ನಮ್ಮ ಹೊಲ ನಮ್ಮ ದಾರಿ : ಕರ್ನಾಟಕ ಸರ್ಕಾರವು “ನಮ್ಮ ಹೊಲ ನಮ್ಮ ದಾರಿ” ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ರೈತರ ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನವನ್ನು ಒದಗಿಸಲಾಗುತ್ತದೆ. ಇದರಿಂದ ಕೃಷಿ ಉತ್ಪನ್ನಗಳ ಸಾಗಾಣಿಕೆ ಸುಲಭವಾಗಲಿದ್ದು, ಸಾರಿಗೆ ವೆಚ್ಚ ತಗ್ಗಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶವೂ ದೊರೆಯಲಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.
ನಮ್ಮ ಹೊಲ ನಮ್ಮ ದಾರಿ” ಎಂಬುದು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮಹತ್ವದ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ರೈತರ ಹೊಲ, ಗದ್ದೆ ಮತ್ತು ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, ಪ್ರತಿ ಕ್ಷೇತ್ರಕ್ಕೆ 30 ಕಿ.ಮೀ ನಂತೆ, ಒಟ್ಟಾರೆ 5670 ಕಿ.ಮೀ ರಸ್ತೆಯನ್ನು ಪ್ರತಿ ಕಿ.ಮೀಗೆ ರೂ. 12.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆ 3054 ರ ಅನುದಾನಗಳನ್ನು ಒಗ್ಗೂಡಿಸಿ ಬಳಸಲಾಗುತ್ತಿದ್ದು, ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಾಗಾಣಿಕೆ ವೆಚ್ಚ ತಗ್ಗಿಸುವಿಕೆ ಮತ್ತು ಗ್ರಾಮೀಣ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವಿಕೆ ಇದರ ಪ್ರಮುಖ ಪ್ರಯೋಜನಗಳಾಗಿವೆ.
ಮೇಲಿನ ಹಿನ್ನೆಲೆಯಲ್ಲಿ, ರಾಜ್ಯದ 189 ಗ್ರಾಮೀಣ ವಿ.ಸ. ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ 30 ಕಿ.ಮೀ ನಂತೆ ರೈತರ ಹೊಲಗಳಿಗೆ ಹೋಗುವ ದಾರಿಗಳನ್ನು ನಿರ್ಮಾಣ ಮಾಡಲು “ನಮ್ಮ ಹೊಲ ನಮ್ಮ ದಾರಿ” ಎಂಬ ಯೋಜನೆಯನ್ನು ರೂಪಿಸಿ, ಸದರಿ ಯೋಜನೆಗೆ ರಾಜ್ಯ ಸರ್ಕಾರದ ಲೆಕ್ಕ ಶೀ. 3054 ರಡಿ ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಒಗ್ಗೂಡಿಸುವಿಕೆಯೊಂದಿಗೆ ಅನುದಾನವನ್ನು ಬಳಸಿಕೊಂಡು ಅನುಷ್ಟಾನಗೊಳಿಸಲು ಸರ್ಕಾರವು ತೀರ್ಮಾನಿಸಿದೆ.
ಅದೇ ರೀತಿ ಮುಂದುವರೆದು ರಾಜ್ಯದ 189 ಗ್ರಾಮೀಣ ವಿ.ಸ.ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 30 ಕಿ.ಮೀ ನಂತೆ, ಪ್ರತಿ ಕಿ.ಮೀಗೆ 12.50 ಲಕ್ಷದಂತೆ ನಿಗಧಿಪಡಿಸಿ, ಅದರಂತೆ, ನಿಗದಿಪಡಿಸಿ, ಒಟ್ಟಾರೆ 5670.00 ಕಿಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲು 708.75 MGNREGA ಯೋಜನೆಯಿಂದ ಪ್ರತಿ ಕಿ.ಮೀ ರಸ್ತೆಯನ್ನು ಅಭಿವೃದಿಪಡಿಸಲು ರೂ.3.50 ಲಕ್ಷದಂತೆ ಒಟ್ಟು 198.45 ಕೋಟಿಗಳನ್ನು ಭರಿಸಲು ಆರ್ಥಿಕ ಇಲಾಖೆಯಿಂದ ಸೂಚಿಸಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ದಾರಿ ಕೆಲಸ –
* ಗ್ರಾಮ ಪಂಚಾಯತಿಗಳು ಈ ಯೋಜನೆಯಡಿ ಆಯ್ಕೆ ಮಾಡುವ ರಸ್ತೆ ಕಾಮಗಾರಿಗಳಿಗೆ ಗ್ರಾಮ ಸಭೆಯ ಅನುಮೋದನ ಪಡೆಯುವುದು.
* ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಬನ ಸಹಭಾಗಿತ್ವದೊಂದಿಗೆ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವುದು
* ಗ್ರಾಮ ಪಂಚಾಯಿತಿಗಳು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಮುಖ್ಯ ಅಧಿಕಾರಿಗಳು ಸಲ್ಲಿಸಬೇಕು.
* ಈ ಯೋಜನೆಯ ಕಾಮಾಗಾರಿಗಳಲ್ಲಿ ಕೆ.ಟಿ.ಪಿ.ಪಿ ಅಧಿನಿಯಮವನ್ನು ಅನುಸರಿಸಿ ನಿಯಾಮಾನುಸಾರ
ದಾಖಲೆಯ ರೂಪದಲ್ಲಿ ನಿರ್ವಹಿಸುವುದನ್ನು ಖಾತರಿ ಪಡಿಸುವುದು ಪಂಚಾಯಿತಿ ಮಟ್ಟದ ಅಧಿಕಾರಿಯ
* ಈ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳ ಪ್ರಗತಿ ವರದಿಯನ್ನು ಪ್ರತಿ ಮಾಜಿ ಸಲ್ಲಿಸುವುದು.
* ರೈತರಿಗೆ ಆಗುವ ಪ್ರಮುಖ ಲಾಭಗಳು –
* ಟ್ರ್ಯಾಕ್ಟರ್, ಜೀಪ್ ಮತ್ತು ಲೋಡಿಂಗ್ ವಾಹನಗಳು ನೇರವಾಗಿ ಹೊಲಕ್ಕೆ ತಲುಪಲು ಸಾಧ್ಯ.
* ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ.
* ಮಳೆಗಾಲದಲ್ಲಿ ಕೆಸರಿನಲ್ಲಿ ಸಿಲುಕುವ ಸಮಸ್ಯೆಗಳಿಗೆ ಪರಿಹಾರ.
* ಎಂಜಿನರೇಗಾ ಮೂಲಕ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶ ಲಭ್ಯ.
* ಬೆಳೆಯನ್ನು ಮಾರುಕಟ್ಟೆಗೆ ವೇಗವಾಗಿ ಕೊಂಡೊಯ್ಯಲು ಸಾಧ್ಯವಾಗುತ್ತದೆ.
* ರಸಗೊಬ್ಬರ, ಬೀಜಗಳು ಮತ್ತು ಕೃಷಿ ಯಂತ್ರಗಳನ್ನು ಸುಲಭವಾಗಿ ಹೊಲಕ್ಕೆ ತರಲು ಸಾಧ್ಯ.
* ರಾತ್ರಿ ಸಮಯದಲ್ಲೂ ಹೊಲಕ್ಕೆ ಸುರಕ್ಷಿತವಾಗಿ ತೆರಳಲು ಅವಕಾಶ.
* ಗ್ರಾಮೀಣ ಸಂಪರ್ಕತೆ ಮತ್ತು ಮೂಲಸೌಕರ್ಯಗಳ ಸುಧಾರಣೆ.
ರಸ್ತೆಯನ್ನು ಮಾಡಿಸಲು ಅರ್ಹತಾ ಮಾನದಂಡಗಳೇನು?
* ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ, ಕಂದಾಯ ಇಲಾಖೆಯ ಗ್ರಾಮ ನಕಾಶೆಯಲ್ಲಿ ಅದು ‘ಸಾರ್ವಜನಿಕ ರಸ್ತೆ’, ‘ಬಂಡಿದಾರಿ’, ಅಥವಾ ‘ಕಾಲುದಾರಿ’ ಎಂದು ಅಧಿಕೃತವಾಗಿ ಗುರುತಿಸಲ್ಪಟ್ಟಿರಬೇಕು.
* ಕೇವಲ ಒಬ್ಬ ರೈತ ಬಳಸುವ ರಸ್ತೆಗಳ ಬದಲು, ಅತೀ ಹೆಚ್ಚು ಬಳಕೆಯಾಗುವ ಮತ್ತು ಅನೇಕ ರೈತರು ಅವಲಂಬಿತರಾಗಿರುವ ರಸ್ತೆಗಳನ್ನು ಮಾತ್ರ ಆಯ್ಕೆ ಮಾಡಬೇಕು.
* ಆಯ್ಕೆ ಪ್ರಕ್ರಿಯೆಯಲ್ಲಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (ಎಂಜಿನರೇಗಾ ತಾಲ್ಲೂಕು ಕಾರ್ಯಕ್ರಮ ಅಧಿಕಾರಿ) ಸಂಬಂಧಪಟ್ಟ ಶಾಸಕರೊಂದಿಗೆ ಸಮಾಲೋಚಿಸಿ ಅಗತ್ಯವಿರುವ ಕಾಮಗಾರಿಗಳನ್ನು ಗುರುತಿಸುತ್ತಾರೆ, ಮತ್ತು ಈ ವೇಳೆ ಕಂದಾಯ ಇಲಾಖೆ ಹಾಗೂ ಪಂಚಾಯತ್ ರಾಜ್ ಅಭಿಯಂತರ ಇಲಾಖೆ ಅಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತದೆ.
* ಅಂತಿಮವಾಗಿ, ಆಯ್ಕೆಯಾದ ಕಾಮಗಾರಿಗಳಿಗೆ ಆಯಾ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಕಡ್ಡಾಯವಾಗಿ ಅನುಮೋದನೆ ಪಡೆದು, ಅದರ ನಂತರ ವಿಶೇಷ ಕ್ರಿಯಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತದೆ.
ಕಾರ್ಯಕ್ರಮ ಅನುಷ್ಠಾನದ ಎಲ್ಲಾ ಹಂತಗಳಲ್ಲೂ ಜನರ ಸಹಭಾಗಿತ್ವವನ್ನು ಅವಶ್ಯಕವಾಗಿ ತೊಡಗಿಸಿಕೊಳ್ಳಬೇಕು.

