ಜನನ ಮರಣ ಪತ್ರ : ಪ್ರೀಯ ಸಾರ್ವಜನಿಕರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಮಾಹಿತಿ ನೀಡುತ್ತೇನೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಅನೇಕ ಹೊಸ ಹೊಸ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಅದೇ ರೀತಿ ಈಗ ಈ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ 1960 ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ 1970 ಮತ್ತು ಪುನರ್ ರಚಿತ ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ ನಿಯಮ 1990 ರ ರನ್ವಯ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದೆ.
ಅದೇ ರೀತಿ ಈಗ ಪ್ರಸ್ತುತ ಜನನ ಮತ್ತು ಮರಣ ನೋಂದಣಿಯನ್ನು 2015 ರ ಏಪ್ರಿಲ್ 1 ರಿಂದ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಜನ್ಮ ತಂತ್ರಾಂಶದ ಮೂಲಕ ಆನ್ಲೈನ್ ನೋಂದಣಿಯನ್ನು ನಿರ್ವಹಿಸಲಾಗುತ್ತಿದೆ. ಅದಕ್ಕಾಗಿ ನೀವು ನೋಡುತ್ತಿರುವ ಹಾಗೆ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಹೇಳುವ ಎಲ್ಲಾ ನಿಯಮಗಳು ಪ್ರಸ್ತುತ ಜಾರಿಯಲ್ಲಿವೆ.
ತಡವಾಗಿ ನೋಂದಣಿಗೆ ಎಷ್ಟು ಶುಲ್ಕ?
- 21 ದಿನಗಳ ನಂತರ, 30 ದಿನಗಳೊಳಗೆ: ರೂ. 2/- ತಡ ಶುಲ್ಕ.
- 30 ದಿನಗಳ ನಂತರ, 1 ವರ್ಷದೊಳಗೆ: ತಹಶೀಲ್ದಾರ್/ಕಮಿಷನರ್ ಲಿಖಿತ ಅನುಮತಿ ಮತ್ತು ರೂ. 5/- ಶುಲ್ಕ.
- 1 ವರ್ಷದ ನಂತರ: ಮೊದಲ ದರ್ಜೆ ಮ್ಯಾಜಿಸ್ಟ್ರೇಟ್ ಆದೇಶ ಮತ್ತು ರೂ. 10/- ಶುಲ್ಕ.
- ಕಾಯಿದೆ ಮತ್ತು ನಿಯಮಗಳು –
- ಈ ಕಾಯಿದೆ, 1969.
- ಕರ್ನಾಟಕ ಜನನ ಮತ್ತು ಮರಣ ನೋಂದಣಿ ನಿಯಮಗಳು, 1999.
ಜನನ ಮರಣ ನೋಂದಣಿಯಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಪ್ರಮುಖ ಅಂಶಗಳು –
- ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಮೂನೆ-1 ರ ಕಾಲಂ 4 ಮತ್ತು 5 ರಲ್ಲಿ ತಂದೆ ತಾಯಿಗಳ ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ ನಮೂದಿಸುವುದು.
- ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಮೂನೆ-2 ರಲ್ಲಿ ಕಾಲಂ 6 ರಲ್ಲಿ ಆಧಾರ್ ಸಂಖ್ಯೆ, ಜನನದ ದಿನಾಂಕ ವಯಸ್ಸು ಲಭ್ಯವಿಲ್ಲದಿದ್ದಲ್ಲಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ ನಮೂದಿಸುವುದು.
- ಎಲ್ಲಾ ಸರ್ಕಾರಿ ಆಸ್ಪತ್ರೆ/ಖಾಸಗಿ ಆಸ್ಪತ್ರೆ ಹಾಗೂ ಮನೆಯಲ್ಲಿ ಸಂಭವಿಸುವ ಜನನ/ ಮರಣ ಪ್ರಮಾಣ ಪತ್ರಗಳನ್ನು 21 ದಿನಗಳ ಒಳಗಾಗಿ ವಿತರಿಸುವಂತೆ ಕೊಡಗು ಜಿಲ್ಲೆ ಕುಶಾಲನಗರ ಪುರಸಭೆ ಜನನ/ ಮರಣ ನೊಂದಾಣಾಧಿಕಾರಿ ಅವರು ತಿಳಿಸಿದ್ದಾರೆ.
ಅದೇ ರೀತಿ ಈಗ ಸರ್ಕಾರವು ಗ್ರಾಮಗಳ ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡಿದೆ. ರೈತರು ಸಹ ಉತ್ಸುಕರಾಗಿ ಇದರ ಬಗ್ಗೆ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಈಗಾಗಲೇ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸುವ ಮತ್ತು ಆಸ್ತಿ ಮಾಲೀಕರಿಗೆ ಕಾನೂನುಬದ್ಧ ಹಕ್ಕು ನೀಡುವ ಉದ್ದೇಶದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇ-ಸ್ವತ್ತು 2.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.
ಅಕ್ರಮ ಲೇಔಟ್ ಆಸ್ತಿಗಳಿಗೂ ಸಿಗಲಿದೆ ಮುಕ್ತಿ
ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ನೆಲೆಸಿರುವ ಜನರಿಗೆ ಈ ಯೋಜನೆಯಿಂದ ಭಾರೀ ಅನುಕೂಲವಾಗಲಿದೆ. ಈಗಾಗಲೇ ಇಂತಹ ಬಡಾವಣೆಗಳಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಮುಂತಾದ ಮೂಲಸೌಕರ್ಯಗಳನ್ನು ಪಂಚಾಯತಿಗಳು ಒದಗಿಸುತ್ತಿವೆ. ಆದರೆ ತೆರಿಗೆ ಸಂಗ್ರಹವಾಗದ ಕಾರಣ ಗ್ರಾಮ ಪಂಚಾಯತಿಗಳಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿತ್ತು.
ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಜನತೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಹೇಗೆಂದರೆ ಲೈಟರ್ ಕೈಯಲ್ಲಿ ಹಿಡಿದು ತಾಸುಗಟ್ಟಲೆ ಸರದಿ ಸಾಲಿನಲ್ಲೋ, ಜನಸ್ಪಂದನ ಕಾರ್ಯಕ್ರಮದಲ್ಲೋ ನಿಂತು ತಮ್ಮ ಸಮಸ್ಯೆ ಪರಿಹರಿಸಿ ಎನ್ನುವ ವ್ಯವಸ್ಥೆ ಬದಲು ಮಾಡಿದ್ದಾರೆ. ರಾಜ್ಯದ ಸಾರ್ವಜನಿಕರಾದಂತ ನೀವುಗಳು ನಿಮ್ಮ ಸಮಸ್ಯೆಗಳನ್ನು ಸಿಎಂಗೆ ದೂರಿನ ಮೂಲಕ ನೀಡಬೇಕಾದರೇ, ಜಸ್ಟ್ ಒಂದು ಎಕ್ಸ್ ಪೋಸ್ಟ್ ಸಾಕಾಗಿದೆ.
ಈಗಾಗಲೇ ನೀವು ಸಹ ಹಲವಾರು ಸಮಸ್ಯೆಗಳಿಗೆ ಎದುರಾಗುತ್ತಿದ್ದಿರಿ. ಅದಕ್ಕಾಗಿ ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಿಮಗೂ ಅವಕಾಶ ಸಿಗುವ ಕಾಲ ಬಂದಿದೆ. ಏನೆಂದರೆ ಜಸ್ಟ್ ಒಂದು ಎಕ್ಸ್ ಪೋಸ್ಟ್ ಸಾಕಾಗಿದೆ. ಆ ಪೋಸ್ಟ್ ಗೆ ಪ್ರತ್ಯುತ್ತರ ಬಂದು, ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತ ಸಿಗಲಿದೆ ಎಂಬುದು ಸಿಎಂ ಕಚೇರಿಯ ಮಾಹಿತಿ.

