ಹಲೋ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯ ಬಗ್ಗೆ ಮಾತಾಡೋಣ. ನಾಡ ಹಬ್ಬ ದಸರಾ ಆರಂಭವಾಗೋಕೆ ಕೆಲವೇ ದಿನಗಳು ಬಾಕಿ ಇದೆ. ಮೈಸೂರು ದಸರಾ ಎಂದರೆ ಸಾಕು ಎಲ್ಲರ ಕಣ್ಣು ಅಗಲವಾಗುತ್ತದೆ. ಅದೆಷ್ಟೋ ಜನರು ಮೈಸೂರು ದಸರಾವನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಾರೆ. ವಿವಿಧ ರಾಜ್ಯಗಳಿಂದ ಸಹ ಜನರು ದಸರಾ ನೋಡಲು ಬರುತ್ತಾರೆ.
ಟಿಕೆಟ್ ಬುಕ್ ದರ ಎಷ್ಟು?
ದಸರಾ ಗೋಲ್ಡ್ ಕಾರ್ಡ್ ₹6500, ಜಂಬೂಸವಾರಿ ಟಿಕೆಟ್ ₹3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ ₹1500 ನಿಗದಿ ಮಾಡಲಾಗಿದೆ. ಅದೇ ರೀತಿ ಸರ್ಕಾರವು ಸಹ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಸಾರ್ವಜನಿಕರಿಗೆ ಬಹಳ ಸಹಕಾರಿಯಾಗಿದೆ. ಅದೇ ರೀತಿ ಸಾರ್ವಜನಿಕರು ಸಹ ಇದಕ್ಕೆ ಸಹಕರಿಸಬೇಕು. ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮೈಸೂರು ದಸರಾ ವೈಭವ ಮೆರಸಬೇಕು ಎಂದು ಸರ್ಕಾರ ಹೇಳುತ್ತಿದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?( How to book tickets)
ಸೆಪ್ಟೆಂಬರ್ 6 ರಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯಿಂದ ಆನ್‌ಲೈನ್ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಮೈಸೂರು ದಸರಾ ನೋಡಲು ಬುಕ್ಕಿಂಗ್ ಮಾಡಲು ಸರ್ಕಾರ ಬಿಡುಗಡೆ ಮಾಡಿರುವ ವೆಬ್‌ಸೈಟ್: https://mysoredasara.gov.in/ ಮೂಲಕ ನೀವು ಮೊದಲೇ ಪಾಸ್ ಬುಕ್ ಮಾಡಿಕೊಳ್ಳಬಹುದಾಗಿದೆ.
ಒಮ್ಮೆ ಬುಕ್ ಮಾಡಿದ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಲು ಹಾಗೂ ಬೇರೆಯವರಿಗೆ ಕೊಡಲು ಯಾವುದೇ ಅವಕಾಶವಿಲ್ಲ. ಇನ್ನು ಟಿಕೆಟ್ ಹಾಗೂ ಪಾಸ್ ಬುಕ್ಕಿಂಗ್ ವಿಚಾರವಾಗಿ ಯಾವುದೇ ವಿಚಾರಣೆ ಇದ್ದರೆ ಅದನ್ನ ವಿಚಾರಿಸಲು ದೂರವಾಣಿ: 8217395364 (ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ) ಇಮೇಲ್: info@ticketgenie.in ಮೂಲಕ ಸಂಪರ್ಕ ಮಾಡಬಹುದು.
ಟಿಕೆಟ್ ಖರಿದಿಸಲು ನಿಯಮಗಳು ಮತ್ತು ಷರತ್ತುಗಳು (Rules for tickets)-
1. ಟಿಕೆಟ್/ಗೋಲ್ಡ್ ಕಾರ್ಡ್ ರಿಡೆಂಪ್ಶನ್‌ಗೆ ಸರ್ಕಾರ ನೀಡಿದ ಮಾನ್ಯ ಐಡಿ ಪ್ರೂಫ್ ಕಡ್ಡಾಯವಾಗಿದೆ.
2. ಮೂರನೇ ವ್ಯಕ್ತಿಯಿಂದ ರಿಡೆಂಪ್ಶನ್‌ಗೆ, ಗೋಲ್ಡ್ ಕಾರ್ಡ್ ಹೊಂದಿರುವವರು ಮತ್ತು ಅಧಿಕೃತ ವ್ಯಕ್ತಿಯ ಐಡಿ ಪ್ರೂಫ್ ಜೊತೆಗೆ ಅಧಿಕೃತ ಪತ್ರ ಕಡ್ಡಾಯವಾಗಿದೆ.
3. ಗೋಲ್ಡ್ ಕಾರ್ಡ್ ಸದಸ್ಯರಿಗಾಗಿ ಡ್ರೋನ್ ಶೋ ಅನ್ನು ನಿರ್ದಿಷ್ಟ ದಿನಾಂಕದಂದು ನಿಗದಿಪಡಿಸಲಾಗಿದೆ, ಅದನ್ನು ಕಾರ್ಡ್‌ನ ಹಿಂಭಾಗದಲ್ಲಿ ಉಲ್ಲೇಖಿಸಲಾಗುತ್ತದೆ. ನಮೂದಿಸಿದ ದಿನಾಂಕದಂದು ಮಾತ್ರ ಪ್ರವೇಶವನ್ನು ಅನುಮತಿಸಲಾಗುತ್ತದೆ.
4. ಒಮ್ಮೆ ಬುಕ್ ಮಾಡಿದ ಟಿಕೆಟ್‌ಗಳನ್ನು ರದ್ದುಗೊಳಿಸಲು, ವಿನಿಮಯ ಮಾಡಿಕೊಳ್ಳಲು ಅಥವಾ ಮರುಪಾವತಿಸಲು ಸಾಧ್ಯವಿಲ್ಲ.
ಅಧಿಕೃತ ಜಾಲತಾಣದಲ್ಲಿ ಶನಿವಾರ ಮಧ್ಯಾಹ್ನ 3ರಿಂದಲೇ ಆನ್ ಲೈನ್ ನಲ್ಲಿ ಖರೀದಿಗೆ ಲಭ್ಯ ಇದೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗೋಲ್ಡ್ ಕಾರ್ಡ್ ಖರೀದಿಸಿರುವವರೆಗೆ(ಒಂದಕ್ಕೆ 6500) ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ(ವಿಶೇಷ ದರ್ಶನಕ್ಕೆ), ಮೈಸೂರು ಅರಮನೆಗೆ ಒಂದು ಬಾರಿ ಉಚಿತವಾಗಿ ಪ್ರವೇಶ ದೊರೆಯಲಿದೆ. ಡ್ರೋನ್ ಶೋ, ಜಂಬೂಸವಾರಿ ಹಾಗೂ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತ್ಯೇಕವಾಗಿ ಆಸನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.