ಸರ್ಕಾರಿ ಯೋಜನೆಗಳ ಪಟ್ಟಿ : ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಮಾಹಿತಿ ನೀಡುತ್ತೇನೆ. ಕರ್ನಾಟಕ ಸರ್ಕಾರದ ಸದ್ಯಕ್ಕೆ ಜಾರಿಯಲ್ಲಿರುವ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹಾಗೂ ರೈತರು ಸಹ ಈ ಯೋಜನೆ ಸಂಪೂರ್ಣ ಮಾಹಿತಿ ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸುತ್ತೇನೆ.
ಕೃಷಿ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಜಾರಿಯಲ್ಲಿರುವ ಚಾಲ್ತಿ ಯೋಜನೆಗಳ ಪಟ್ಟಿ ಹೀಗಿದೆ:
- ಬೀಜಗಳ ಪೂರೈಕೆ.
- ಕೃಷಿ ಯಾಂತ್ರೀಕರಣ.
- ಕೃಷಿ ಸಂಸ್ಕರಣೆ.
- ಸೂಕ್ಷ್ಮ ನೀರಾವರಿ: ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ.
- ಕೃಷಿ ಆವರ್ತ ನಿಧಿ.
- ರೈತರಿಗೆ ನೇರವಾಗಿ ಸಹಕಾರ ಸಂಘಗಳಿಂದ ಸಾಲದ ನೆರವು.
- ಬೆಳೆ ಸಾಲಕ್ಕೆ ಸಹಾಯಧನ.
- ಕೃಷಿ ಭಾಗ್ಯ.
- ಹೈಟೆಕ್ ಹಾರ್ವೆಸ್ಟರ್ ಹಬ್- ಹೈಟೆಕ್ ಹಾರ್ವೆಸ್ಟರ್ ಹಬ್.
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ.
- ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಯೋಜನೆ.
ಕೃಷಿ ಭಾಗ್ಯ ಯೋಜನೆ –
ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಹೊಂಡದಿಂದ ನೀರು ಎತ್ತಲು ಡೀಸಲ್/ಪಟ್ರೋಲ್/ಸೋಲಾರ್ ಪಂಪ್ ಸೆಟ್ ಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ.80 ಹಾಗೂ ಪ.ಜಾ./ಪ.ಪಂ. ರೈತರಿಗೆ ಶೇ.90 ರ ಸಹಾಯಧನವನ್ನು ಒದಗಿಸಲಾಗುತ್ತಿದೆ ಹಾಗೂ ಸೂಕ್ಷ್ಮ (ತುಂತುರು/ಹನಿ) ನೀರಾವರಿ ಘಟಕಗಳ ಅಳವಡಿಕೆಗೆ ಶೇ.90 ರ ಸಹಾಯಧನವನ್ನು ಎಲ್ಲಾ ವರ್ಗದ ರೈತರಿಗೆ ನೀಡಲಾಗುತ್ತದೆ. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ ಶೇ.40 ಹಾಗೂ ಪ.ಜಾ./ಪ.ಪಂ. ರೈತರಿಗೆ ಶೇ.50 ರ ಸಹಾಯಧನವನ್ನು ಒದಗಿಸಲಾಗುತ್ತಿದೆ.
ಕೇಂದ್ರ ಸರಕಾರ 2016-17ರಲ್ಲಿ ಜಾರಿಗೆ ತಂದ ಬೆಳೆ ವಿಮೆ ಯೋಜನೆಯಿಂದ ಖಾಸಗಿ ವಿಮಾ ಕಂಪೆನಿಗಳಿಗೆ ಲಾಭ ಆಗುತ್ತಿದೆ. 2016ರಿಂದ 2024ರವರೆಗೆ ಖಾಸಗಿ ಕಂಪೆನಿಗಳು ಸಾವಿರಾರು ಕೋಟಿ ರೂ. ಲಾಭ ಆಗುತ್ತಿಲ್ಲ ಎಂದು ಸಚಿವರು ತಮ್ಮ ಹೇಳಿಕೆಯನ್ನು ವ್ಯಕ್ತಪಡಿಸಿದ್ದಾರೆ. ಬೆಳೆ ಕಟಾವು ಪ್ರಯೋಗದಲ್ಲಿ 7 ವರ್ಷದ ಅಂದಾಜಿನಲ್ಲಿ 5 ವರ್ಷದ ಇಳುವರಿಯ ಸರಾಸರಿ ತೆಗೆದುಕೊಳ್ಳುವ ವಿಚಾರದಲ್ಲೂ ವೈಜ್ಞಾನಿಕವಾಗಿ ನಿಗದಿ ಮಾಡುವುದಿಲ್ಲ ಮತ್ತು ಋತುಮಾನದ ಮಧ್ಯಕಾಲೀನ ವೈಪರೀತ್ಯ (ಮಿಡ್ ಸೀಸನ್ ಅಡ್ವರ್ಸಿಟಿ) ವಿಚಾರದಲ್ಲೂ ರೈತರಿಗೆ ಅನ್ಯಾಯ ಆಗುತ್ತಿದೆ. ಇಂತಹ ನ್ಯೂನತೆಗಳು ಇವೆ. ಒಟ್ಟಾರೆ ಬೆಳೆ ವಿಮೆ ನೀತಿ ಬದಲಾವಣೆ ಆದರೆ ಮಾತ್ರ ರೈತರಿಗೆ ಒಳ್ಳೆಯದಾಗುತ್ತದೆ. ಇದಕ್ಕೆ ಎಲ್ಲರೂ ಕೂಡಿ ಪ್ರಯತ್ನ ಮಾಡಬೇಕು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಕೇಂದ್ರ ಸರಕಾರ ಬೆಳೆ ವಿಮೆ ಯೋಜನೆಗೆ ಮಾಡಿರುವ ಮಾರ್ಗಸೂಚಿಗಳಲ್ಲಿ ಸಾಕಷ್ಟು ನ್ಯೂನತೆ ಇದೆ. ಇದನ್ನು ಪರಿಹರಿಸಲು ಕೃಷಿ ಸಚಿವರು ಸಭೆ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ, ಆದರೆ ಈವರೆಗೆ ಕೇಂದ್ರ ) ಸರಕಾರ ಮಾರ್ಗಸೂಚಿಗೆ ಬದಲಾವಣೆ ಮಾಡಿಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದರು. ಕೇವಲ ಸಾಲ ಮಾತ್ರವಲ್ಲ, ₹30,000 ದಿಂದ ₹1.5 ಲಕ್ಷದವರೆಗೆ ಸರ್ಕಾರದ ಕಡೆಯಿಂದ ಉಚಿತ ಪ್ರೋತ್ಸಾಹಧನ (Subsidy) ಪಡೆಯುವ ಚಾನ್ಸ್ ಇಲ್ಲಿದೆ. ‘ಉದ್ಯೋಗಿನಿ’ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಬಾಳಿಗೆ ಬೆಳಕಾಗುವ ಈ ಯೋಜನೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ನಿಮಗೇನು ಲಾಭ?
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳೆಯರಿಗಾಗಿಯೇ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ.
ಉದ್ಯೋಗಿನಿ ಯೋಜನೆ (Super Hit Scheme) ಯಾರಿಗೆ?:
18 ರಿಂದ 55 ವರ್ಷದ ಮಹಿಳೆಯರಿಗೆ. ಏನು ಸಿಗುತ್ತೆ?: ನೀವು ಸಣ್ಣ ಉದ್ಯಮ, ಅಂಗಡಿ ಅಥವಾ ಟೈಲರಿಂಗ್ ನಂತಹ ಬಿಸಿನೆಸ್ ಶುರು ಮಾಡಲು 3 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ ಮತ್ತು ₹30,000 ದಿಂದ ₹1.5 ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ.
* ಚೇತನ ಯೋಜನೆ (ಹೊಸ ಭರವಸೆ) ಯಾರಿಗೆ?:
ದೌರ್ಜನ್ಯಕ್ಕೆ ಒಳಗಾದ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರಿಗೆ. ವಿಶೇಷತೆ: ಎಫ್.ಐ.ಆರ್ (FIR) ಅಥವಾ ಕೋರ್ಟ್ ಆದೇಶವಿದ್ದರೆ ಸಾಕು, ಹೊಸ ಜೀವನ ಕಟ್ಟಿಕೊಳ್ಳಲು ಸರ್ಕಾರವೇ ಬಂಡವಾಳ ನೀಡುತ್ತದೆ.
* ಧನಶ್ರೀ ಯೋಜನೆ -ಯಾರಿಗೆ?:
ಸಾಮಾನ್ಯ ವರ್ಗದ ಮಹಿಳೆಯರಿಗೆ (18-60 ವರ್ಷ). ಲಾಭ: ಕೈಗಾರಿಕೆ ಅಥವಾ ಸೇವಾ ಕೇಂದ್ರ ಆರಂಭಿಸಲು ಭರ್ಜರಿ ಆರ್ಥಿಕ ನೆರವು.ಲಿಂಗ ಅಲ್ಪಸಂಖ್ಯಾತ ಪುನರ್ವಸತಿ ಟ್ರಾನ್ಸ್ಜೆಂಡರ್ ಸಮುದಾಯದವರು ಸ್ವಾವಲಂಬಿಗಳಾಗಲು ಈ ಯೋಜನೆಯಡಿ ವಿಶೇಷ ಆರ್ಥಿಕ ಸೌಲಭ್ಯ ಪಡೆಯಬಹುದು.

