ಇಂದಿನಿಂದ ನಾಲ್ಕುದಿನ ಭಾರೀ ಮಳೆ ಸಂಭವ – 14 ಜಿಲ್ಲೆಗಳಿಗೆ ಅಲರ್ಟ್!

ರೈತರೇ ಇವತ್ತು ನಾವು ಮಳೆಯ ಅವಾಂತರದ ಬಗ್ಗೆ ಮಾಹಿತಿ ತಿಳಿಯೋಣ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶನಿವಾರ (ಮೇ 11, 2025) ದುರಂತ ಸಂಭವಿಸಿದೆ. ಜಮೀನಿನಲ್ಲಿ ಮೇವು ತೆಗೆದುಕೊಂಡು ವಾಪಸ್ ಬರುವಾಗ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗವ್ವ ಜೀರಗಿವಾಡ ಮತ್ತು ಕಲಾವತಿ ಜೀರಗಿವಾಡ ಎಂದು ಗುರುತಿಸಲಾಗಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಮುಂಗಾರುಪೂರ್ವ ಮಳೆ ಶುರುವಾಗಿದೆ ಗುಡುಗು ಸಿಡಲಿನೊಂದಿಗೆ ಕೆಲವಡೆ ಮಳೆಯಾಗುತ್ತಿದೆ. ಈ ವೇಳೆ ಹೊಲದಲ್ಲಿ ದುಡಿಯುವ ರೈತಾಪಿ ಕುಟುಂಬಗಳು ಸಿಡಿಲಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳಬೇಕಿದೆ.

ಸಿಡಿಲಿನಿಂದ ಸುರಕ್ಷಿತವಾಗಿರಲು ಈ ಕೆಳಗಿನ ಮಾರ್ಗಸೂಚಿಗಳನ್ನು ಅನುಸರಿಸಿ:
30-30 ನಿಯಮ: ಮಿಂಚು ಕಂಡ ನಂತರ 30 ಸೆಕೆಂಡುಗಳ ಒಳಗೆ ಗುಡುಗು ಕೇಳಿದರೆ, ಸಿಡಿಲಿನ ಅಪಾಯವಿದೆ. ತಕ್ಷಣ ಆಶ್ರಯ ಪಡೆಯಿರಿ.

ಒಳಾಂಗಣ ಆಶ್ರಯ: ಕಾಂಕ್ರೀಟ್ ಕಟ್ಟಡ ಅಥವಾ ಲೋಹದ ಛಾವಣಿಯ ಕಾರಿನೊಳಗೆ ಆಶ್ರಯ ಪಡೆಯಿರಿ. ತೆರೆದ ಸ್ಥಳಗಳನ್ನು ತಪ್ಪಿಸಿ. ಒಂದು ವೇಳೆ‌ ತೆರೆದ ಪ್ರದೇಶದಲ್ಲಿ ಇದ್ದರೆ ಎತ್ತರದ ಮರಗಳು, ದೊಡ್ಡ ಕಂಬಗಳು ಅಥವಾ ಲೋಹದ ವಸ್ತುಗಳಿಂದ ದೂರವಿರಿ. ಎದ್ದು ನಿಲ್ಲಬೇಡಿ. ಎತ್ತರದ ಸ್ಥಳದಲ್ಲಿ ನಿಲ್ಲಬೇಡಿ. ಕೈ ಕಾಲುಗಳ ನಡುವೆ ತಲೆ ಬಾಗಿಸಿ ಕುಳಿತುಕೊಳ್ಳಿ.

ನೀರಿನಿಂದ ದೂರ: ಸಿಡಿಲಿನ ಸಮಯದಲ್ಲಿ ಈಜಾಡಬೇಡಿ ಅಥವಾ ನೀರಿನ ಸಂಪರ್ಕದಲ್ಲಿರಬೇಡಿ.

ಲೋಹದ ವಸ್ತುಗಳನ್ನು ತಪ್ಪಿಸಿ: ಲೋಹದ ವಸ್ತುಗಳು (ಕೃಷಿ ಉಪಕರಣಗಳು, ಬೈಸಿಕಲ್) ಸಿಡಿಲನ್ನು ಆಕರ್ಷಿಸಬಹುದು.
ಗುಂಪಾಗಿ ನಿಂತರೆ ಸಿಡಿಲು ಬಡಿದಾಗ ಹೆಚ್ಚಿನ ಹಾನಿಯಾಗಬಹುದು. ಒಂಟಿಯಾಗಿರಿ.

ಸಿಡಿಲಿನ ಸಮಯದಲ್ಲಿ ವೈರ್‌ಲೆಸ್ ಫೋನ್‌ಗಳ ಬಳಕೆ ಸುರಕ್ಷಿತ, ಆದರೆ ಕಾರ್ಡ್‌ಲೆಸ್ ಫೋನ್‌ಗಳನ್ನು ತಪ್ಪಿಸಿ ಸಿಡಿಲಿನ ಸಮಯದಲ್ಲಿ ಮಿಂಚು ಕಂಡರೆ ಒಳಗೆ ಹೋಗಿ ಎಂಬ ಮಾತನ್ನು ಅನುಸರಿಸಿ. ಹೊರಗಡೆ ಚಟುವಟಿಕೆಗಳನ್ನು ಮಳೆಗಾಲದಲ್ಲಿ ಸಾಧ್ಯವಾದಷ್ಟು ತಪ್ಪಿಸಿ.

ಸಿಡಿಲು ತಿಳಿವಳಿಕೆ ಮತ್ತು ಸಂರಕ್ಷಣೆಯ ಸಾಮಾನ್ಯ ಸೂತ್ರಗಳು ಹೀಗಿವೆ: ಗುಡುಗು–ಸಿಡಿಲು ಸಹಿತ ಮಳೆಯ ಸಂದರ್ಭದಲ್ಲಿ ಬಯಲಿನಲ್ಲಿ ನಿಲ್ಲಬಾರದು. ಫೋನನ್ನು ಉಪಯೋಗಿಸಬಾರದು. ಲೋಹದ ಯಾವುದೇ ವಸ್ತುವನ್ನು ಹಿಡಿದುಕೊಂಡಿರಬಾರದು. ಯಾವ ಆಶ್ರಯವೂ ಸಿಗದಿದ್ದ ವೇಳೆ ತಲೆಯನ್ನು ಮೊಣಕಾಲು ಮಧ್ಯೆ ಇಟ್ಟು ಕುಳಿತುಕೊಳ್ಳಬೇಕು ಅಥವಾ ಅಂಗಾತ ಮಲಗಬೇಕು.

ವಾಹನಗಳಲ್ಲಿದ್ದರೆ, ಅಲ್ಲಿಯೇ ಕುಳಿತಿರಬೇಕು. ದೂರದಲ್ಲೆಲ್ಲೋ ಗುಡುಗಿ ಮಳೆಯಾಗುತ್ತಿದೆ, ನನಗೇನೂ ಆಗದು ಎಂದು ಉದಾಸೀನ ಮಾಡದೆ ರಕ್ಷಣೆ ಮಾಡಿಕೊಳ್ಳಬೇಕು, ಏಕೆಂದರೆ ಸಿಡಿಲು 20 ಕಿ.ಮೀ.ವರೆಗೂ ಪ್ರವಹಿಸಬಲ್ಲದು.

ವೈಜ್ಞಾನಿಕವಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ನಿರ್ವಹಣೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಒಂದು ಮಗ್ಗುಲಾದರೆ, ಇದೆಲ್ಲವನ್ನೂ ಅಳವಡಿಸಿಕೊಂಡು ಸಿಡಿಲಿನ ವಿಕೋಪದಿಂದ ರಕ್ಷಣೆ ಪಡೆಯುವುದು ವಾಸ್ತವದಲ್ಲಿ ಬಹಳಮುಖ್ಯ. ದೂರದ ಹೊಲದಲ್ಲಿ ಕೆಲಸ ಮಾಡುವ ರೈತರ ಮೊಬೈಲ್‌ಗೆ ಸಿಡಿಲಿನ ಸೂಚನೆಯೊಂದು ಬಂತೆಂದು ಇಟ್ಟುಕೊಳ್ಳೋಣ.

ಅವನು ತಕ್ಷಣ ಓಡಿ ಮನೆ ಸೇರಿಕೊಳ್ಳಲಾದೀತೆ? ಕುರಿಗಾಹಿಯೊಬ್ಬ ಎಲ್ಲವನ್ನೂ ಅಲ್ಲಿಯೇ ಬಿಟ್ಟು ಎಲ್ಲಿ ಹೋಗಿ ಆಶ್ರಯ ಪಡೆಯಬೇಕು? ಆದ್ದರಿಂದ ಸಿಡಿಲಿನಿಂದ ರಕ್ಷಿಸಿಕೊಳ್ಳಲು ಬೇರೇನಾದರೂ ಮಾರ್ಗ ಹುಡುಕಲೇಬೇಕು.

ಯಾವುದೇ ಕಾರಣಕ್ಕೂ ಮರದ ಕೆಳಗೆ ನಿಲ್ಲಬೇಡಿ. ಸಿಡಿಲು ಭೂಮಿಗೆ ಹರಿಯುವಾಗ ಮರದಂಥ ಹಸಿ ಸಾವಯವ ವಸ್ತುವಿನತ್ತ ಆಕರ್ಷಿತವಾಗುತ್ತದೆ‌. ಲೋಹದ ವಸ್ತುಗಳನ್ನು (ಉದಾ: ಕುಡು ಗೋಲು, ಕೊಡಲಿ, ಹಾರೆ) ದೂರವಿರಿಸಿ. ಮಲೆನಾಡಿನಲ್ಲಿ, ಕತ್ತಿ ಮುಂತಾದ ಲೋಹ ಗಳನ್ನು ಅಂಗಳಕ್ಕೆ ಎಸೆಯಲಾಗುತ್ತದೆ.

ಮನೆಯ ಹೊರಗಿದ್ದರೆ ಸಮೀಪದ ಕಟ್ಟಡದ ಆಶ್ರಯ ಪಡೆಯಿರಿ. ಬಯಲು ಪ್ರದೇಶವಾಗಿದ್ದರೆ ತಗ್ಗು ತಾಣಗಳಿಗೆ ಹೋಗಿ ಕುಳಿತುಕೊಳ್ಳಿ. ಬಯಲಿನಲ್ಲಿದ್ದರೆ ಅಲ್ಲೇ ಮಲಗಬೇಡಿ. ಒದ್ದೆ ನೆಲದೊಂದಿಗೆ ನಿಮ್ಮ ಇಡೀ ದೇಹ ಸಂಪರ್ಕದಲ್ಲಿರಬಾರದು. ಕುಕ್ಕುರುಗಾಲಿನಲ್ಲಿ ಕುಳಿತು ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ. ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.

ಈ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ, ಇದು ತೀವ್ರ ಹವಾಮಾನ ಪರಿಸ್ಥಿತಿಗೆ ತಲುಪಲಿದೆ. ರೈತರು, ಸಾರ್ವಜನಿಕರು, ಮತ್ತು ಸ್ಥಳೀಯ ಆಡಳಿತವು ಪ್ರವಾಹ ಸಾಧ್ಯತೆ, ರಸ್ತೆಗಳಲ್ಲಿ ನೀರು ನಿಲ್ಲುವಿಕೆ ಮತ್ತು ಸಂಚಾರ ಸಮಸ್ಯೆಗಳಿಗೆ ಮುಂಜಾಗ್ರತೆ ವಹಿಸಬೇಕು ಎನ್ನಲಾಗಿದೆ.

ಸಿಡಿಲಿನಿಂದ ಜೀವ, ಆಸ್ತಿ, ಮೂಲಸೌಕರ್ಯ, ಜಾನುವಾರು ಮತ್ತು ಜೀವನೋಪಾಯಕ್ಕೆ ಹಾನಿ ಆಗುತ್ತಿದೆ. ಇದು ಸಮಾಜದ ದುರ್ಬಲ ವರ್ಗಗಳ ಮೇಲೆ (ಸಣ್ಣ ಮತ್ತು ಅತಿ ಸಣ್ಣ ರೈತರು, ಮಾರಾಟಗಾರರು, ಉದ್ಯೋಗಿಗಳು ಇತ್ಯಾದಿ) ಪರಿಣಾಮ ಬೀರುತ್ತದೆ. ಹಾನಿ ಪ್ರಮಾಣ ತಗ್ಗಿಸಲು ಸರ್ಕಾರ ಅನೇಕ ಉಪಕ್ರಮ ಕೈಗೊಂಡಿದ್ದರೂ ನಿರೀಕ್ಷಿತ ಫಲಕೊಟ್ಟಿಲ್ಲ.

ರಾಜ್ಯದಲ್ಲಿ ಸಿಡಿಲಿನ ಹೊಡೆತದಿಂದಾಗುವ ನಷ್ಟವನ್ನು ತಗ್ಗಿಸಲು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಗುಡುಗು ಮತ್ತು ಸಿಡಿಲು ಸಂಭಾವ್ಯತೆ ಬಗ್ಗೆ ಮುನ್ನೆಚ್ಚರಿಕೆ ಒದಗಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಕಾರ್ಯಗತಗೊಳಿಸಿದೆ.

ಇಂದು ಕರ್ನಾಟಕದಲ್ಲಿ ಕೆಲವೊಂದು ಭಾಗಗಳಲ್ಲಿ ಅಂದರೆ ಈ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಏಕೆಂದರೆ ಈಗಾಗಲೇ ಮಳೆ ಬಹಳ ದಿನಗಳಿಂದ ಬಂದಿಲ್ಲ ಹಾಗೂ ಆಕಸ್ಮಿಕ ಮಳೆಗಳು ಹೆಚ್ಚಾಗಬಹುದು ಹಾಗೂ ಹಾನಿಗಳನ್ನು ಸಹ ಉಂಟು ಮಾಡಬಹುದು ಏಕೆಂದರೆ ಈಗಾಗಲೇ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ ಹೀಗಾಗಿ ಯಾವುದೇ ರೀತಿ ಮಳೆಗಳಾದರೂ ವಿಶೇಷವಾಗಿರುತ್ತವೆ ಅಂದರೆ ಹಾನಿ ಆಗಿರಬಹುದು ಹಾಗೂ ರೈತರಿಗೆ ಅನುಕೂಲಕರವಾಗಿರಬಹುದು.

ಕರ್ನಾಟಕಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಬಿಗ್‌ ಗುಡ್‌ನ್ಯೂಸ್‌ ನೀಡಿದೆ. ರಾಜ್ಯದಲ್ಲಿ ಇದೀಗ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಮೇ 13ರ ವರೆಗೆ ಮುಂಗಾರು ಪೂರ್ವ ಮಳೆ ಮುಂದುರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಇದರ ನಡುವೆ ಅದರ ಒಳಗಾಗಿಯೇ ನೈಋತ್ಯ ಮಾನ್ಸೂನ್ ಪ್ರವೇಶವಾಗುವ ಸಾಧ್ಯತೆ ಇರುವ ಬಗ್ಗೆ ಭರ್ಜರಿ ಗುಡ್‌ನ್ಯೂಸ್‌ ನೀಡಲಾಗಿದೆ.

ಉತ್ತಮ ಮಳೆ ಪರಿಣಾಮ –
ಕೃಷಿಯು ಭಾರತದ ಜಿಡಿಪಿಗೆ ಶೇ.18.2ರಷ್ಟು ಕೊಡುಗೆ ನೀಡುತ್ತಿದೆ. ಅಲ್ಲದೆ, ದೇಶದಲ್ಲಿ ಶೇ.42.3ರಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿ ದ್ದಾರೆ. ಹೀಗಾಗಿ ಉತ್ತಮ ಮಳೆಯಾದರೆ ಹಣದುಬ್ಬ ರಕ್ಕೂ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು (INCOIS) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶಗಳಿಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ಮತ್ತು ಉಬ್ಬರದ ಅಲರ್ಟ್ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಾರ್ಚ್ 20ರವರೆಗೆ ರಣಬಿಸಿಲಿರಲಿದೆ ಎಂಬ ಮುನ್ಸೂಚನೆ ನೀಡುವೆಯೂ ಕರ್ನಾಟಕದ ಹಲವು ಭಾಗಗಳಲ್ಲಿ ಇಂದು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ತಾಪಮಾನ ಹೆಚ್ಚಳಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ಸ್ಟ್ರೋಕ್ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಬೇಸಿಗೆ ಶುರುವಾಗಿದ್ದು, ನಗರದಲ್ಲಿ ತಾಪಮಾನದಲ್ಲಿ ಏರಿಕೆ ಕಂಡು ಬಂದಿದೆ.

ಬಿರು ಬಿಸಿಲಿಗೆ ಜನ ಬಸವಳಿದು ಹೋಗಿದ್ದಾರೆ. ಬಿಸಿಲಿನ ಝಳ ಶಿಶುಗಳು, ವಯಸ್ಸಾದವರು, ಮಕ್ಕಳು, ಗರ್ಭೀಣಿಯರಿಗೆ, ಬೀದಿಬದಿಯಲ್ಲಿ ವ್ಯಾಪಾರ ಮಾಡುವವರಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಾಕಷ್ಟು ಕಾಡುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ತಾಪಮಾನ ಹೆಚ್ಚಳಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ಸ್ಟ್ರೋಕ್ ಬಗ್ಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ತಕ್ಷಣದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು, ಅಸ್ತಿತ್ವದಲ್ಲಿರುವ ಕೆಲವು ಸೌಲಭ್ಯಗಳನ್ನು ಚಿಕಿತ್ಸಾ ಕೊಠಡಿಗಳಾಗಿ ಪರಿವರ್ತಿಸಲು ಮುಂದಾಗಿದೆ. ಈ ಕೊಠಡಿಗಳಲ್ಲಿ ಅಗತ್ಯ ಔಷಧಗಳು, ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ.

Spread positive news

Leave a Reply

Your email address will not be published. Required fields are marked *