ಪ್ರೀಯ ರೈತರೇ ಈಗಾಗಲೇ ಎಲೆಕ್ಷನ್ ಹೊತ್ತಲ್ಲಿ ದಙಶದಲ್ಲಿ ಭಾರಿ ಬೆಳವಣಿಗೆ ನಡೆದಿದೆ. ಅದೇ ರೀತಿ ಈಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ದೇಶದ ರೈತರಿಗೆ ಕೇಂದ್ರ ಸರ್ಕಾರ ವಾರ್ಷಿಕವಾಗಿ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಈ 6 ಸಾವಿರ ರೂ.ಗಳ ಆರ್ಥಿಕ ನೆರವನ್ನು ವಾರ್ಷಿಕ ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಹಾಕಲಾಗುತ್ತದೆ. ಪ್ರತಿ ಕಂತಿನಡಿ ಡಿಬಿಟಿ ಮೂಲಕ ರೈತರ ಖಾತೆಗೆ 2 ಸಾವಿರ ರೂಪಾಯಿನಂತೆ ಇದುವರೆಗೆ ಒಟ್ಟು 16 ಕಂತುಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಫೆಬ್ರವರಿ 28 ರಂದು ಮಹಾರಾಷ್ಟ್ರದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ , ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16 ನೇ ಕಂತನ್ನು ಬಿಡುಗಡೆ ಮಾಡಿದರು. 16ನೇ ಕಂತು ಬಿಡುಗಡೆಯಾಗಿ ಮೂರು ತಿಂಗಳು ಕಳೆದಿವೆ. ಇದೀಗ 17ನೇ ಕಂತಿಗೆ ರೈತರು ಕಾತರದಿಂದ ಕಾಯುತ್ತಿದ್ದಾರೆ.
ಭಾರತ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸುವಿರಾ? ಅದರ ಬಗ್ಗೆ ಇಲ್ಲಿದೆ ಮಾಹಿತಿ.
ಮಾಧ್ಯಮ ವರದಿಗಳ ಪ್ರಕಾರ ಲೋಕಸಭೆ ಚುನಾವಣೆ ಫಲಿತಾಂಶ ನಂತರ ಕೇಂದ್ರ ಸರ್ಕಾರವು ಜೂನ್ ಅಥವಾ ಜುಲೈನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತು ಬಿಡುಗಡೆ ಮಾಡಬಹುದು. ಆದರೆ ಕಂತಿನ ಹಣ ಯಾವಾಗ ವರ್ಗಾವಣೆಯಾಗುತ್ತದೆ ಎಂಬ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಅದೇ ಸಮಯದಲ್ಲಿ ಯೋಜನೆಯಡಿಯಲ್ಲಿ ಇನ್ನೂ ಇ-ಕೆವೈಸಿ ಮಾಡದ ರೈತರು ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.
ಆದ್ದರಿಂದ ನೀವು 17 ನೇ ಕಂತಿನ ಪ್ರಯೋಜನವನ್ನು ಪಡೆಯಲು ಬಯಸಿದರೆ, ನಿಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ನೀವು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು. ಇದಲ್ಲದೇ ಯೋಜನೆಯಡಿ ಭೂದಾಖಲೆಗಳನ್ನು ಪರಿಶೀಲಿಸದೇ ಇರುವ ರೈತರು ಕೂಡ ಈ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.
ಅದೇ ಸಮಯದಲ್ಲಿ, ಯೋಜನೆಗೆ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪು ಮಾಹಿತಿಯನ್ನು ನಮೂದಿಸಿದ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ. ಯೋಜನೆಯಡಿಯಲ್ಲಿ ಇ-ಕೆವೈಸಿ ಮತ್ತು ಭೂ ಪರಿಶೀಲನೆ ಪೂರ್ಣಗೊಂಡಿರುವ ರೈತರು 17ನೇ ಕಂತು ಬಿಡುಗಡೆಯಾದ ನಂತರ ಅವರ ಖಾತೆಗೆ ಹಣವನ್ನು ಪಡೆಯುತ್ತಾರೆ.
ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆಯೋ ಇಲ್ಲವ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ವಿವರವವನ್ನು ತಿಳಿದುಕೊಳ್ಳೋಣ.
* ಮೊದಲಿಗೆ ಫಲಾನುಭವಿಗಳು ಪಿಎಂ ಕಿಸಾನ್ https://www.pmkisan.gov.in/ ಸಮ್ಮಾನ್ ನಿಧಿ ಎಂಬ ವೆಬ್ಸೈಟ್ ತೆರೆಯಬೇಕಾಗುತ್ತದೆ.
* ಆ ಮುಖಪುಟದಲ್ಲಿ ನೀವು ಕೆಳಗಡೆ ಬಂದಾಗ ನಿಮಗೆ ಅಲ್ಲಿ ಬೆನಿಫಿಶಿಯರಿ ಸ್ಟೇಟಸ್ (beneficiary status) ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
* ನಿಮಗಿಲ್ಲಿ ಚೆಕ್ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗುತ್ತದೆ.
• ಮೊಬೈಲ್ ನಂಬರ್
• ರಿಜಿಸ್ಟ್ರೇಷನ್ ನಂಬರ
ಇವೆರಡವುಗಳಿಂದ ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
* ಅದರಲ್ಲಿ ನೀವು “ಮೊಬೈಲ್ ನಂಬರ್” ಇಂದ ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಕೇಳಲಾಗುವ ಕ್ಯಾಪ್ಚ ನಮೂದಿಸಿ “ವಿವರವನ್ನು ಪಡೆಯಿರಿ” (get details) ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ- 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಹ ಸಂಪರ್ಕಿಸಬಹುದು. ಈ ಯೋಜನೆಗೆ ಸಂಬಂಧಿಸಿದ ನಿಮ್ಮ ಪ್ರತಿಯೊಂದು ಸಮಸ್ಯೆಯನ್ನು ಇಲ್ಲಿಯೂ ಪರಿಹರಿಸಲಾಗುವುದು.