‘ಗ್ಯಾಸ್ ಸಿಲಿಂಡರ್’ ಬುಕ್ಕಿಂಗ್ ಗೆ ಹೊಸ ಮಾರ್ಗಸೂಚಿ ಪ್ರಕಟ, ಈ ನಿಯಮಗಳ ಪಾಲನೆ ಕಡ್ಡಾಯ

ದೇಶದಲ್ಲಿ LPG ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಬುಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ. ಹೊಸ ನಿಯಮದ ಪ್ರಕಾರ, ಒಬ್ಬ ಗ್ರಾಹಕರು ಇನ್ನು ಮುಂದೆ ಮಿತಿಯಿಲ್ಲದೆ ಸಿಲಿಂಡರ್ ಪಡೆಯಲು ಸಾಧ್ಯವಿಲ್ಲ.

ಹೌದು. ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ಸಾಗಾಟ ತಡೆಯಲು ಮತ್ತು ಪಾರದರ್ಶಕ ವಿತರಣೆ ಖಚಿತಪಡಿಸಲು ಕೇಂದ್ರ ಸರ್ಕಾರ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿವೆ. ಈ ಹೊಸ ನಿಯಮದ ಅನ್ವಯ, ಒಬ್ಬ ಗ್ರಾಹಕರು ತಿಂಗಳಿಗೆ ಗರಿಷ್ಠ 2 ಮತ್ತು ವರ್ಷಕ್ಕೆ 15 ಸಿಲಿಂಡರ್‌ಗಳನ್ನು ಮಾತ್ರ ಬುಕ್ ಮಾಡಲು ಅವಕಾಶವಿದ್ದು, ಸಬ್ಸಿಡಿ ಮಿತಿಯ ನಂತರ ಹೆಚ್ಚಿನ ಸಿಲಿಂಡರ್ ಬೇಕಿದ್ದರೆ ಮನೆಯಲ್ಲಿ ನಡೆಯುವ ಸಮಾರಂಭ ಅಥವಾ ಅತಿಥಿಗಳ ವಿವರಗಳನ್ನು ಆಪ್ ಮೂಲಕ ನೀಡುವುದು ಕಡ್ಡಾಯವಾಗಿದೆ. ಇದರೊಂದಿಗೆ ವಿತರಣೆಯ ವೇಳೆ ಒಟಿಪಿ (DAC) ವ್ಯವಸ್ಥೆ ಮತ್ತು ಇ-ಕೆವೈಸಿಯನ್ನು ಕಡ್ಡಾಯಗೊಳಿಸಲಾಗಿದ್ದು, ಈ ನಿಯಮಗಳನ್ನು ಪಾಲಿಸದಿದ್ದರೆ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಹೊಸ ನಿಯಮಗಳು

* ಬುಕಿಂಗ್ ಮಿತಿ: ಒಬ್ಬ ಸಾಮಾನ್ಯ ಗ್ರಾಹಕರು ಒಂದು ತಿಂಗಳಿಗೆ ಗರಿಷ್ಠ 2 ಸಿಲಿಂಡರ್ಗಳನ್ನು ಮಾತ್ರ ಬುಕ್ ಮಾಡಬಹುದು. ವರ್ಷಕ್ಕೆ ಒಟ್ಟು 15 ಸಿಲಿಂಡರ್ಗಳ ಮಿತಿಯನ್ನು ಹೇರಲಾಗಿದೆ.

ಸಬ್ಸಿಡಿ ಸಿಲಿಂಡರ್: ಪ್ರತಿ ಹಣಕಾಸು ವರ್ಷದಲ್ಲಿ (ಏಪ್ರಿಲ್ 1 ರಿಂದ ಮಾರ್ಚ್ 31) ಸರ್ಕಾರವು ನೀಡುವ 12 ಸಬ್ಸಿಡಿ ಸಿಲಿಂಡರ್ಗಳ ಸೌಲಭ್ಯ ಮುಂದುವರಿಯಲಿದೆ.

* ಹೆಚ್ಚುವರಿ ಸಿಲಿಂಡರ್ ಪಡೆಯುವುದು ಹೇಗೆ ?: ನೀವು ಈಗಾಗಲೇ 12 ಸಬ್ಸಿಡಿ ಸಿಲಿಂಡರ್ಗಳನ್ನು ಬಳಸಿದ್ದು, ಇನ್ನೂ ಹೆಚ್ಚಿನ ಸಿಲಿಂಡರ್ ಬೇಕಿದ್ದರೆ ‘Hello BPCL’ ಆಪ್ ಮೂಲಕ ವಿವರ ನೀಡಬೇಕು. ಮನೆಯಲ್ಲಿ ಮದುವೆ, ಸಮಾರಂಭ ಅಥವಾ ಅತಿಥಿಗಳು ಬರುವ ಕಾರಣಗಳನ್ನು ಅಲ್ಲಿ ನಮೂದಿಸಬೇಕಾಗುತ್ತದೆ.

* OTP ಕಡ್ಡಾಯ (DAC): ಸಿಲಿಂಡರ್ ವಿತರಣೆಯ ಸಮಯದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಅಥವಾ ಒಟಿಪಿಯನ್ನು ನೀಡುವುದು ಕಡ್ಡಾಯವಾಗಿದೆ.

* ಇ-ಕೆವೈಸಿ (e-KYC): ಗ್ಯಾಸ್ ಸಂಪರ್ಕಕ್ಕೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿರಬೇಕು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಮಾತ್ರ ಬುಕಿಂಗ್’ಗೆ ಬಳಸಬೇಕು.

*ಬುಕಿಂಗ್ ನಡುವಿನ ಅಂತರ: ಈ ಹಿಂದೆ ಒಂದು ಸಿಲಿಂಡರ್ ಪಡೆದ 21 ದಿನಗಳ ನಂತರವಷ್ಟೇ ಮುಂದಿನ ಬುಕಿಂಗ್ಗೆ ಅವಕಾಶವಿತ್ತು. ಈಗ ಹೊಸ ವ್ಯವಸ್ಥೆಯಡಿ ಈ ಕಾಯುವಿಕೆ ಅವಧಿಯಲ್ಲಿ ಬದಲಾವಣೆ ತರಲಾಗಿದೆ.

Spread positive news

Leave a Reply

Your email address will not be published. Required fields are marked *