ ಎಂಬ ಯೋಜನೆ ಮೂಲಕ ಸಂಪೂರ್ಣ ಐದು ಗ್ಯಾರಂಟಿ ಮಾಹಿತಿ ಪಡೆಯಬಹುದಾಗಿದೆ.

ಈ ಯೋಜನೆಯ ಸೇವೆಗಳು ಏನು? ಯಾವ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ?
ಮುಖ್ಯವಾಗಿ ಹೇಳಬೇಕೆಂದರೆ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆ ಮಾಹಿತಿ ಇನ್ನೂ ಸ್ವಲ್ಪ ಜನಗಳಿಗೆ ಲಾಭ ಹಾಗೂ ಅದರ ಮಾಹಿತಿಯೂ ಸಹ ದೊರೆತಿಲ್ಲ. ಅದಕ್ಕಾಗಿ ರೈತರಿಗೆ ಸರ್ಕಾರದಿಂದ ಸಿಗುವ ಎಲ್ಲ ಐದು ಗ್ಯಾರಂಟಿ ಯೋಜನೆ ಮಾಹಿತಿ ತಿಳಿಸಲು ಸರ್ಕಾರವು ಈ ಯುವ ಕಣಜ ಎಂಬ ಯೋಜನೆಗೆ ಕೈ ಹಾಕುತ್ತಿದೆ. ಈ ಯೋಜನೆಯ ಮೂಲಕ ಐದು ಗ್ಯಾರಂಟಿ ಲಾಭ ಮತ್ತು ಹಣದ ಸಹಾಯ ಪಡೆಯಲು ಸಹಾಯವಾಗುತ್ತದೆ.

ಯಾವ ಯಾವ ಇಲಾಖೆಗಳ ಯೋಜನೆಯ ಮಾಹಿತಿ ದೊರೆಯುತ್ತದೆ.
* ಕೃಷಿ ಇಲಾಖೆ
* ಸಹಕಾರ ಇಲಾಖೆ
* ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
* ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ
* ಪಶುಸಂಗೋಪನಾ ಇಲಾಖೆ
* ಕಾಲೇಜು ಶಿಕ್ಷಣ ಇಲಾಖೆ
* ಇಂಧನ ಇಲಾಖೆ
* ಸಾರ್ವಜನಿಕ ಶಿಕ್ಷಣ ಇಲಾಖೆ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ
* ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
* ಕೈಮಗ್ಗ ಮತ್ತು ಕಂದಾಯ ಇಲಾಖೆ
* ರೇಷ್ಮೆ ಕೃಷಿ ಇಲಾಖೆ
* ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
* ಜಲಾನಯನ ಅಭಿವೃದ್ಧಿ ಇಲಾಖೆ
* ಸಮಾಜ ಕಲ್ಯಾಣ ಇಲಾಖೆ
* ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ
* ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಇಲಾಖೆ
* ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

ಯುವ ಕಣಜ | ಅಧಿಕೃತ ವೆಬ್‌ಸೈಟ್


ನೀವು ಈ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಮೊಬೈಲಿನಲ್ಲಿ ಎಲ್ಲ ಸರ್ಕಾರಿ ಯೋಜನೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

Spread positive news

Leave a Reply

Your email address will not be published. Required fields are marked *