ಪ್ರಸಕ್ತ ಸಾಲಿನ ಎರಡನೇಯ ಮತ್ತು ಕೊನೆಯ ಚಂದ್ರಗ್ರಹಣವು ಸೆಪ್ಟಂಬರ್ 7 ರಂದು(ಭಾನುವಾರ) ಸಂಭವಿಸಲಿದೆ. ಭಾದ್ರಪದ ಮಾಸದ ಪೂರ್ಣಿಮಾ ತಿಥಿಯಂದು ಸಂಪೂರ್ಣ ಚಂದ್ರಗ್ರಹಣ ನಡೆಯಲಿದ್ದು, ಈ ಸಂದರ್ಭದಲ್ಲಿ ಚಂದ್ರನೂ ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಾನೆ.
ಈಹಿನ್ನೆಲೆಯಲ್ಲಿ ಇದನ್ನು ಬ್ಲಡ್ ಮೂನ್ ಡೇ ಎಂದೂ ಕರೆಯಲಾಗುತ್ತದೆ.
ಈ ಸಂಪೂರ್ಣ ಚಂದ್ರಗ್ರಹಣವು ಭಾನುವಾರ ಬೆಳಗ್ಗೆ ಅಂದರೆ, ಸೆಪ್ಟಂಬರ್ 7, 2025ರಂದು ರಾತ್ರಿ 9:58ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 8, 2025 ರಂದು ಮಧ್ಯರಾತ್ರಿ 1:26ರವರೆಗೆ ಇರಲಿದೆ. ಭಾರತೀಯ ಕಾಲಮಾನದ ಪ್ರಕಾರ ಇದು ಸುಮಾರು 82 ನಿಮಿಷಗಳ ಕಾಲ ಇರಲಿದೆ. ಒಟ್ಟು ಹಂತವು 1 ಗಂಟೆ 23 ನಿಮಿಷಗಳಾದ್ದಾಗಿರುತ್ತದೆ.
ಈ ಸಂದರ್ಭದಲ್ಲಿ ಚಂದ್ರನು ಕೆಂಪು ಮತ್ತು ಕಿತ್ತಳೆ ಬಣ್ಣಕ್ಕೆ ತಿರುಗುತ್ತಾನೆ ಮತ್ತು ಆಕಾಶದಲ್ಲಿ ಉಸಿರುಗಟ್ಟುವ ದೃಶ್ಯ ಕಾಣಲು ಸಿಗಲಿದೆ. ಭೂಮಿಯು ಚಂದ್ರನ ನೇರ ಬಂದು ಸೂರ್ಯನ ಬೆಳಕನ್ನು ನಿರ್ಬಂಧಿಸುವುದರಿಂದ ಚಂದ್ರನು ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣುತ್ತಾನೆ. ಇದು ಜ್ಯೋತಿಷ್ಯ ಮಹತ್ವವನ್ನು ಹೊಂದಿದ್ದು, ಇದನ್ನು ಹೆಚ್ಚಾಗಿ ಅಶುಭ ಎಂದು ಪರಿಗಣಿಸಲಾಗಿದೆ.
ಸಂಪೂರ್ಣ ಚಂದ್ರಗ್ರಹಣ ಭಾರತದಲ್ಲಿ ಕಾಣಲಿದೆಯೇ ?
ಸೆಪ್ಟಂಬ್ 7, 2025ರಂದು ನಡೆಯಲಿರುವ ಸಂಪೂರ್ಣ ಚಂದ್ರಗ್ರಹಣವು ವಿಶೇಷತೆಯಿಂದ ಕೂಡಿದೆ. ಈ ಗ್ರಹಣವು ಚಂದ್ರನನ್ನು ಸಂಪೂರ್ಣವಾಗಿ ಆವರಿಸುವುದರಿಂದ ಅದು ಸಂಪೂರ್ಣ ಕೆಂಪಾಗಿ ಕಾಣುತ್ತದೆ. ಈ ಸಂಪೂರ್ಣ ಚಂದ್ರಗ್ರಹಣವನ್ನು ಭಾರತ, ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ ಮತ್ತು ಯುರೋಪಿನ ಅನೇಕ ಭಾಗಗಳಲ್ಲಿ ಗೋಚರಿಸುತ್ತದೆ.
ಭಾರತದಲ್ಲಿ ಕಾಣಸಿಗುವ ಈ ಚಂದ್ರಗ್ರಹಣದ ಅವಧಿಯು ಸುಮಾರು 82 ನಿಮಿಷಗಳಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಸಂಪೂರ್ಣ ಚಂದ್ರಗ್ರಹಣವನ್ನು ದಶಕದ ಅತೀ ದೊಡ್ಡ ಗ್ರಹಣ ಎಂದು ಬಿಂಬಿಸಲಾಗಿದೆ.
ಕೆಲವು ಆಚರಣೆಗಳನ್ನು ನಿರ್ಬಂಧಿಸಲಾಗಿದೆ
ಭಾರತದಲ್ಲಿ ಈ ಸಂಪೂರ್ಣ ಚಂದ್ರಗ್ರಹಣವು ಗೋಚರಿಸುವುದರಿಂದ ಸೂತಕ ಕಾಲ ಇಲ್ಲಿಯೂ ಅನ್ವಯವಾಗಲಿದೆ ಎನ್ನಲಾಗಿದೆ. ಭಾರತದಲ್ಲಿ ಚಂದ್ರಗ್ರಹಣದ ಸೂತಕ ಕಾಲವು ಸೆಪ್ಟಂಬರ್7 ರ ಮಧ್ಯಾಹ್ನ 12,20ರಿಂದ ಪ್ರಾರಂಭವಾಗಿ, ಸೆಪ್ಟಂಬರ್ 8ರ ಮಧ್ಯರಾತ್ರಿ 1.26ಕ್ಕೆ ಕೊನೆಗೊಳ್ಳಲಿದೆ.
ಈ ಸಂದರ್ಭದಲ್ಲಿ ಚಂದ್ರದೇವನಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದು ಸೂಕ್ತ. ಧ್ಯಾನ, ಭಜನೆಗಳನ್ನು ಹಾಡಿ,ಚಂದ್ರಗ್ರಹಣ ಮುಗಿದ ನಂತರ ಸ್ನಾನ ಮಾಡಿ, ಮನೆಯನ್ನು ಮತ್ತು ದೇವರ ಕೋಣೆಯನ್ನು ಶುಧ್ದೀಕರಿಸಿ. ಜನರು ತಮ್ಮ ಆರೋಗ್ಯ, ಮನೆ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಗ್ರಹಣದ ಸಮಯದಲ್ಲಿ ಆಚರಣೆಗಳು ಮತ್ತು ನಿರ್ಬಂಧಗಳನ್ನು ಅನುಸರಿಸುತ್ತಾರೆ.
ಏನು ಮಾಡಬಾರದು ?
ಈ ದಿನದಂದು ಶುಭ ಕಾರ್ಯ ಮಾಡುವುದು ಒಳ್ಳೆಯದಲ್ಲ, ಮದುವೆ ಮುಂತಾದ ಶುಭ ಕಾರ್ಯಕ್ರಮವನ್ನು ಇಟ್ಟುಕೊಳ್ಳಬೇಡಿ, ಇದರಿಂದ ದೂರವಿರಿ, ಹಾಗೆಯೇ ಯಾವುದೇ ಹೊಸ ಪ್ರಯತ್ನಕ್ಕೆ ಕೈಹಾಕುವುದು ಒಳ್ಳೆಯದ್ದಲ್ಲಾ ಎಂದಿದ್ದಾರೆ ತಜ್ಞರು.
ಗರ್ಭಿಣಿಯರಿಗೆ ರಕ್ಷಣಾತ್ಮಕ ಕ್ರಮಗಳು
ಹಿಂದೂ ಸಂಪ್ರದಾಯಗಳು ಗ್ರಹಣದ ಸಮಯದಲ್ಲಿ ಗರ್ಭಿಣಿಯರಿಗೆ ವಿಶೇಷ ಒತ್ತು ನೀಡುತ್ತವೆ. ಗರ್ಭಿಣಿಯರು ಮನೆಯೊಳಗೆ ಇರುವುದು, ರಕ್ಷಣೆಗಾಗಿ ಮಂತ್ರಗಳನ್ನು ಪಠಿಸುವುದು ಮತ್ತು ಶಾಂತತೆಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು. ಅನೇಕ ಕುಟುಂಬಗಳು ತೆಂಗಿನಕಾಯಿ, ಕುಶಾ ಹುಲ್ಲು ಅಥವಾ ಪವಿತ್ರ ದಾರವನ್ನು ತಮ್ಮ ದೇಹದ ಹತ್ತಿರ ರಕ್ಷಣಾತ್ಮಕ ತಾಯಿತವಾಗಿ ಇಟ್ಟುಕೊಳ್ಳಲು ಸೂಚಿಸಲಾಗುತ್ತದೆ.
ಅಡುಗೆ ಮಾಡುವುದು
ಗ್ರಹಣಕ್ಕೆ ಮೊದಲು ಅಥವಾ ಸಮಯದಲ್ಲಿ ತಯಾರಿಸಿದ ಆಹಾರವು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಸಂಪ್ರದಾಯಗಳು ಸೂತಕದ ಸಮಯದಲ್ಲಿ ಅಡುಗೆ ಮಾಡಬಾರದು ಅಥವಾ ತಿನ್ನಬಾರದು ಎಂದು ಸೂಚಿಸುತ್ತವೆ.
ವಿಗ್ರಹಗಳು ಅಥವಾ ತುಳಸಿ ಗಿಡವನ್ನು ಮುಟ್ಟಬೇಡಿ.
ಗ್ರಹಣದ ಸಮಯದಲ್ಲಿ ದೇವಾಲಯಗಳು ಹೆಚ್ಚಾಗಿ ಮುಚ್ಚಿರುತ್ತವೆ. ಈ ಸಮಯದಲ್ಲಿ ಜನರು ದೇವತೆಗಳ ವಿಗ್ರಹಗಳನ್ನು ಅಥವಾ ಪವಿತ್ರ ತುಳಸಿ ಗಿಡವನ್ನು ಮುಟ್ಟಬಾರದು ಎಂದು ಕೇಳಲಾಗುತ್ತದೆ, ಏಕೆಂದರೆ ನಕಾರಾತ್ಮಕ ಪ್ರಭಾವವು ಅವರ ಪಾವಿತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಚಂದ್ರ ಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸುವುದರಿಂದ ಚಂದ್ರ ಗ್ರಹಣದ ದೋಷ ನಿವಾರಣೆಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಚಂದ್ರ ಗ್ರಹಣದ ಸಂದರ್ಭದಲ್ಲಿ ಪಠಿಸಬಹುದಾದ ಕೆಲವು ಮಂತ್ರಗಳು:
ಚಂದ್ರ ಬೀಜ ಮಂತ್ರ:
”ಓಂ ಶ್ರಾಂ ಶ್ರೀಂ ಶೌಂ ಸಃ ಚಂದ್ರಾಯ ನಮಃ”
ಚಂದ್ರ ಗಾಯತ್ರಿ ಮಂತ್ರ:
”ಓಂ ಕ್ಷೀರಪುತ್ರಾಯ ವಿದ್ಮಹೇ ಅಮೃತತತ್ವಾಯ ಧೀಮಹೀ ತನ್ನೋ ಸೋಮಃ ಪ್ರಚೋದಯಾತ್”
ನವಗ್ರಹ ಚಂದ್ರ ಶಾಂತಿ ಮಂತ್ರ:
”ಓಂ ದಧಿಶಂಖತುಷಾರಾಭಂ ಕ್ಷೀರೋದಾರ್ಣವ ಸಂಭವಂ | ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ”.
ಗ್ರಹಣ ಶಾಂತಿಯ ಮಹತ್ವ:
ಗ್ರಹಣ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸುವುದರಿಂದ ಗ್ರಹಣದ ದೋಷ ನಿವಾರಣೆಯಾಗುತ್ತದೆ.
ಚಂದ್ರನ ಆಶೀರ್ವಾದ ಪಡೆಯಲು ಮತ್ತು ಮನಸ್ಸಿಗೆ ಶಾಂತಿ ತರಲು ಈ ಮಂತ್ರಗಳು ಸಹಾಯಕವಾಗಿವೆ.
ಚಂದ್ರಗ್ರಹಣದ ದಿನದಂದು ನೀವು ಈ ಕೆಲಸಗಳನ್ನು ಮಾಡಬೇಡಿ:
೧. ಚಂದ್ರಗ್ರಹಣದ ಸಮಯದಲ್ಲಿ ಕೋಪಗೊಳ್ಳಬಾರದು. ಈ ದಿನ ಕೋಪಗೊಳ್ಳುವುದರಿಂದ ಮುಂದಿನ ೧೫ ದಿನಗಳು ನಿಮಗೆ ಅಪಾಯವು ಎದುರಾಗುವುದು.
೨. ಚಂದ್ರಗ್ರಹಣದ ಸಮಯದಲ್ಲಿ ಆಹಾರವನ್ನು ಸೇವಿಸಬೇಡಿ. ಇದಲ್ಲದೆ, ಪೂಜೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ.
೩. ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ನಿರ್ಜನ ಸ್ಥಳ ಅಥವಾ ಸ್ಮಶಾನಕ್ಕೆ ಹೋಗಬಾರದು. ಈ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಾಬಲ್ಯ ಸಾಧಿಸುತ್ತವೆ.
೪. ಚಂದ್ರಗ್ರಹಣದ ಸಮಯದಲ್ಲಿ, ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಾರದು. ಯಾಕೆಂದರೆ ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯು ಮೇಲುಗೈ ಸಾಧಿಸುತ್ತದೆ.
೫. ಗ್ರಹಣದ ಸಮಯದಲ್ಲಿ ಗಂಡ ಹೆಂಡತಿ ದೈಹಿಕ ಸಂಬಂಧವನ್ನು ಹೊಂದಬಾರದು.
ಹೀಗೆ ಮಾಡುವುದರಿಂದ ನಿಮ್ಮ ಮನೆಯ ಶಾಂತಿ ಮತ್ತು ಸಂತೋಷ ಹಾಳಾಗಬಹುದು.
ಚಂದ್ರಗ್ರಹಣದ ದಿನದಂದು ನೀವು ಈ ಕೆಲಸಗಳನ್ನು ಮಾಡಬಹುದು:
೧. ಚಂದ್ರಗ್ರಹಣದ ಸಮಯದಲ್ಲಿ, ದೇವರ ಮಂತ್ರಗಳನ್ನು ಪಠಿಸುವುದು ತುಂಬಾನೇ ಒಳ್ಳೆಯದು. ಇದು ಹತ್ತು ಪಟ್ಟು ಹೆಚ್ಚು ಶುಭ ಫಲಗಳನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.
೨. ಚಂದ್ರಗ್ರಹಣದ ನಂತರ ಶುದ್ಧ ನೀರಿನಿಂದ ಸ್ನಾನ ಮಾಡಿ ಬಡವರಿಗೆ ನಿಮ್ಮ ಕೈಲಾದಷ್ಟು ದಾನವನ್ನು ಮಾಡಬೇಕು.
೩. ಚಂದ್ರಗ್ರಹಣದ ನಂತರ ಇಡೀ ಮನೆಯನ್ನು ಶುದ್ದೀಕರಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಎಲ್ಲಾ, ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ.
೪. ಗ್ರಹಣದ ಸಮಯದಲ್ಲಿ, ಹಸುಗಳಿಗೆ ಹುಲು, ಪಕ್ಷಿಗಳಿಗೆ ಆಹಾರ ಮತ್ತು ನಿರ್ಗತಿಕರಿಗೆ ಬಟ್ಟೆಗಳನ್ನು ದಾನ ಮಾಡುವುದರಿಂದ ಅನೇಕ ಪಟ್ಟು ಹೆಚ್ಚಿನ ಪುಣ್ಯ ಸಿಗುತ್ತದೆ ಎನ್ನುವ ನಂಬಿಕೆಯಿದೆ.
ಗ್ರಹಣ ಫಲ
ಶುಭ ಫಲ: ಧನಸ್ಸು, ಕನ್ಯಾ, ವೃಷಭ, ಮೇಷ
ಮಿಶ್ರ ಫಲ: ಮಕರ, ತುಲಾ, ಸಿಂಹ, ಮಿಥುನ
ಅಶುಭ ಫಲ: ಕುಂಭ, ಮೀನ, ಕಟಕ, ವೃಶ್ಚಿಕ