ಈ ದಿನದಂದು ಮುಂದಿನ ಕಂತಿನ ಪಿಎಂ ಕಿಸಾನ್ ಹಣ ಜಮಾ ಆಗಲಿದೆ

ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ. ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರಿಗೆ ನೇರವಾಗಿ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಿದ್ದಾರೆ. ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಜಾರಿಗೆ ತಂದಿದ್ದು, ಇದೀಗ 20ನೇ ಕಂತಿನ ಹಣ ಜಮಾ ಪ್ರಕ್ರಿಯೆ ಆರಂಭವಾಗುತ್ತಿದೆ. ಈ ವಾರದಲ್ಲಿ ಫಲಾನುಭವಿ ರೈತರ ಖಾತೆಗೆ ₹2,000 ಹಣ ನೇರವಾಗಿ ಜಮಾಗೊಳ್ಳಲಿದೆ.

ಪಿಎಂ ಕಿಸಾನ್ ಯೋಜನೆಯಲ್ಲಿ ಒಂದು ವರ್ಷದಲ್ಲಿ 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಅಂದರೆ, ತಲಾ 2,000 ರೂಗಳಂತೆ ಮೂರು ಕಂತುಗಳಲ್ಲಿ ಈ ಹಣವನ್ನು ನೀಡಲಾಗುತ್ತಿದೆ. ಈಗ ಒಂದು ಕಂತು ಹೆಚ್ಚು ಮಾಡಬಹುದು. 2,000 ರೂಗಳ ನಾಲ್ಕು ಕಂತುಗಳನ್ನು ರೈತರ ಖಾತೆಗಳಿಗೆ ಹಾಕಬಹುದು. ಒಟ್ಟು ಒಂದು ವರ್ಷದಲ್ಲಿ 8,000 ರೂ ಹಣವು ರೈತರಿಗೆ ಸಿಗಲಿದೆ.

ಪ್ರತಿ ವರ್ಷ ರೈತರ ಬ್ಯಾಂಕ್ ಖಾತೆಗೆ ₹6,000 ನಗದು ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ನೇರ ಲಾಭಾಂಶ ಜಮಾ ವ್ಯವಸ್ಥೆಯ (DBT) ಮೂಲಕ ಜಮಾಗೊಳ್ಳುತ್ತದೆ. ವರ್ಷದ ಮೂರು ಕಂತುಗಳ ವಿವರ ಹೀಗಿದೆ. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ 2.41 ಕೋಟಿ ಮಹಿಳಾ ರೈತರು ಸೇರಿದಂತೆ 9.8 ಕೋಟಿಗೂ ಹೆಚ್ಚು ರೈತರು 19 ನೇ ಕಂತಿನ ಬಿಡುಗಡೆಯ ಮೂಲಕ ಪ್ರಯೋಜನ ಪಡೆಯಲಿದ್ದಾರೆ, ಯಾವುದೇ ಮಧ್ಯವರ್ತಿಗಳ ಒಳಗೊಳ್ಳುವಿಕೆ ಇಲ್ಲದೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ₹22,000 ಕೋಟಿಗಿಂತ ಹೆಚ್ಚಿನ ನೇರ ಆರ್ಥಿಕ ಸಹಾಯವನ್ನು ಪಡೆಯಲಿದ್ದಾರೆ.

ಇದು ರೈತರ ಕಲ್ಯಾಣ ಮತ್ತು ಕೃಷಿ ಸಮೃದ್ಧಿಗೆ ಸರ್ಕಾರದ ಬದ್ಧತೆಯನ್ನು ಬಲಪಡಿಸುತ್ತದೆ. ಈ ಕಂತಿನೊಂದಿಗೆ, ಈ ಯೋಜನೆಯು ದೇಶಾದ್ಯಂತ ರೈತರಿಗೆ ಬೆಂಬಲ ನೀಡಲಿದೆ ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಸಮೃದ್ಧಿಗೆ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ದೃಢೀಕರಿಸಲಿದೆ.

ಪಿಎಂ ಕಿಸಾನ್ ಕೇಂದ್ರ ಸರ್ಕಾರದ PM-KISAN Portal ನಲ್ಲಿ ಹಾಗೂ ಮೊಬೈಲ್ (https://pmkisan.gov.in)ಈ ಲಿಂಕ್ ಮೂಲಕ ಸಹ ನೀವು ನಿಮ್ಮ ಪಿಎಂ ಕಿಸಾನ್ ಹಣ ಹೊಸ ಅಪ್ಡೇಟ್ ಹಾಗೂ ಈ ಕೆವೈಸಿ ಮಾಡಬಹುದು. ಪಿ.ಎಂ.ಕಿಸಾನ್ ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ. e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು ಕೋರಿದೆ.

ಹೊಸ ಅಪ್ಡೇಟ್ ಬಂದಿದೆ. ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ.
ಕೇಂದ್ರ ಸರ್ಕಾರವು ಪಿ. ಎಂ. ಕಿಸಾನ್ ಯೋಜನೆಯಲ್ಲಿ ಫಲಾನುಭವಿಗಳ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ರೈತರಿಗೆ ತಲುಪಿಸಲು ಅನುಕೂಲವಾಗಲು ಇನ್ನು ಮುಂದೆ ಭಾರತ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್ ನಲ್ಲಿ ನೋಂದಣಿಯಾಗುವ ಫಲಾನುಭವಿಗಳಿಗೆ Unique Mobile number ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ. ಕೇಂದ್ರ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್‌ನ ಮುಖಪುಟದಲ್ಲಿ Update Mobile Number” (https://pmkisan.gov.in/MobileUpdation_Pub.aspx) 2 ಆಯ್ಕೆಯನ್ನು ನೀಡಲಾಗಿದ್ದು, ಸದರಿ ಫಲಾನುಭವಿಗಳ ಮಾಹಿತಿಯನ್ನು ಈ ಲಿಂಕ್ ನಲ್ಲಿ ನೀಡಲಾಗಿದೆ.

ಹಣ ಜಮಾ ಸ್ಥಿತಿಯನ್ನು ಪರಿಶೀಲಿಸುವ ವಿಧಾನ –

ಇನ್ನು ಪಿಎಂ ಕಿಸಾನ್ ಹಣ ಜಮಾ ವಿವರವನ್ನು ರೈತರು ತಮ್ಮ ಮೊಬೈಲ್‌ನಲ್ಲಿಯೇ ಪರಿಶೀಲಿಸಬಹುದಾಗಿದೆ. ಅದಕ್ಕಾಗಿ ಮೊದಲಿಗೆ PM-Kisan Status-2025 ನಿಮ್ಮ ರಿಜಿಸ್ಟ್ರೇಷನ್‌ ಸಂಖ್ಯೆ ಹಾಕಿ, ಕ್ಯಾಪ್ಟಾ ನಮೂದಿಸಿ, ನಿಮ್ಮ ಮೊಬೈಲ್‌ಗೆ ಬಂದ OTP ಹಾಕಿ, Latest Installments Details ವಿಭಾಗದಲ್ಲಿ ಕಂತಿನವಾರು ಈ ಯೋಜನೆಯ ಹಣ ಜಮಾ ವಿವರ ತೋರಿಸುತ್ತದೆ.

ಈ ಬಾರಿ ಅಂತಹ ಹೆಚ್ಚಿನ ಸಂಖ್ಯೆಯ ಜನರನ್ನು ಕೇಂದ್ರ ಸರ್ಕಾರವು ಗುರುತಿಸಿದೆ, ಅವರು ಈ ಯೋಜನೆಯ ಲಾಭವನ್ನು ಅನ್ಯಾಯದ ರೀತಿಯಲ್ಲಿ ಪಡೆಯುತ್ತಿದ್ದಾರೆ. ಅವರಿಗೆ ಭೂ ಪರಿಶೀಲನೆ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯೋಜನೆಯ ಪ್ರಯೋಜನವನ್ನು ಪಡೆಯಲು, ಮೊದಲನೆಯದಾಗಿ, ಭೂ ಪರಿಶೀಲನೆ ಅಂದರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಅವಶ್ಯಕ. ಅದೇ ರೀತಿ ಇನ್ನೂ ಹಣ ಬರದೆ ಇರುವವರಿಗೆ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದ್ದು ರೈತರು ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೆವೈಸಿ ಮಾಡಿಸಿಕೊಳ್ಳಿ.

Spread positive news

Leave a Reply

Your email address will not be published. Required fields are marked *