ಅಕ್ಟೋಬರ್ 1 ರಿಂದ 5 ಹೊಸ ನಿಯಮಗಳು ಜಾರಿ.

ಅಕ್ಟೋಬರ್ :ಸಾರ್ವಜನಿಕರೇ ನಿಮಗೊಂದು ಆಶ್ಚರ್ಯಕರ ಸಂಗತಿ ನಾನು ಇವತ್ತು ಚರ್ಚಿಸುತ್ತೇನೆ. ಅದು ಏನೆಂದರೆ ಕೇಂದ್ರ ಸರ್ಕಾರದ ಸಭೆಯಲ್ಲಿ ಕೆಲವು ನಿಯಮಗಳು ಬದಲಾವಣೆ ಆಗುವ ಸಾಧ್ಯತೆ ಇದೆ. ಏಕೆ ಈ ಬದಲಾವಣೆ ಹಾಗೂ ಯಾವ ಯಾವ ವಸ್ತುಗಳ ದರ ಬದಲಾವಣೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಣ.

ಹೌದು, ಮುಂದಿನ ತಿಂಗಳು ಅಕ್ಟೋಬರ್ 1 ರಿಂದ ಕೆಲ ಮಹತ್ವದ ಬದಲಾವಣೆಗಳು ನಡೆಯಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಬಲ್ಲಂಥವು. ಉದಾಹರಣೆಗೆ, ಪ್ರತಿ ತಿಂಗಳ ಮೊದಲ ತಾರೀಖಿನಂದು ಎಲ್‌ಪಿಜಿ (LPG) ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇದರ ಬೆಲೆ ಏರಿಳಿತವು ಜನಜೀವನದ ಮೇಲೆ ಬಹಳ ಸಾಮಾನ್ಯ ಪರಿಣಾಮ ಬೀರುತ್ತದೆ. ರೈಲು ಟಿಕೆಟ್ಗಳಿಂದ ಹಿಡಿದು ಯುಪಿಐವರೆಗೆ ಇನ್ನೂ ಕೆಲ ನಿಯಮ ಬದಲಾವಣೆಗಳು ಅಕ್ಟೋಬರ್ನಲ್ಲಿವೆ. ಇವೆಲ್ಲವೂ ಕೂಡ ಜನಸಾಮಾನ್ಯರ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರುವಂಥವು.

UPI ನಲ್ಲಿ ದೊಡ್ಡ ಬದಲಾವಣೆ –

ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪೇಮೆಂಟ್ ವಿಧಾನವಾದ ಯುಪಿಐನಲ್ಲಿ ಒಂದು ಪ್ರಮುಖ ನಿಯಮ ಬದಲಾವಣೆ ಅಕ್ಟೋಬರ್ನಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದೆ. ಇದು ಯುಪಿಐ ಪಿ2ಪಿ ಸೇವೆಗೆ ಸಂಬಂಧಿಸಿದ್ದಾಗಿದ್ದು, ‘ಕಲೆಕ್ಟ್ ರಿಕ್ವೆಸ್ಟ್’ ಫೀಚರ್ ಅನ್ನು ನಿಲ್ಲಿಸಬಹುದು. ಒಬ್ಬ ಯುಪಿಐ ಬಳಕೆದಾರ ಮತ್ತೊಮ್ಮೆ ಬಳಕೆದಾರರಿಗೆ ಹಣಕ್ಕಾಗಿ ಮನವಿ ಸಲ್ಲಿಸುವ ಕ್ರಮವು ಕಲೆಕ್ಟ್ ರಿಕ್ವೆಸ್ಟ್. ಈ ವಿಧಾನದ ಮೂಲಕ ಕೆಲವರು ವಂಚನೆ ಎಸಗುತ್ತಿದ್ದರು. ಇದನ್ನು ತಪ್ಪಿಸಲು ಎನ್ಪಿಸಿಐ ಕಲೆಕ್ಟ್ ರಿಕ್ವೆಸ್ಟ್ ಫೀಚರ್ ಅನ್ನೇ ತೆಗೆದುಹಾಕುತ್ತಿದೆ.

NPS (ರಾಷ್ಟ್ರೀಯ ಪಿಂಚಣಿ ಯೋಜನೆ) – OTP ದೃಢೀಕರಣ ಕಡ್ಡಾಯ –

ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಭಾರತ ಸರ್ಕಾರದ ನಿವೃತ್ತಿ ಯೋಜನೆಯಾಗಿದ್ದು, ಲಕ್ಷಾಂತರ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಖಾತೆಗಳ ದುರ್ಬಳಕೆ ಮತ್ತು ನಕಲಿ ಹಿಂಪಡೆಯುವಿಕೆ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, PFRDA (Pension Fund Regulatory and Development Authority) ಕೆಲವು ಪ್ರಮುಖ ಬದಲಾವಣೆಗಳನ್ನು ಅಕ್ಟೋಬರ್ 1ರಿಂದ ಜಾರಿಗೆ ತರಲಿದೆ.

ರೈಲು ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆಗಳು –

ಅಕ್ಟೋಬರ್ 1 ರಿಂದ, ಆಧಾರ್ ದೃಢೀಕರಿಸಿದ ಪ್ರಯಾಣಿಕರಿಗೆ ರೈಲ್ವೆ ಆದ್ಯತೆ ನೀಡಲಿದೆ. ಅಂತಹ ಪ್ರಯಾಣಿಕರಿಗೆ ರೈಲ್ವೆ ಟಿಕೆಟ್ ಬುಕಿಂಗ್ ಪ್ರಾರಂಭವಾಗುವ 15 ನಿಮಿಷಗಳ ಮೊದಲು ಆದ್ಯತೆಯ ಪ್ರವೇಶವನ್ನು ನೀಡಲಾಗುವುದು. ಇದರರ್ಥ ಅವರು, ಟಿಕೆಟ್ ಬುಕಿಂಗ್ ಆರಂಭವಾಗಿ ಮೊದಲ 15 ನಿಮಿಷಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಬೇರೆಯವರು 15 ನಿಮಿಷಗಳ ನಂತರ ಬುಕಿಂಗ್ ಮಾಡಬಹುದು.

ಎಲ್ಲಾ ಬದಲಾವಣೆಗಳು ಅಕ್ಟೋಬರ್ 1ರಿಂದಲೇ ಜಾರಿಗೆ

ಈ ಎಲ್ಲ ಬದಲಾವಣೆಗಳು — NPS ಹಿಂತೆಗೆತ ನಿಯಮ, PAN–ಆಧಾರ್ ಲಿಂಕ್, UPI ಸುರಕ್ಷತಾ ನಿಯಮ — ದೇಶದಾದ್ಯಂತ 2025ರ ಅಕ್ಟೋಬರ್ 1ರಿಂದಲೇ ಕಡ್ಡಾಯವಾಗಿ ಜಾರಿಗೆ ಬರಲಿವೆ. ಯಾವುದೇ ವಿಸ್ತರಣೆ ಅಥವಾ ಸಡಿಲಿಕೆ ನೀಡಲಾಗುವುದಿಲ್ಲ. ಆದ್ದರಿಂದ ನಾಗರಿಕರು ಮುಂಚಿತವಾಗಿ ತಮ್ಮ ದಾಖಲೆಗಳನ್ನು ಸರಿಪಡಿಸುವುದು ಅತ್ಯವಶ್ಯಕ.

PAN–ಆಧಾರ್ ಲಿಂಕ್ ಮಾಡದವರು ತಕ್ಷಣವೇ ಅಧಿಕೃತ ವೆಬ್‌ಸೈಟ್‌ನಲ್ಲಿ ಲಿಂಕ್ ಮಾಡಬೇಕು.
NPS ಖಾತೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಿಕೊಂಡಿರಬೇಕು.
UPI ಬಳಕೆದಾರರು ತಮ್ಮ ಖಾತೆ ನಿಷ್ಕ್ರಿಯಗೊಳ್ಳದಂತೆ ಕನಿಷ್ಠ ಒಂದು ಟ್ರಾನ್ಸಾಕ್ಷನ್ ಮಾಡುವುದು ಸೂಕ್ತ.

Spread positive news

Leave a Reply

Your email address will not be published. Required fields are marked *