Arecanut : ಅಡಿಕೆ ಕ್ಯಾನ್ಸರ್ ರೋಗಕ್ಕೆ ಕಾರಣ ಎಂಬುದು ಶುದ್ಧ ಸುಳ್ಳು.

Arecanut : ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಿಕೆಯು ಬಾಯಿ ಕ್ಯಾನ್ಸರ್‌ ಕಾರಕ ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಬೆಳೆಗಾರರ ಆತಂಕವನ್ನು ಹೆಚ್ಚಿಸಿದೆ. ಇತ್ತ ಅಡಿಕೆ ಮಾರಾಟ ಸಹಕಾರ ಸಂಘ, ಒಕ್ಕೂಟಗಳು ಕೆಂಡವಾಗಿ ವರದಿಯನ್ನು ಒಪ್ಪುವುದಿಲ್ಲ .

ಕೇಂದ್ರ ಸರ್ಕಾರದ ಮಧ್ಯಂತರ ವರದಿ –
ಕೇವಲ ರಾಜ್ಯ ಮಟ್ಟದ ಸಮಿತಿಯಷ್ಟೇ ಅಲ್ಲದೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಧ್ಯಂತರ ವರದಿಯೂ ಸಹ ಇದೇ ಅಂಶವನ್ನು ಎತ್ತಿ ತೋರಿಸಿದೆ. ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಎಂದು ವರದಿ ಹೇಳಿದೆ.
ಅಡಿಕೆ ಮತ್ತು ಅಡಿಕೆ ಹಾಳೆಯು ಕ್ಯಾನ್ಸರ್ ಕಾರಕ ಎಂಬುದರ ಬಗ್ಗೆ ಸುದ್ದಿಗಳು ಹರಿದಾಡಿದ ಪರಿಣಾಮವಾಗಿ, ಈ ಬಗ್ಗೆ ಅಧ್ಯಯನ ನಡೆಸಲು ಎಂ. ಎಸ್. ರಾಮಯ್ಯ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿತ್ತು. ಅಧ್ಯಯನ ವರದಿ ಪ್ರಕಾರ ಅಡಿಕೆ ಮತ್ತು ಅಡಿಕೆ ಹಾಳೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂದು ಗೊತ್ತಾಗಿದೆ.

ಅಡಿಕೆ ಮತ್ತು ಅಡಿಕೆ ಹಾಳೆಯು ಕ್ಯಾನ್ಸರ್ ಕಾರಕ ಎಂಬುದರ ಬಗ್ಗೆ ಸುದ್ದಿಗಳು ಹರಿದಾಡಿದ ಪರಿಣಾಮವಾಗಿ, ಈ ಬಗ್ಗೆ ಅಧ್ಯಯನ ನಡೆಸಲು ಎಂ. ಎಸ್. ರಾಮಯ್ಯ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿತ್ತು. ಅಧ್ಯಯನ ವರದಿ ಪ್ರಕಾರ ಅಡಿಕೆ ಮತ್ತು ಅಡಿಕೆ ಹಾಳೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂದು ಗೊತ್ತಾಗಿದೆ. ಕೇಂದ್ರ ಸರ್ಕಾರದ ಮಧ್ಯಂತರ ವರದಿಯೂ ಇದನ್ನೇ ಹೇಳುತ್ತದೆ. ಆದರೆ, ದಿನಪೂರ್ತಿ ಅಡಿಕೆ ಜಗಿಯುವುದರಿಂದ ಕೆಲ ಸಮಸ್ಯೆಗಳಿವೆ ಎಂದೂ ಹೇಳಿದೆ. ಅಂತಿಮ ವರದಿ ಬಂದ ನಂತರ ಎಲ್ಲವು ಸ್ಪಷ್ಟವಾಗಲಿದೆ.”

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್‌)
* ಕನಿಷ್ಠ – 54,300 ರೂಪಾಯಿ
* ಗರಿಷ್ಠ – 81,740 ರೂಪಾಯಿ

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌)
* ಕನಿಷ್ಠ – 45,199 ರೂಪಾಯಿ
* ಗರಿಷ್ಠ – 56509 ರೂಪಾಯಿ

ಶಿವಮೊಗ್ಗ ಮಾರುಕಟ್ಟೆಯಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್‌)
* ಕನಿಷ್ಠ – 22,109 ರೂಪಾಯಿ
* ಗರಿಷ್ಠ – 37,089 ರೂಪಾಯಿ

ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಸಿಪ್ಪಿಗೋಟು ಅಡಿಕೆ ಧಾರಣೆ (ಕ್ವಿಂಟಾಲ್‌)
* ಕನಿಷ್ಠ – 12,500 ರೂಪಾಯಿ
* ಗರಿಷ್ಠ – 12,500 ರೂಪಾಯಿ

ಭದ್ರಾವತಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌)
* ಕನಿಷ್ಠ – 41,199 ರೂಪಾಯಿ
* ಗರಿಷ್ಠ – 54,069 ರೂಪಾಯಿ.

Spread positive news

Leave a Reply

Your email address will not be published. Required fields are marked *