ಬೆಳೆಹಾನಿ : ಪ್ರೀಯ ರೈತರೇ ನೀವು ನೋಡುತ್ತಿರುವ ಹಾಗೆ ಸದ್ಯದ ಮಟ್ಟಿಗೆ ಎಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಸದ್ದಿಲ್ಲದೆ ಮಳೆ ಸುರಿಯುತ್ತಿದೆ. ಹಾಗೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ವ್ಯಾಪಕ ಮಳೆಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿದ್ದು, ಈ ನಿಟ್ಟಿನಲ್ಲಿ 2000 ಸಾವಿರ ಕೋಟಿ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಘೋಷಣೆ ಮಾಡಿದರು. ಇದೊಂದು ಮಹತ್ವದ ನಿರ್ಧಾರ ಎಂದು ಸರ್ಕಾರ ಹೇಳುತ್ತಿದೆ.
ಇಂದು ನಾಲ್ಕು ಜಿಲ್ಲಗಳ ಸಮೀಕ್ಷೆ ಮಾಡಲಾಗಿದೆ. ಈ ಬಾರಿ ವಾಡಿಕೆಗಿಂತ ಮಳೆ ಹೆಚ್ಚಾಗಿದೆ ಎಂದರು. ಅಲ್ಲದೇ, ಮಹಾರಾಷ್ಟ್ರದ ಜಲಾಶಯದಿಂದ ನೀರು ಬಿಡಲಾಗಿದೆ. ಇದರಿಂದ ಭೀಮಾ ತೀರದ ಗ್ರಾಮಗಳಲ್ಲಿ ಸಾಕಷ್ಟು ಹಾನಿಯಾಗಿದೆ. ಜಮೀನುಗಳು ಕೆರೆಯಂತಾಗಿ ಬೆಳೆ ನಾಶವಾಗಿದೆ. 8 ಜಿಲ್ಲೆಯಲ್ಲಿ 9 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶ ಬೆಳೆಹಾನಿಯಾಗಿದೆ. ಇನ್ನು ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗುವುದು ಎಂದ ಸಿಎಂ, ಕೇಂದ್ರಕ್ಕೆ ಸಚಿವರ ನಿಯೋಗವನ್ನು ಕಳುಹಿಸುವುದಾಗಿ ತಿಳಿಸಿದರು.
ಅದೇ ರೀತಿ ಈ ಪ್ರಕೃತಿ ವಿಕೋಪದ ನಡುವೆ ಮನೆ ಮುಳುಗಿದ್ರೆ, ತಕ್ಷಣವೇ 5 ಸಾವಿರ ರೂಪಾಯಿ ಪರಿಹಾರವನ್ನು ನೀಡಲಾಗುವುದು. ರಸ್ತೆ ,ಶಾಲೆ, ಸೇತುವೆ ಎಲ್ಲದಕ್ಕೂ ಪರಿಹಾರ ನೀಡುತ್ತೇವೆ. ರಾಜ್ಯದಲ್ಲಿ ಮಳೆಗೆ 422 ಜಾನುವಾರು ಬಲಿಯಾಗಿವೆ. ಯಾದಗಿರಿಯಲ್ಲಿ 245 ಜಾನುವಾರು ಮೃತಪಟ್ಟಿವೆ. ಸರ್ಕಾರದಿಂದ ಈಗಾಗಲೇ ಪರಿಹಾರ ನೀಡಲಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್ನಲ್ಲಿ ಸುರಿದ ಮಳೆಯಿಂದಾಗಿ ಸುಮಾರು 30 ಹೆಕ್ಟೇರ್ ಕೃಷಿ ಭೂಮಿಗೆ ಹಾನಿಯಾಗಿದೆ. ಇದಕ್ಕೆ ಸಂಬಂದಪಟ್ಟಂತೆ ಶೀಘ್ರದಲ್ಲಿ ಸಂಪೂರ್ಣ ಬೆಳೆ ನಷ್ಟ ಸಮೀಕ್ಷೆ ಪೂರ್ಣಗೊಳಿಸಲಾಗುವುದು. ಹಾಗೂ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ದೀಪಾವಳಿ ಒಳಗೆ ಪರಿಹಾರ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ನಷ್ಟ ಉಂಟಾದ ಜಾಗಗಳಲ್ಲಿ ಸಾಲ ವಸೂಲಿಯನ್ನು ನಿಲ್ಲಿಸುವಂತೆ ಸೂಚಿಸಲಾಗಿದ್ದು, ಬ್ಯಾಂಕ್ಗಳಿಗೆ ಮುಂದಿನ ಪ್ರಕ್ರಿಯೆ ಮತ್ತು ಅಗತ್ಯ ಸೂಚನೆಗಳನ್ನು ಸರ್ಕಾರ ನೀಡಲಿದೆ ಎಂದು ವಿವರಿಸಿದರು.
ಜಾನುವಾರುಗಳಿಗೆ ಪ್ರಾಣ ಹಾನಿಯಾದರೆ –
ರಾಜ್ಯದಲ್ಲಿ ಒಟ್ಟು 422 ಜಾನುವಾರುಗಳು ಮರಣ ಹೊಂದಿವೆ. ಇದರಲ್ಲಿ ಯಾದಗಿರಿ ಜಿಲ್ಲೆ ಒಂದರಲ್ಲೇ 245 ಜಾನುವಾರುಗಳು ಮರಣ ಹೊಂದಿವೆ. ಕಲಬುರಗಿ ಜಿಲ್ಲೆಯಲ್ಲಿ 27, ವಿಜಯಪುರದಲ್ಲಿ 3, ಬೀದರ್ ಜಿಲ್ಲೆಯಲ್ಲಿ 38 ಜಾನುವಾರುಗಳು ಮರಣ ಹೊಂದಿವೆ. ಈ ಪೈಕಿ 407 ಜಾನುವಾರುಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ.
ಪ್ರವಾಹದಿಂದ ಮನೆ ಸಂಪೂರ್ಣ ಹಾನಿಯಾದರೆ –
547 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಇವುಗಳಿಗೆ ತಲಾ 1.20 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅನಧಿಕೃತವಾಗಿ ನಿರ್ಮಿಸಿದ್ದ 62 ಮನೆಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗಿದೆ.
ಭಾಗಶಃ ಹಾನಿಯಾದ ಮನೆಗಳು (ಶೇ.50 ರಿಂದ 75). ಇವುಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ವಿತರಿಸಲಾಗಿದೆ. ಶೇ.20ರಿಂದ 50ರಷ್ಟು ಹಾನಿಯಾದ ಮನೆಗಳ ಸಂಖ್ಯೆ 3166. ಶೇ.15ರಿಂದ 20ರಷ್ಟು ಹಾನಿಯಾಗಿದ್ದ 3881 ಮನೆಗಳಿಗೆ 6500 ರೂ. ಪ್ರಕಾರ ಪರಿಹಾರ ನೀಡಲಾಗಿದೆ. ಒಟ್ಟಾರೆ ಇದುವರೆಗೆ 23.12 ಕೋಟಿ ರೂ.ಗಳನ್ನು ಪರಿಹಾರವಾಗಿ ಮನೆಗಳನ್ನು ಕಳೆದುಕೊಂಡವರಿಗೆ ನೀಡಲಾಗಿದೆ.
ಬಟ್ಟೆ ಮತ್ತು ಗೃಹ ಬಳಕೆ ವಸ್ತುಗಳನ್ನು ಕಳೆದುಕೊಂಡ 4858 ಕುಟುಂಬಗಳಿಗೆ ಈ ವರೆಗೆ 2.42 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ. ಇನ್ನು ರಸ್ತೆ, ಸೇತುವೆ ಮುಂತಾದವುಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಂಡು ವರದಿ ಬಂದ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಪ್ರತಿ ಕ್ಷೇತ್ರಕ್ಕೆ ವಿಶೇಷ ಅನುದಾನದ ರೂಪದಲ್ಲಿ 25 ರಿಂದ 50 ಕೋಟಿ ರೂ. ನೀಡಲಾಗಿದೆ.
ವಾಯುಭಾರ ಕುಸಿತವು ಹವಾಮಾನ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಘಟನೆಯಾಗಿದ್ದು, ಇದು ಕಡಿಮೆ ಒತ್ತಡದ ಪ್ರದೇಶಗಳಿಂದ ಉಂಟಾಗುತ್ತದೆ. ಸೆಪ್ಟೆಂಬರ್ 22, 2025ರಂದು, ಬಂಗಾಳದ ಉಪಸಾಗರದ ಮೇಲ್ಮಯಲ್ಲಿ ರೂಪುಗೊಂಡ ಕಡಿಮೆ ವಾಯುಭಾರ ವ್ಯವಸ್ಥೆಯು ದಕ್ಷಿಣ-ಪೂರ್ವ ಬಂಗಾಳದ ತೀರಗಳಲ್ಲಿ ತೀವ್ರಗೊಂಡಿದೆ. ಈ ವ್ಯವಸ್ಥೆಯು ಮಧ್ಯಪ್ರದೇಶ ಮತ್ತು ಒಡಿಷಾ ತೀರಗಳ ಕಡೆಗೆ ಸಾಗುತ್ತಿದ್ದು, ಇದರಿಂದ 40-50 ಕಿ.ಮೀ. ಪ್ರತಿ ಗಂಟೆಗೆ ಗಾಳಿ ವೇಗವು ಹೆಚ್ಚಾಗುತ್ತದೆ. IMDಯ ಪ್ರಕಾರ, ಈ ಕುಸಿತವು ಮುಂಗಾರು ಮಳೆಯ ಉಳ್ಳಿಕೆಯಾಗಿ ಮತ್ತು ಉಷ್ಣತೆಯ ಹೆಚ್ಚಳದಿಂದ ಉಂಟಾಗಿದೆ.