ಎಫ್ ಐಡಿ(FID) ::ರೈತರೇ ಗಮನಿಸಿ ಈಗಾಗಲೇ ಪ್ರಸಕ್ತ 2025 ನೇ ಸಾಲಿನ ಅಗಸ್ಟ್ ಮಾಹೆಯಲ್ಲಿ ಗದಗ ಜಿಲ್ಲೆಯಲ್ಲಿ ಅತಿಯಾದ ಮಳೆಯಾಗಿ ಗದಗ, ಮುಂಡರಗಿ, ನರಗುಂದ, ರೋಣ, ಲಕ್ಷ್ಮೇಶ್ವರ ಗಜೇಂದ್ರಗಡ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ಕಟಾವು ಹಂತದಲ್ಲಿದ್ದ ಹೆಸರು,ಗೋವಿನಜೋಳ, ಶೇಂಗಾ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿರುತ್ತವೆ.
ಎನ್.ಡಿ.ಆರ್.ಎಫ್,ಎಸ್.ಡಿಆರ್.ಎಫ್ ಮಾರ್ಗಸೂಚಿಯನ್ವಯ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಂಡು ಒಟ್ಟಾರೆಯಾಗಿ 1,32,586 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
FRUITS ID ಪಡೆಯಲು ಬೇಕಾದ ದಾಖಲೆಗಳು –
* ಆಧಾರ್ ಕಾರ್ಡ್
* ಭೂ ದಾಖಲೆ (RTC ಅಥವಾ ಪಹಣಿ)
* ಬ್ಯಾಂಕ್ ಪಾಸ್‌ಬುಕ್ / ಖಾತೆ ಸಂಖ್ಯೆ
* ಮೊಬೈಲ್ ನಂಬರ್
* ನಿವಾಸ ಪ್ರಮಾಣಪತ್ರ (address proof)
* ಖಾತಾ ಸಂಖ್ಯೆ ಮತ್ತು ಪಟ್ಟಿ
FRUITS ID ಪಡೆಯುವ ವಿಧಾನ –
ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://fruits.karnataka.gov.in ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
* “Citizen Login / Registration” ಆಯ್ಕೆ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ ನೀಡಿ OTP ಮೂಲಕ ಲಾಗಿನ್ ಮಾಡಿ.
* ಭೂಮಿಯ ವಿವರಗಳು, ಬ್ಯಾಂಕ್ ಖಾತೆ, ಮೊಬೈಲ್ ನಂಬರ್ ಮುಂತಾದ ವಿವರಗಳನ್ನು ನಮೂದಿಸಿ.
* ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ “Submit” ಒತ್ತಿ.
* ನಿಮ್ಮ FRUITS ID ರಿಜಿಸ್ಟರ್ ಆಗುತ್ತದೆ ಮತ್ತು ಅದರ ಪ್ರಮಾಣಪತ್ರ (Card) ಡೌನ್‌ಲೋಡ್ ಮಾಡಬಹುದು.
FRUITS ID ಉಪಯೋಗ –
* ರೈತರಿಗೆ ನೀಡುವ ಎಲ್ಲಾ ಸರ್ಕಾರಿ ಯೋಜನೆಗಳ ಲಾಭ (PM Kisan, PMFBY, Subsidy Plans) ಪಡೆಯಲು.
* ಬ್ಯಾಂಕ್ ಸಾಲ, ಯಂತ್ರ ಸಬ್ಸಿಡಿ, ಕೃಷಿ ಉಪಕರಣ ಗಳಿಗೆ ಅರ್ಜಿ ಸಲ್ಲಿಸಲು.
* ರೈತರಿಗೆ Insurance ಅಥವಾ DBT (Direct Benefit Transfer) ಸೌಲಭ್ಯ ಪಡೆಯಲು.
* ಎಲ್ಲಾ ಇಲಾಖೆಗಳ (Horticulture, Agriculture, Animal Husbandry) ಡೇಟಾ ಒಂದೇ ಜಾಗದಲ್ಲಿ ಇರುತ್ತದೆ.
FRUITS ID ಪರಿಶೀಲನೆ ಮಾಡುವ ವಿಧಾನ –
* https://fruits.karnataka.gov.in
ಗೆ ಹೋಗಿ “Know Your Farmer ID” ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್ ನೀಡಿ.
* ನಿಮ್ಮ Fruits ID, ಹೆಸರು, ಜಿಲ್ಲೆ, ತಾಲೂಕು, ಖಾತೆ ಸಂಖ್ಯೆ ಕಾಣಿಸುತ್ತದೆ.
ಬೆಳೆ ನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿ ಎಪ್.ಐ.ಡಿ ಸಂಖ್ಯೆಯನ್ನು ಹೊಂದಿರಬೇಕು ಹಾಗೂ ಎಪ್.ಐ.ಡಿ ಸಂಖ್ಯೆಯೊಂದಿಗೆ ರೈತರು ಹೊಂದಿರುವ ಒಟ್ಟು ಹಿಡುವಳಿ ಪ್ರದೇಶದಎಲ್ಲಾ ಸರ್ವೆ ನಂಬರುಗಳ ವಿವರಗಳನ್ನು ಸೇರಿಸಬೇಕು. ಎಫ್.ಐ.ಡಿ ಹೊಂದಿರು ರೈತರ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡ ನಂತರ ನೇರವಾಗಿರೈತರ ಬ್ಯಾಂಕ ಖಾತೆಗೆ ಡಿಬಿಟಿ ಮುಖಾಂತರ ಪರಿಹಾರದ ಮೊತ್ತಜಮೆ ಮಾಡಲಾಗುವುದು.
ಬೆಳೆ ನಷ್ಟವಾಗಿರುವ ರೈತರು ಬೆಳೆಹಾನಿ ಪರಿಹಾರ ಪಡೆಯಲು ಕಡ್ಡಾಯವಾಗಿ ಎಫ್.ಐ.ಡಿ ಯೊಂದಿಗೆ ತಾವು ಹೊಂದಿರುವ ಎಲ್ಲ ಸಾಗುವಳಿ ಜಮೀನುಗಳನ್ನು ಲಿಂಕ್ ಮಾಡಿಸಬೇಕು.
ಎಫ್.ಐ.ಡಿ ಯಡಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೇ ನಂಬರ ವಿಸ್ತೀರ್ಣಗಳನ್ನು ಕೂಡಲೇ ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು.
ಅದೇ ರೀತಿ ಈಗ ರಾಜ್ಯದಲ್ಲಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಉದ್ದು, ಹೆಸರು, ತೊಗರಿ, ಸೋಯಾ ಬೆಳೆ ಕಳೆದುಕೊಂಡಿದ್ದ ರೈತರು ಇದೀಗ ಹಿಂಗಾರು ಮಳೆ ಕಾರಣ ಇದೀಗ ಬಿತ್ತಿರುವ ಕಡಲೆ, ಜೋಳ, ಕುಸುಬಿ ಮತ್ತು ಫಸಲಿಗೆ ಬಂದಿರುವ ಹತ್ತಿ ಬೆಳೆಯೂ ನಾಶವಾಗುವ ಬಗ್ಗೆ ಆತಂಕಿತರಾಗಿದ್ದಾರೆ.
ಜಿಲ್ಲೆಯಲ್ಲಿ ಕೆಲ ರೈತರು ಸೋಯಾ ಬೆಳೆಯ ರಾಶಿ ಮಾಡಿದ್ದು, ಬಹುತೇಕ ರೈತರು ಸೋಯಾ ಬೆಳೆ ಕಟಾವು ಮಾಡಿ ರಾಶಿ ಮಾಡುವುದಕ್ಕಾಗಿ ಬಣವಿ ಹಾಕಿಟ್ಟಿದ್ದಾರೆ. ಈ ಬಣವಿ ಹಾಕಿದ ಸೋಯಾ ಕೂಡ ನಾಶವಾಗುವ ಭಯದಲ್ಲಿ ರೈತರು ಕಂಗಾಲಾಗಿದ್ದಾರೆ.
‘ಮೊಂಥಾ’ ಚಂಡಮಾರುತದ ಪ್ರಭಾವ ಜಿಲ್ಲಾದ್ಯಂತ ಅ.31ರ ವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

