
ರೈತರ ಭೂಮಿಯ ಜಂಪ್ ಸರ್ವೆ ಪಹಣಿ ಸಮಸ್ಯೆಗೆ ಪರಿಹಾರ: 65 ವರ್ಷದ ವಿಘ್ನಕ್ಕೆ ಮುಕ್ತಿ
ಕಳೆದ 65 ವರ್ಷಗಳಿಂದ ಬಗೆಹರಿಯದೇ ಉಳಿದುಕೊಂಡಿದ್ದ ಕೊಪ್ಪಳ ಜಿಲ್ಲೆಯ ರೈತರ ಭೂಮಿಯ ಜಂಪ್ ಸರ್ವೆ ಪಹಣಿ ಸಮಸ್ಯೆಗೆ ಜಿಲ್ಲಾಡಳಿತ ಕೈಗೊಂಡ ತ್ವರಿತ ಕ್ರಮಕ್ಕೆ ಕಂದಾಯ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.ಖುದ್ದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲೆಯ ಸಾಧನೆ ಕಂಡು ಹರ್ಷ ವ್ಯಕ್ತ ಪಡಿಸಿರುವುದಲ್ಲದೇ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ಶ್ರಮವನ್ನು ಕೊಂಡಾಡಿ ಅಭಿನಂದನಾ ಪತ್ರ ಬರೆದು ಕಳುಹಿಸಿದ್ದಾರೆ. ಯಾರಿಗೆಲ್ಲಾ ಅಭಿನಂದನಾ ಪತ್ರ ಈ ಹಿಂದಿನ ಜಿಲ್ಲಾಧಿಕಾರಿ ನಲೀನ್ ಅತುಲ್, ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ, ಕೊಪ್ಪಳ ಹಾಗೂ…