ಜೋಳದ ಕಡ್ಡಿಯಿಂದ ಬೆಲ್ಲ ತಯಾರಿಕೆ ವಿಧಾನ ನೋಡಿ.

ಬೆಲ್ಲ ತಯಾರಿಕೆ : ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ಇದು ರೈತರಿಗೆ ಬಹಳ ಉಪಯುಕ್ತ ಮಾಹಿತಿ ಆಗಿದೆ. ರೈತರೇ ಸಾಮಾನ್ಯವಾಗಿ ಎಲ್ಲರೂ ಕಬ್ಬಿನಿಂದ ‌ಬೆಲ್ಲ ಹಾಗೂ ಸಕ್ಕರೆ ತಯಾರಿಸುತ್ತಾರೆ. ಆದರೆ ಇದೀಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದ ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ ಅವರು ಜೋಳದ ದಂಟಿನಿಂದ (ಕಾಂಡ) ಬೆಲ್ಲ ತಯಾರಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇದು ಎಷ್ಟೋ ರೈತರಿಗೆ ಮಾದರಿಯಾಗಿದ್ದಾರೆ. ಇದನ್ನು ರೈತರು ಸ್ವಲ್ಪ ಗಮನಿಸಿ ಓದಬೇಕು.

ರೈತರೇ ಈಗಾಗಲೇ ನಿಮಗೆ ತಿಳಿದಿರುವ ಹಾಗೆ ರೈತರು ಹಲವಾರು ಬೆಳೆ ಬೆಳೆಯುತ್ತಾರೆ. ಆದರೆ ಇದುವರೆಗೆ ಸರ್ಕಾರದ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ನಡೆಸದಿದ್ದ ಸಂಶೋಧನೆಗೆ ನೈಜ ಪ್ರಯೋಗಾತ್ಮಕ ಸ್ಪರ್ಶ ನೀಡಿರುವ ಮಹಾಲಿಂಗಪ್ಪ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಸಾಧಾರಣ ರೈತನ ಕೈಯಲ್ಲಿ ಹೊಸ ಸಂಶೋಧನೆ ಸಾಧ್ಯವೆಂಬುದನ್ನು ಅವರು ತಮ್ಮ ಆವಿಷ್ಕಾರದಿಂದ ತೋರಿಸಿಕೊಟ್ಟಿದ್ದಾರೆ. ಅವರು ತಮ್ಮದೇ ಆದ ಶೈಲಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಕೈಗೊಂಡು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಮುಂದಾಗಿದ್ದಾರೆ.

ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ್ ಇವರು
ಸಾಧಾರಣವಾಗಿ ಜೋಳದ ದಂಟನ್ನು ದನಕರುಗಳಿಗೆ ಮೇವಾಗಿ ಅಥವಾ ಮಾರುಕಟ್ಟೆಗೆ ಹಸಿಯಾಗಿಯೇ ಮಾರಾಟ ಮಾಡಲಾಗುತ್ತದೆ. ಆದರೆ, ಇದರಿಂದ ರೈತರಿಗೆ ಹೆಚ್ಚಿನ ಲಾಭವೇನೂ ಸಿಗುತ್ತಿರಲಿಲ್ಲ. ಹಸಿ ಜೋಳದ ದಂಟಿನಿಂದ ಲಾಭವಿಲ್ಲ ಎಂಬ ಅಭಿಪ್ರಾಯ ರೈತರಲ್ಲಿ ಬೇರೂರಿತ್ತು. ಹೀಗಾಗಿ, ಮಹಾಲಿಂಗಪ್ಪ ಅವರು ಜೋಳದ ದಂಟಿನಲ್ಲಿ ಅಡಗಿರುವ ಸಕ್ಕರೆ ಅಂಶವನ್ನು ಬಳಸಿಕೊಂಡು ಬೆಲ್ಲ ತಯಾರಿಸಬಹುದು ಎಂಬ ಆಲೋಚನೆಯನ್ನು ಪ್ರಯೋಗಾತ್ಮಕವಾಗಿ ಕೈಗೊಂಡು ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಇತ್ತೀಚೆಗೆ ಅಭಿವೃದ್ಧಿಗೊಂಡಿರುವ ಹೊಸ ತಳಿಯ ಸಿಹಿ ಜೋಳಗಳಲ್ಲಿ ಕಡ್ಡಿಯ ಗಾತ್ರ ದೊಡ್ಡದಾಗಿದ್ದು, ಸಿಹಿಯ ಅಂಶವೂ ಹೆಚ್ಚಾಗಿದೆ. ಈ ವೈಶಿಷ್ಟ್ಯವನ್ನು ಗಮನಿಸಿದ ಮಹಾಲಿಂಗಪ್ಪ ಇಟ್ನಾಳ ಅವರು ಕಬ್ಬಿನಿಂದ ಬೆಲ್ಲ ತಯಾರಿಸುವ ಪರಂಪರೆಯ ವಿಧಾನವನ್ನು ಅಳವಡಿಸಿಕೊಂಡು, ಜೋಳದ ದಂಟಿನಿಂದ ಯಶಸ್ವಿ ಪ್ರಯೋಗ ನಡೆಸಿ ಬೆಲ್ಲ ತಯಾರಿಸಿದ್ದಾರೆ.

ಇಷ್ಟು ದಿನ ರೈತರು ತಮ್ಮ ಜಾನುವಾರುಗಳಿಗೆ ಅಗತ್ಯವಾದ ಜೋಳದ ದಂಟನ್ನು ಇಟ್ಟುಕೊಂಡು ಉಳಿದಿದ್ದನ್ನು ಮಾರಾಟ ಅಥವಾ ಸುಟ್ಟು ಹಾಕುತ್ತಿದ್ದರು, ಆದರೆ, ಇದೀಗ ಜೋಳ ಬೆಳೆದ 120 ದಿನಗಳ ಒಳಗಾಗಿ ಕಟಾವು ಮಾಡಿ ಕೊಟ್ಟರೆ ಪ್ರತಿ ಟನ್‌ಗೆ ₹ 3000 ಲಾಭ ಗಳಿಸಬಹುದಾಗಿದೆ ಎಂದರು. ಈಗಾಗಲೇ ಜೋಳದ ದಂಟಿನಿಂದ ತಯಾರಿಸಿದ ಬೆಲ್ಲವನ್ನು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಕಬ್ಬಿನ ಬೆಲ್ಲಕ್ಕಿಂತ ಜೋಳದಿಂದ ತಯಾರಿಸಿದ ಬೆಲ್ಲ ಉತ್ತಮ ಎಂಬುದು ಸಾಬೀತಾಗಿದೆ.

ಇತ್ತೀಚೆಗೆ ಅಭಿವೃದ್ಧಿಗೊಂಡಿರುವ ಹೊಸ ತಳಿಯ ಸಿಹಿ ಜೋಳಗಳಲ್ಲಿ ಕಡ್ಡಿಯ ಗಾತ್ರ ದೊಡ್ಡದಾಗಿದ್ದು, ಸಿಹಿಯ ಅಂಶವೂ ಹೆಚ್ಚಾಗಿದೆ. ಇದೇ ವೈಶಿಷ್ಟ್ಯವನ್ನು ಗಮನಿಸಿ, ಕಬ್ಬಿನಿಂದ ಬೆಲ್ಲ ತಯಾರಿಸುವ ವಿಧಾನವನ್ನು ಅಳವಡಿಸಿಕೊಂಡು ಜೋಳದ ದಂಟಿನಿಂದ ಬೆಲ್ಲ ತಯಾರಿಕೆಯಲ್ಲಿ ಯಶಸ್ವಿ ಆಗರುವುದಾಗಿ ತಿಳಿಸಿದರು.

ಅ. 8ರಂದು ಕೃಷಿ ವಿಜ್ಞಾನಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಜೋಳದ ದಂಟಿನಿಂದ ರಸ ತೆಗೆದು ಬೆಲ್ಲ ತಯಾರಿಸುವ ಮೂಲಕ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗುವುದು. ಕಬ್ಬಿಗೆ ಹೋಲಿಸಿದರೆ ಜೋಳದ ದಂಟಿನಿಂದ ತಯಾರಿಸಿದ ಬೆಲ್ಲ ಶೇ.70ರಷ್ಟು ಸಿಹಿಯಾಗಿದೆ. ಈ ವೇಳೆ ಬೆಲ್ಲವನ್ನು ಹೆಚ್ಚಿನ ದಿನ ಸಂಗ್ರಹಿಸುವ ನಿಟ್ಟಿನಲ್ಲಿ ಕೃಷಿ ವಿವಿಯ ತಜ್ಞರಿಂದ ಸಲಹೆ ಪಡೆದು ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಮಾರಾಟ, ಬೆಲೆ ನಿಗದಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ವಿವರಿಸಿದರು.

ಜೋನಿ ಬೆಲ್ಲಾ ಸಕ್ಕರೆಗೆ ಆರೋಗ್ಯಕರ ಮತ್ತು ಸುವಾಸನೆಯ ಪರ್ಯಾಯವಾಗಿದೆ ಮತ್ತು ಇದನ್ನು ಹೆಚ್ಚಾಗಿ ವಿವಿಧ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ. ವಿಶಿಷ್ಟವಾದ ಮತ್ತು ವಿಶಿಷ್ಟವಾದ ಮಾಧುರ್ಯವನ್ನು ಒದಗಿಸಲು ಇದನ್ನು ಕಾಫಿ ಅಥವಾ ಚಹಾಕ್ಕೆ ಕೂಡ ಸೇರಿಸಬಹುದು.

ಜೋನಿ ಬೆಲ್ಲವನ್ನು ಆನಂದಿಸಲು ಒಂದು ಜನಪ್ರಿಯ ವಿಧಾನವೆಂದರೆ “ನೀರ್ ದೋಸೆ”, ದಕ್ಷಿಣ ಭಾರತದ ಜನಪ್ರಿಯ ಉಪಹಾರ ಪದಾರ್ಥಗಳೊಂದಿಗೆ ಇದು ಒಂದು ಮಹತ್ವದ ಪದಾರ್ಥ ಆಗಿದೆ. ಜೋನಿ ಬೆಲ್ಲದ ಆಳವಾದ ಸುವಾಸನೆಯು ನೀರ್ ದೋಸೆಯ ಬೆಳಕು ಮತ್ತು ಹರಿವಿನ ವಿನ್ಯಾಸವನ್ನು ಸಂಪೂರ್ಣವಾಗಿ ಪೂರೈಸುತ್ತದೆ, ಇದು ಯಾವುದೇ ಉಪಹಾರ ಟೇಬಲ್‌ಗೆ ಪರಿಪೂರ್ಣ ಸೇರ್ಪಡೆಯಾಗಿದೆ.

ಇದು ಒಂದು 100% ನೈಸರ್ಗಿಕ :

ಹೌದು ಈ ಪದಾರ್ಥಕ್ಕೆ ಯಾವುದೇ ಕೃತಕ ಸೇರ್ಪಡೆಗಳು ಅಥವಾ ಸಂರಕ್ಷಕಗಳಿಲ್ಲದೆ ಶುದ್ಧ ಬೆಲ್ಲದಿಂದ ತಯಾರಿಸಲಾಗುತ್ತದೆ.
* ಆರೋಗ್ಯಕರ ಸಿಹಿಕಾರಕ : ಸಕ್ಕರೆಗೆ ನೈಸರ್ಗಿಕ ಪರ್ಯಾಯ, ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ಆರೋಗ್ಯಕರ ಆಯ್ಕೆಯನ್ನು ನೀಡುತ್ತದೆ.
* ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ : ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುವ ಇತರ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ.
* ಬಹುಮುಖ : ಸಿಹಿತಿಂಡಿಗಳು, ಚಹಾಗಳು, ಕಾಫಿ, ತಿಂಡಿಗಳು ಮತ್ತು ಸಿಹಿತಿಂಡಿಗಳಂತಹ ವ್ಯಾಪಕ ಶ್ರೇಣಿಯ ಪಾಕ ವಿಧಾನಗಳಲ್ಲಿ ಬಳಸಬಹುದು.
* ಉತ್ತಮ ಜೀರ್ಣಕ್ರಿಯೆ : ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಊಟಕ್ಕೆ ಪ್ರಯೋಜನಕಾರಿ ಸೇರ್ಪಡೆಯಾಗಿದೆ.
* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ : ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Spread positive news

Leave a Reply

Your email address will not be published. Required fields are marked *