ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧಿಸುವವರಿಗೆ ಚುನಾವಣಾ ಆಯೋಗ ಹೊಸ ಆದೇಶ ಹೊರಡಿಸಿದೆ

ಕರ್ನಾಟಕದ 2025-26ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರತಿ 5 ವರ್ಷಗಳಿಗೊಮ್ಮೆ ಕರ್ನಾಟಕ ಗ್ರಾಮ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಆಯೋಜಿಸುತ್ತದೆ‌. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸುವವರು ಈಗಲೇ ಚೆನ್ನಾಗಿ ತಯಾರಿ ಮಾಡಿಕೊಳ್ಳಬೇಕು. ಜೊತೆಗೆ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಅನೇಕ ಬದಲಾವಣೆಗಳನ್ನು ಕೈಗೊಳ್ಳುತ್ತಿದೆ. ಎಂದಿನಂತೆ ಕರ್ನಾಟಕ ಗ್ರಾಮಕ್ಕೆ ಸೇರಿದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಮತದಾನದ ಹಕ್ಕಿದೆ. 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ನೀವು ಮತದಾನದ ಚೀಟಿಯನ್ನು ಇನ್ನೂ ಪಡೆಯದಿದ್ದರೆ, ದಯವಿಟ್ಟು ಈಗಲೇ ನಿಮ್ಮ ವೋಟಿಂಗ್ ಕಾರ್ಡ್ ಗಾಗಿ ಅಪ್ಲಿಕೇಶನ್ ಅನ್ನು ಹಾಕಿ.

ಗ್ರಾಮ ಪಂಚಾಯಿತಿ ಹಾಗೂ ಗ್ರಾಮೀಣಾಭಿವೃದ್ಧಿ ಉದ್ದೇಶಕ್ಕಾಗಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಮುನ್ನವೆ ಸರ್ಕಾರವು 19 ಹೊಸ ಮಾನ ದಂಡಗಳನ್ನು ಗುರುತಿಸಿದೆ. ಆ ಪ್ರತಿ ಮಾನದಂಡಗಳನ್ನು ಸವಿಸ್ತಾರವಾಗಿ ನಾವು ಈ ಅಂಕಣದಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಚುನಾವಣೆಯಲ್ಲಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಅಭ್ಯಥಿ೯ಗಳು ಹಾಗೂ ಪ್ರತಿಯೊಂದು ಹಳ್ಳಿಯ ಜನರು ಈ ಹೊಸ 19 ನಿಯಮಗಳನ್ನು ಅನುಸರಿಸುವುದು ಕಡ್ಡಾಯ. 19 ನಿಯಮಗಳನ್ನು ನೀವು ಅನುಸರಿಸದೇ ಇದ್ದಲ್ಲಿ ನಿಮ್ಮನ್ನು ಚುನಾವಣೆಗೆ ಸ್ಪರ್ಧಿಸಲು ಅನರ್ಹ ಮಾಡಲಾಗುತ್ತದೆ. ನೀವು ಚುನಾವಣೆಗೆ ಸ್ಪರ್ಧಿಸಲು ಅವಕಾಶ ತಪ್ಪಿ ಹೋಗುತ್ತದೆ ಅದಕ್ಕಾಗಿ ಸರ್ವ ಅಂಶಗಳನ್ನು ಸರಿಯಾಗಿ ಓದಿಕೊಳ್ಳಿ.

ಯಾವ ನಿಯಮಗಳನ್ನು ಚುನಾವಣಾ ಅಭ್ಯರ್ಥಿಗಳು ಪಾಲಿಸಬೇಕು :

* ಭಾರತದ ಪ್ರಜೆಯಾಗಿರಬೇಕು.
* ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿ ನೋಂದಾಯಿತ ಹಾಗೂ ಮತ ಚಲಾಯಿಸುವ ಹಕ್ಕನ್ನ ಹೊಂದಿರಬೇಕು.
* ಯಾವುದೇ ಕ್ರಿಮಿನಲ್ ಕೇಸ್ ಹೊಂದಿರಬಾರದು.
* ಅಪರಾಧ ಶಿಕ್ಷೆ ಗೆ ಒಳಗಾಗಿರಬಾರದು.
* ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಸಕಾ೯ರಿ ಹುದ್ದೆಯಲ್ಲಿ ಇರಬಾರದು .
* ಕನಿಷ್ಠ 21 ವರ್ಷ ವಯಸ್ಸನ್ನ ಹೊಂದಿರಬೇಕು.
* ಮನೆಯಲ್ಲಿ ಶೌಚಾಲಯ ಹೊಂದಿರೋದು ಕಡ್ಡಾಯ,ಹೊಂದಿಲ್ಲದೆ ಇದ್ದರೆ ಆಯ್ಕೆಯಾದ ಮೂರು ತಿಂಗಳ ಒಳಗೆ ನಿರ್ಮಿಸತಕ್ಕದ್ದು.
* ಮೀಸಲಾತಿ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರತಕ್ಕದ್ದು.
* ಆಧಾರ ಕಾಡ೯ ಮತ್ತು ವೋಟರ್ ಐಡಿ ಕಾರ್ಡ್ ಕಡ್ಡಾಯವಾಗಿ ಹೊಂದಿರತಕ್ಕದ್ದು.
* ಮತದಾರರ ಗುರುತಿನ ಚೀಟಿಯಲ್ಲಿನ ಹೆಸರು, ಆಧಾರ್ ಕಾರ್ಡ್ನಲ್ಲಿರುವ ಹೆಸರು ಮತ್ತು ಪ್ಯಾನ್ ಕಾರ್ಡನಲ್ಲಿ ಇರುವ ಹೆಸರು ಒಂದೇ ಆಗಿರಬೇಕು.
* ವಿಳಾಸದ ದಾಖಲೆಯಾಗಿ ರೇಷನ್ ಕಾರ್ಡ್ ಇದ್ದರೆ ಸಲ್ಲಿಸುವುದು ಅಥವಾ ಇತರ ವಿಳಾಸ ದಾಖಲೆಗಳನ್ನು ಸಲ್ಲಿಸಬಹುದು.
* ಸ್ಪರ್ಧಿಸುವ ಅಭ್ಯರ್ಥಿ ಕಡ್ಡಾಯವಾಗಿ ತನ್ನ ಎಲ್ಲಾ ಆಸ್ತಿಯನ್ನು ಘೋಷಿಸುವುದರ ಜೊತೆಗೆ ಹೊಣೆಗಾರಿಕೆಯನ್ನು ಘೋಷಿಸುವುದು.
* ಯಾವುದೇ ಶೈಕ್ಷಣಿಕ ಅರ್ಹತೆ ಕಡ್ಡಾಯ ಇರೋದಿಲ್ಲ ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಸಹ ಸ್ಪರ್ಧಿಸಲು ಮುಕ್ತ ಅವಕಾಶ ಇದೆ.
* ಯಾವುದೇ ಕೋರ್ಟಿಂದ ದಿವಾಳಿಯಾಗಿದ್ದಾನೆಂದು ಘೋಷಿಸಲ್ಪಟ್ಟಿರಬಾರದು.
* ಮಾನಸಿಕವಾಗಿ ಸ್ವಸ್ಥನಾಗಿರಬೇಕು
* ಮೀಸಲಾತಿ ಅಡಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿಯು ಅದೇ ಜಾತಿಯ ಜಾತಿ ಪ್ರಮಾಣಪತ್ರ ಹೊಂದಿರೋದು ಕಡ್ಡಾಯ.
* ಕನ್ನಡ ಭಾಷೆ ಕಡ್ಡಾಯವಾಗಿ ಮಾತನಾಡೋದಕ್ಕೆ ಬರಬೇಕು.
* ಅಭ್ಯರ್ಥಿಯು ಟೇವಣಿ ಮೊತ್ತ ಇಡಲು ಶಕ್ತನಾಗಿರಬೇಕು.
* ವಿಧವಾ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ಕಡ್ಡಾಯವಾಗಿ ಪತಿ ಮರಣ ಹೊಂದಿರುವ ಬಗ್ಗೆ ಮರಣ ಪ್ರಮಾಣಪತ್ರ ಹೊಂದಿರಬೇಕು ಜೊತೆಗೆ ವಿಧವಾ ಮಹಿಳಾ ಪ್ರಮಾಣಪತ್ರ ಇರಬೇಕು.

ಕರ್ನಾಟಕದ ಎಲ್ಲಾ ನಾಗರಿಕರು ಈ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಗ್ರಾಮಗಳ ಸುಧಾರಣೆಗಾಗಿ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕೆಂದು ಈ ಮೂಲಕ ವಿನಮ್ರವಾಗಿ ಹೇಳುತ್ತೆವೆ ಏಕೆಂದರೆ ಗ್ರಾಮಾಭಿವೃದ್ಧಿಯೇ ದೇಶದ ಅಭಿವೃದ್ಧಿ. ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಆದ್ದರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನದ ಹಕ್ಕು ಪಡೆಯಲು ವೋಟಿಂಗ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ.

ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಅತ್ಯಂತ ಮಹತ್ವದ ಮಾಹಿತಿ:

ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ನೀವು ಮಾಡುವ ಪ್ರಚಾರ ಹಾಗೂ ಪ್ರತಿನಿತ್ಯದ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವುದರಿಂದ ಜನಾಕರ್ಷಣೆ ಆಗುತ್ತದೆ. ಹಾಗೂ ನಿಮ್ಮ ಕಾರ್ಯ ವೈಖರಿ ಜನರಿಗೆ ತಿಳಿದು ಜನ ನಿಮ್ಮನ್ನು ಬೆಂಬಲಿಸಲು ಮುಂದಾಗುತ್ತಾರೆ. ಆದ್ದರಿಂದ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದ ಪೋಸ್ಟರ್ಗಳು ಹಾಗೂ ವಿಡಿಯೋಗಳನ್ನು ನಾವು ಅತ್ಯುತ್ತಮ ಕಡಿಮೆಯ ದರದಲ್ಲಿ ಮಾಡಿಕೊಡುತ್ತೇವೆ ನಿಮಗೆ ಹಬ್ಬಗಳಿಗೆ ವಿಶೇಷ ಸಂದರ್ಭಗಳಲ್ಲಿ ಅಥವಾ ಹುಟ್ಟುಹಬ್ಬಗಳಲ್ಲಿ ಶುಭಕೋರುವ ಪೋಸ್ಟರ್ಗಳು ಬೇಕಿದ್ದರೆ ಈ ಕೆಳಗೆ ನೀಡಿರುವ ನಂಬರನ್ನು ಸಂಪರ್ಕಿಸಿ. 9845499218

Spread positive news

Leave a Reply

Your email address will not be published. Required fields are marked *