ಪ್ರೀಯ ರೈತರೇ ಇವತ್ತು ನಾವು ಒಂದು ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರವು ರೈತರಿಗೆ ಎಷ್ಟು ಹಣ ನೀಡುತ್ತಾರೆ ಹಾಗೂ ರೈತರು ಈ ಯೋಜನೆಯ ಲಾಭ ಪಡೆಯಲು ಏನು ಮಾಡಬೇಕು? ಇದರಿಂದ ಏನೆಲ್ಲಾ ಉಪಯೋಗ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ? ಎಂದು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನಿರ್ಧಾರ ಹಾಗೂ ಮುಖ್ಯ ಗುರಿಯಾಗಿರುವ ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯದಿಂದ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯು (ಸ್ಕೀಮ್ ಪಾರ್ ಫಾರ್ಮಲೈಜೇಷನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್) (ಪಿಎಂಎಫ್ಎಂಇ)ಈ ಯೋಜನೆಯ ಲಾಭ ಪಡೆಯಲು ಅರ್ಹ ಫಲಾನುಭವಿಗಳಿಗೆ ಅರ್ಜಿ ಕರೆಯಲಾಗಿದೆ.
ಈ ಯೋಜನೆಯ ಅರ್ಹತೆಗಳು –
* 18 ವರ್ಷ ಮೇಲ್ಪಟ್ಟ ಆಸಕ್ತ ಫಲಾನುಭವಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದಾಗಿದೆ.
* ಹಾಗೆಯೇ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ವಿದ್ಯಾರ್ಹತೆಯ ಮಿತಿ ಇರುವುದಿಲ್ಲ.
* ಭಾರತದ ನಿವಾಸಿ ಆಗಿರಬೇಕು.
* ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹೊಸದಾಗಿ (ಅಪ್ಡೇಟ್)ಹೊಂದಿರಬೇಕು.
* ಇಲ್ಲಿವರೆಗೂ ಯಾವುದೇ ಯೋಜನೆಯ ಲಾಭ ಪಡದಿರಬಾರದು.
ಯೋಜನೆಯ ಮೊತ್ತ!
ಅರ್ಹ ಯೋಜನಾ ವೆಚ್ಚದ ಶೇ.35 ರಷ್ಟು ಮೌಲ್ಯದ ಸಾಲ-ಸಂಪರ್ಕವಿರುವ ಸಹಾಯಧನ ಜೊತೆಗೆ ಹೆಚ್ಚುವರಿ ಶೇ.15 ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನ ಒದಗಿಸಲಾಗುವುದು.(ಗರಿಷ್ಠ ಮಿತಿ 15 ಲಕ್ಷಗಳು), ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಚಟುವಟಿಕೆಗಳಾದ ಪ್ಯಾಕೇಜಿಂಗ್, ಜಾಹೀರಾತು, ಸಾಮಾನ್ಯ ಬ್ರಾಂಡ್ ಅಭಿವೃದ್ದಿ, ಚಿಲ್ಲರೆ ಮಾರಾಟ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮತ್ತಿತರ ಸರ್ಕಾರದಿಂದ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ. ಇದರ ಲಾಭವನ್ನು ಹಲವು ಆಸಕ್ತ ಉದ್ಯಮಿಗಳು ಪಡೆದುಕೊಂಡಿದ್ದು, ಸ್ವಂತವಾಗಿ ಆಹಾರ ಸಂಸ್ಕರಣೆ ಉದ್ಯಮ ಪ್ರಾರಂಭಿಸಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಸದುಪಯೋಗ ಪಡೆದುಕೊಂಡು ಹೊಸದಾಗಿ ಉದ್ಯಮವನ್ನು ಶುರುಮಾಡಿ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಆತ್ಮ ನಿರ್ಭರ್ ಭಾರತ ರೂಪಿಸಲು ಸಿದ್ಧವಾಗುತ್ತಿದೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ರೈತರು ತಾವು ತೆಗೆದುಕೊಂಡ ಸಾಲವನ್ನು
ಫಲಾನುಭವಿಯು 36 ತಿಂಗಳೊಳಗೆ 50% ಸಾಲವನ್ನು ಮರುಪಾವತಿಸಿದರೆ, ಉಳಿದ 50% ಸಾಲವನ್ನು ಬ್ಯಾಕ್-ಎಂಡ್ ಸಬ್ಸಿಡಿ ಎಂದು ಪರಿಗಣಿಸಲಾಗುತ್ತದೆ.
ಆದರೆ ಅದೇ ವೇಳೆಗೆ ಫಲಾನುಭವಿಯು 36 ತಿಂಗಳೊಳಗೆ ಸಾಲವನ್ನು ಮರುಪಾವತಿಸಲು ವಿಫಲವಾದರೆ, ಬ್ಯಾಕೆಂಡ್ ಸಬ್ಸಿಡಿಯಲ್ಲಿ 50% ಅನ್ನು ಸಾಲವಾಗಿ ಪರಿಗಣಿಸಲಾಗುತ್ತದೆ. ಇದು ಈ ಯೋಜನೆಯ ಒಂದು ಮುಖ್ಯ ನಿಯಮವಾಗಿದೆ.
ಅರ್ಜಿ ಸಲ್ಲಿಕೆ ಏಲ್ಲಿ?
ಆಸಕ್ತ ಫಲಾನುಭವಿಗಳು http://pmfme.mofpi.gov.in ಪೋರ್ಟಲ್ ಮೂಲಕ ಅರ್ಜಿ ನೋಂದಾಯಿಸಬಹುದಾಗಿದೆ. ಫಲಾನುಭವಿಗಳ ದಾಖಲೆ ಕ್ರೋಢೀಕರಣ, ವಿಸ್ತತ ಯೋಜನಾ ವರದಿ ತಯಾರಿಕೆ ಹಾಗೂ ಇತರೆ ಮಾರ್ಗದರ್ಶನಕ್ಕಾಗಿ ಈ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ನೀರಜಾ ಕೆ.ಜಿ. ದೂರವಾಣಿ ಸಂಖ್ಯೆ 8861422540 ನ್ನು ನೇರವಾಗಿ ಸಂಪರ್ಕಿಸುವುದು. ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರು(ವಿ.ತ), ಪಿ.ಎಂ.ಎಪ್.ಎಂ.ಇ ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಚೇರಿ ಮಡಿಕೇರಿ ಅವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೋಮಸುಂದರ ತಿಳಿಸಿದ್ದಾರೆ.