ರೈತರೇ ನೀವು ಸ್ವಯಂ ಉದ್ಯೋಗ ಮಾಡಲು ಬಯಸುತ್ತಿದ್ದೀರಾ? ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ತರುವ ‘ಕುರಿ ಮತ್ತು ಮೇಕೆ ಸಾಕಾಣಿಕೆ’ಯತ್ತ ನಿಮ್ಮ ಚಿತ್ತವಿದೆಯೇ? ಹಾಗಾದರೆ ನಿಮಗೊಂದು ಬಂಪರ್ ಸುದ್ದಿ ಇಲ್ಲಿದೆ! ದಯವಿಟ್ಟು ಈ ಮಾಹಿತಿ ಓದಿ ಯೋಜನೆ ಲಾಭ ಪಡೆಯಿರಿ.
ಕುರಿ ಸಾಕಾಣಿಕೆ ಯೋಜನಾ ವರದಿ (Project Report) ಎಂದರೆ ಕುರಿ ಸಾಕಾಣಿಕೆ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ ಸಂಪೂರ್ಣ ಯೋಜನೆ, ಇದು ವೆಚ್ಚ, ಲಾಭ, ಸರ್ಕಾರಿ ಸಹಾಯಧನ (National Livestock Mission, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ), ಮತ್ತು ಅಗತ್ಯವಿರುವ ತಳಿಗಳು, ಶೆಡ್ ನಿರ್ಮಾಣ, ಮೇವು ನಿರ್ವಹಣೆ ಮತ್ತು ಮಾರುಕಟ್ಟೆ ಮುಂತಾದ ವಿವರಗಳನ್ನು ಒಳಗೊಂಡಿರುತ್ತದೆ. ಈ ವರದಿಯು ಬ್ಯಾಂಕಿಂಗ್ ಸಾಲ ಪಡೆಯಲು ಮತ್ತು ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಅವಶ್ಯಕವಾಗಿದ್ದು, ಇದರಲ್ಲಿ ಪ್ರಮುಖವಾಗಿ ಘಟಕದ ಗಾತ್ರ (ಉದಾ: 20+1, 500+25), ಹಣಕಾಸಿನ ವಿವರ, ತರಬೇತಿ, ಮತ್ತು ಜಮೀನಿನ ದಾಖಲೆಗಳಂತಹ ಅಂಶಗಳು ಇರಬೇಕು.
ಇತ್ತೀಚಿನ ದಿನಗಳಲ್ಲಿ ಕುರಿ-ಮೇಕೆ ಸಾಕಾಣಿಕೆ ಅತ್ಯಂತ ಲಾಭದಾಯಕ ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ. ಆದರೆ, ಸರಿಯಾದ ಮಾಹಿತಿ ಇಲ್ಲದೆ ನೇರವಾಗಿ ಬಂಡವಾಳ ಹೂಡುವುದು ನಷ್ಟಕ್ಕೆ ದಾರಿ ಮಾಡಿಕೊಡಬಹುದು. ಇದಕ್ಕಾಗಿಯೇ, ವೈಜ್ಞಾನಿಕ ರೀತಿಯಲ್ಲಿ ಸಾಕಾಣಿಕೆ ಹೇಗೆ ಮಾಡಬೇಕು ಎಂಬುದನ್ನು ಕಲಿಸಲು ‘ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI)’ ಸಂಪೂರ್ಣ ಉಚಿತ ತರಬೇತಿಯನ್ನು ಆಯೋಜಿಸಿದೆ. ಕೇವಲ ತರಬೇತಿ ಅಷ್ಟೇ ಅಲ್ಲ, ಈ ಉದ್ಯಮ ಆರಂಭಿಸಲು ಸರ್ಕಾರದಿಂದ ಸಿಗುವ ಲಕ್ಷಾಂತರ ರೂಪಾಯಿ ಸಬ್ಸಿಡಿ ಯೋಜನೆಗಳ ಮಾಹಿತಿಯೂ ಇಲ್ಲಿದೆ. ಈ ಸುವರ್ಣಾವಕಾಶವನ್ನು ಮಿಸ್ ಮಾಡ್ಕೊಬೇಡಿ.
ಸರ್ಕಾರಿ ಯೋಜನೆಗಳು –
- ರಾಷ್ಟ್ರೀಯ ಜಾನುವಾರು ಮಿಷನ್ (NLM): ತಳಿ ಸಂವರ್ಧನಾ ಘಟಕಗಳಿಗೆ 50% ಸಬ್ಸಿಡಿ (₹50 ಲಕ್ಷದವರೆಗೆ).
- ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: 20+1 ಘಟಕಗಳಿಗೆ 75% ಸಾಲ/ಸಬ್ಸಿಡಿ ಹಾಗೂ 25% ಫಲಾನುಭವಿ ವಂತಿಕೆ.
ಕಿಸಾನ್ ಕ್ರೆಡಿಟ್ ಕಾರ್ಡ್ –
ಈ ಕಾರ್ಯಕ್ರಮವು ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಹಂದಿ ಮತ್ತು ಮೊಲ ಸಾಕಾಣಿಕೆ ಕಸುಬುಗಳಲ್ಲಿ ತೊಡಗಿಸಿಕೊಂಡ ರೈತರಿಗೆ ಅಲ್ಪಾವದಿಯ ದುಡಿಯುವ ಬಂಡವಾಳಕ್ಕೆ ಆರ್ಥಿಕ ನೆರವು ನೀಡುವ ಸದುದ್ದೇಶ ಹೊಂದಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬಡ್ಡಿ ರಿಯಾಯಿತಿ ಸೌಲಭ್ಯವು ರೂ. 3 ಲಕ್ಷಗಳವರೆಗೆ ದೊರೆಯಬಹುದಾಗಿದ್ದು, ಪ್ರತಿ ರೈತರಿಗೆ ರೂ.1.60 ಲಕ್ಷ ಸಾಲ ಸೌಲಭ್ಯವನ್ನು ಯಾವುದೇ ಭದ್ರತೆಯಿಲ್ಲದೆ ಪಡೆಯುವ ಅವಕಾಶವಿರುತ್ತದೆ.
ಎಷ್ಟು ಬಡ್ಡಿದರದಲ್ಲಿ ಸಾಲ ಸಿಗುತ್ತದೆ?
ಕಿಸಾನ್ ಕ್ರೆಡಿಟ್ ಕಾರ್ಡ್‍ನಿಂದ ಪಡೆಯುವ ಸಾಲಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ನೀಡುತ್ತಿದ್ದು, ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಹೆಚ್ಚುವರಿಯಾಗಿ ವಾರ್ಷಿಕ ಶೇ. 3 ರಷ್ಟು ಬಡ್ಡಿ ಸಹಾಯಧನದ ಸೌಲಭ್ಯವನ್ನು ಸಹಾ ಪಡೆಯಬಹುದಾಗಿದೆ.


