ಹಣದ ವ್ಯವಹಾರಕ್ಕೆ ನಾಳೆಯಿಂದ ಸಿಕ್ಕಾಪಟ್ಟೆ ರೂಲ್ಸ್..!

ನಾಳೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ ನೀರು-ಕರೆಂಟು, ಬಸ್ಸು-ಮೆಟ್ರೋ, ಬೇಳೆ-ಕಾಳು, ಎಣ್ಣೆ-ಬೆಣ್ಣೆ ಹೀಗೆ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರಿದೆ. ಭಾರತ ದುಬಾರಿ ದುನಿಯಾ ಆಗಿದೆ. (Price hikes) ಏಪ್ರಿಲ್ (April) ಒಂದರಿಂದ, ಅಂದ್ರೆ ನಾಳೆಯಿಂದ ನೂತನ ಆರ್ಥಿಕ ವರ್ಷ ಆರಂಭಗೊಳ್ಳುತ್ತಿದೆ.

ಕೆಲವು ಬೆಲೆಗಳು ಡಬಲ್ ಆಗ್ತಿದ್ದು, ಜನರ ಜೇಬಿಗೆ ಕತ್ತರಿ ಬೀಳಲಿದೆ. ಹಣಕಾಸು, ಬ್ಯಾಂಕಿಂಗ್, (Banking) ಸಾರಿಗೆ, ತೆರಿಗೆ ಸೇರಿದಂತೆ ಹಲವು ಬದಲಾಗಲಿದ್ದು ನಾಳೆಯಿಂದ ನಗದು ವ್ಯವಹಾರ ಮತ್ತಷ್ಟು ದುಬಾರಿಯಾಗಲಿದೆ.

ಕ್ಯಾಶ್ ಡೆಪಾಸಿಟ್ಗೆ ಹಲವು ನಿಯಮ

ಪ್ಯಾನ್‌ಕಾರ್ಡ್ ಇದ್ದವರು ಉಳಿತಾಯ ಖಾತೆಗೆ ವರ್ಷಕ್ಕೆ ಗರಿಷ್ಠ 10 ಲಕ್ಷ ಡೆಪಾಸಿಟ್ ಮಾಡ್ಬೋದು. ಪ್ಯಾನ್‌ಕಾರ್ಡ್ ಇಲ್ಲದವರು ಉಳಿತಾಯ ಖಾತೆಗೆ ವರ್ಷಕ್ಕೆ ಡೆಪಾಸಿಟ್ ಗರಿಷ್ಠ ಮಿತಿ 5 ಲಕ್ಷ.
ಕರೆಂಟ್ ಅಕೌಂಟ್‌ಗೆ ವರ್ಷಕ್ಕೆ ಗರಿಷ್ಠ ಮಿತಿ 50 ಲಕ್ಷ ಡೆಪಾಸಿಟ್ ಮಾಡಬಹುದು. ಗರಿಷ್ಠ ಮಿತಿಗಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದರೆ ಸ್ಪಷ್ಟನೆ ಕಡ್ಡಾಯ.
ಹಣ ವಿತ್‌ಡ್ರಾ ಮಿತಿ ಬದಲಾವಣೆ?
ನೀವು ಐಟಿಆರ್ ರಿಟನ್ಸ್ ಮಾಡದಿದ್ದರೆ ಹಣ ವಿತ್ ಡ್ರಾ ಮಿತಿ ವರ್ಷಕ್ಕೆ ಗರಿಷ್ಠ 20 ಲಕ್ಷ ಅಷ್ಟೇ. 20 ಲಕ್ಷಕ್ಕಿಂತ ಹೆಚ್ಚು ವಿತ್ ಡ್ರಾ ಮಾಡಿದ್ರೆ 2% ಟಿಡಿಎಸ್ ಕಟ್ ಆಗುತ್ತೆ. 1 ಕೋಟಿಗಿಂತ ಹೆಚ್ಚು ವಿತ್ ಡ್ರಾ ಮಾಡಿದ್ರೆ 5% ಟಿಡಿಎಸ್ ಕಟ್ ಆಗುತ್ತೆ.

ಇನ್ಮುಂದೆ ಕ್ರೆಡಿಟ್ ಕಾರ್ಡ್ ಪಡೆಯಲು, ನವೀಕರಿಸಲು ಪ್ಯಾನ್ ಕಡ್ಡಾಯ. ಯುಪಿಐ ವಿತ್ ಡ್ರಾ ಮಾಡಿದ್ರೆ 23 ರೂಪಾಯಿ ಶುಲ್ಕ ವಿಧಿಸ್ತಾರೆ. ಎಟಿಎಂ ವಿತ್ ಡ್ರಾ ಮಿತಿ ಮೀರಿದ್ರೆ 25 ರೂಪಾಯಿ ಶುಲ್ಕ ಕಟ್ಟಬೇಕು.
ನಗದು ವ್ಯವಹಾರಕ್ಕೆ ಟಫ್ ರೂಲ್ಸ್. ಆಸ್ತಿ ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದ್ರೆ 100% ದಂಡ ವಿಧಿಸಬಹುದು. ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚು ಕ್ಯಾಶ್ ಪಡೆಯುವಂತಿಲ್ಲ. ವಾಪಾರಸ್ಥರು 2 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಪಡೆದರೆ ಹಣದ ಮೇಲೆ 100% ದಂಡ ಹಾಕಲಾಗುತ್ತದೆ. ಕೈಸಾಲ ಕೂಡ 20 ಸಾವಿರಕ್ಕಿಂತ ಜಾಸ್ತಿ ನಗದು ರೂಪದಲ್ಲಿ ತೆಗೆದುಕೊಳ್ಳಬಾರದು.

ಹೋಟೆಲ್‌ಗೆ ನಿಯಮ ಏನು?

ಹೋಟೆಲ್‌ನಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಬಿಲ್‌ಗೆ ಪ್ಯಾನ್ ಬೇಕೇ ಬೇಕು.

ಬಾಡಿಗೆದಾರರೇ ಇಲ್ನೋಡಿ

ಮನೆ, ಕಚೇರಿ ಬಾಡಿಗೆಗೆ ಕೊಡುವಾಗ 20 ಸಾವಿರಕ್ಕಿಂತ ಜಾಸ್ತಿ ನಗದು ರೂಪದಲ್ಲಿ ಸೆಕ್ಯುರಿಟಿ ಡೆಪಾಸಿಟ್ ತೆಗೆದುಕೊಂಡರೆ 100% ದಂಡ ಬೀಳುತ್ತೆ. ಬಾಡಿಗೆದಾರರು ಮನೆ ಖಾಲಿ ಮಾಡುವಾಗ ಸೆಕ್ಯುರಿಟಿ ಡೆಪಾಸಿಟ್ 20 ಸಾವಿರಕ್ಕಿಂತ ಹೆಚ್ಚು ನಗದು ರೂಪದಲ್ಲಿ ವಾಪಸ್ ನೀಡಿದರೆ 100% ದಂಡ ಬೀಳುತ್ತೆ.

Spread positive news

Leave a Reply

Your email address will not be published. Required fields are marked *