ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ 12,726 ಹೆಕ್ಟರ್ ಬೆಳೆ ನಾಶ ಆಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಬಹಳ ಕಡೆ ನಷ್ಟವಾಗಿದ್ದು. 12,726 ಹೆಕ್ಟರ್ ಬೆಳೆ ನಾಶ ಆಗಿದೆ. ಎನ್‌ಡಿಆರ್‌ಎಫ್ ಮೂಲಕ ಹಣ ನೀಡಿದರೆ ರೈತರಿಗೆ ನಷ್ಟವಾಗುತ್ತದೆ.
ಈ ಬಗ್ಗೆ ಸಿಎಂ ಹಾಗೂ ಮಿನಿಸ್ಟರ್ ಗಮನಕ್ಕೆ ತರಲಾಗಿದೆ. ಅಧಿಕಾರಿಗಳ ಜೊತೆ ಮಾತನಾಡಿ ಸೂಚನೆ ನೀಡಿದ್ದೇವೆ. ಬೆಳೆ ಹಾನಿ ಬಗ್ಗೆ ಪರೀಶಿಲನೆ ನಡೆಸಿ, ವರದಿ ನೀಡಲು ಹೇಳಿದ್ದೇನೆ. ರೈತರ ಹಾನಿಗೆ ವಿಶೇಷ ಪ್ಯಾಕೇಜ್ ಕೇಳಲಾಗಿದೆ. ವರದಿ ಬರುವವರೆಗೂ ಕಾಯೋಣ, ಕ್ಯಾಬಿನೆಟ್ ಮುಗಿದ ಬಳಿಕ ಸಿಎಂ ಜೊತೆ ಮಾತನಾಡಲು. ಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಬೋವಿ ನಿಗಮದ ಹಗರಣ ವಿಚಾರವಾಗಿ ಮಾತನಾಡಿ, ಜಾತಿಗಣತಿ ಮುಗಿಯಲಿ, ನಾನು ಆಮೇಲೆ ಮಾತನಾಡುತ್ತೇನೆ. ಇದರಲ್ಲಿ ಯರ‍್ಯಾರು ಬಿಜೆಪಿಯವರು ಇದ್ದಾರೆ, ಎಲ್ಲ ಮಾಹಿತಿ ಒದಗಿಸುತ್ತೇನೆ. ನಾನು ಅದರ ಬಗ್ಗೆ ಸಂಪೂರ್ಣ ಮಾಹಿತಿ ತಗೆದುಕೊಳ್ತೀನಿ ಎಂದು ತಿಳಿಸಿದರು.
2024-25ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಬೆಳೆವಿಮೆ ಯೋಜನೆಯಡಿ ಹೆಚ್ಚಿನ ಮಳೆ ಅಥವಾ ಗಾಳಿಯಿಂದ ಉಂಟಾಗಿರುವ ಬೆಳೆ ಹಾನಿ. ಬಗ್ಗೆ ಇನ್ಸೂರೆನ್ಸ್ ಕಂಪನಿ, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ. ನೀಡುವಂತೆ ಕೊಪ್ಪಳ ಜಂಟಿಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ತಿಳಿಸಿದ್ದಾರೆ.
ಏ. 10 ರಂದು ಕೊಪ್ಪಳ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಉದಾಹರಣೆಗೆ, ಕೊಪ್ಪಳ ತಾಲ್ಲೂಕಿನ ಬೆಣಕಲ್, ಭಾನಾಪುರ ಮತ್ತು ಹಲಗೇರಿ ಗ್ರಾಮಗಳಲ್ಲಿ 65 ರಿಂದ 75 ಮಿ.ಮೀ. ಮಳೆಯಾಗಿದ್ದು. ಗಂಗಾವತಿ ಹಾಗೂ ಕಾರಟಗಿ ತಾಲ್ಲೂಕಿನ ಹಣವಾಳ, ಬೇವಿನಾಳ, ಚಿಕ್ಕಡಣಕನಕಲ್ ಮತ್ತು ಹುಲಿಕಲ್ ಗ್ರಾಮಗಳಲ್ಲೂ ಸಹ 35 ರಿಂದ 50 ಮಿ.ಮೀ. ಮಳೆಯಾಗಿದೆ.
ಈ ರೀತಿಯ ಮಳೆಯಿಂದಾಗಿ ರೈತರ ಜಮೀನಿನಲ್ಲಿರುವ ಬೇಸಿಗೆ ಬೆಳೆ ನಷ್ಟವಾಗಿದ್ದರೆ, ಬೆಳೆವಿಮೆಗೆ. ನೋಂದಾಯಿಸಿಕೊಂಡಿರುವ ರೈತರು ವಿಮೆಗೆ ನೋಂದಾಯಿಸಿದ ಬೆಳೆಗಳ ವಿವರ. ಹಾನಿಯ ಪ್ರಮಾಣ ಮತ್ತು ಹಾನಿಗೆ ಕಾರಣವಾದ ಪರಿಸ್ಥಿತಿಯನ್ನು ಘಟನೆ ಸಂಭವಿಸಿದ 72 ಗಂಟೆಗಳ ಒಳಗೆ. ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ಸಂಖ್ಯೆ 1800-209-3536 & 9148442314 ಕ್ಕೆ ಸಂಪರ್ಕಿಸಬಹುದು. ಅಥವಾ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ. ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಅಪಾರ ಬೆಳೆ ನಷ್ಟ ಸಂಭವಿಸಿದೆ. ಸರ್ಕಾರ ತಕ್ಷಣವೇ ರೈತರಿಗೆ ಪ್ರತಿ ಎಕ್ಕರೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದರು.
‘ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಅನೇಕ ಕಡೆ ಭತ್ತದ ಬೆಳೆ ನೆಲಕಚ್ಚಿದೆ. ಸರ್ಕಾರದ ನಿಯಮದಂತೆ ಶೇ33ರಷ್ಟು ಬೆಳೆ ನಷ್ಟವಾದರೇ ಮಾತ್ರ ಪರಿಹಾರ ನೀಡುವುದಾಗಿ ಹೇಳಲಾಗುತ್ತಿದೆ. ಆದರೆ ಅದಕ್ಕಿಂತ ಕಡಿಮೆ ನಷ್ಟವಾದ ರೈತರು ಎಲ್ಲಿಗೆ ಹೋಗಬೇಕು, ತಕ್ಷಣ ಸರ್ಕಾರ ಪರಿಹಾರದ ನಿಯಮ. ಹಾಗೂ ಸರ್ವೆ ಕಾರ್ಯದ ಕ್ರಮವನ್ನೇ ಬದಲಾಯಿಸಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
2024-25ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಬೆಳೆವಿಮೆ ಯೋಜನೆಯಡಿ ಹೆಚ್ಚಿನ ಮಳೆ. ಅಥವಾ ಗಾಳಿಯಿಂದ ಉಂಟಾಗಿರುವ ಬೆಳೆ ಹಾನಿಯ ಬಗ್ಗೆ ಇನ್ಸೂರೆನ್ಸ್ ಕಂಪನಿ, ಹತ್ತಿರದ ರೈತ ಸಂಪರ್ಕ ಕೇಂದ್ರ. ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ನೀಡುವಂತೆ ಕೊಪ್ಪಳ ಜಂಟಿಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ತಿಳಿಸಿದ್ದಾರೆ.
ಏ. 10 ರಂದು ಕೊಪ್ಪಳ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಉದಾಹರಣೆಗೆ, ಕೊಪ್ಪಳ ತಾಲ್ಲೂಕಿನ ಬೆಣಕಲ್, ಭಾನಾಪುರ ಮತ್ತು ಹಲಗೇರಿ ಗ್ರಾಮಗಳಲ್ಲಿ 65 ರಿಂದ 75 ಮಿ.ಮೀ. ಮಳೆಯಾಗಿದ್ದು, ಗಂಗಾವತಿ ಹಾಗೂ ಕಾರಟಗಿ ತಾಲ್ಲೂಕಿನ ಹಣವಾಳ, ಬೇವಿನಾಳ, ಚಿಕ್ಕಡಣಕನಕಲ್ ಮತ್ತು ಹುಲಿಕಲ್ ಗ್ರಾಮಗಳಲ್ಲೂ ಸಹ 35 ರಿಂದ 50 ಮಿ.ಮೀ. ಮಳೆಯಾಗಿದೆ.
ಈ ರೀತಿಯ ಮಳೆಯಿಂದಾಗಿ ರೈತರ ಜಮೀನಿನಲ್ಲಿರುವ ಬೇಸಿಗೆ ಬೆಳೆ ನಷ್ಟವಾಗಿದ್ದರೆ, ಬೆಳೆವಿಮೆಗೆ ನೋಂದಾಯಿಸಿಕೊಂಡಿರುವ ರೈತರು ವಿಮೆಗೆ ನೋಂದಾಯಿಸಿದ. ಬೆಳೆಗಳ ವಿವರ, ಹಾನಿಯ ಪ್ರಮಾಣ ಮತ್ತು ಹಾನಿಗೆ ಕಾರಣವಾದ ಪರಿಸ್ಥಿತಿಯನ್ನು ಘಟನೆ ಸಂಭವಿಸಿದ 72 ಗಂಟೆಗಳ. ಒಳಗೆ ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ಸಂಖ್ಯೆ 1800-209-3536 & 9148442314 ಕ್ಕೆ ಸಂಪರ್ಕಿಸಬಹುದು. ಅಥವಾ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಿ. ಮಾಹಿತಿ ನೀಡುವಂತೆ ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಮಳೆಯಿಂದಾಗಿ ಮಾನ್ವಿ, ಸಿರವಾರ, ಮಸ್ಕಿ, ಸಿಂಧನೂರು ಸೇರಿ ಇನ್ನಿತರ ಕಡೆಗಳಲ್ಲಿ ಬೆಳೆದು ನಿಂತ ಬೆಳೆ ನೆಲಕಚ್ಚಿದೆ. ಕಂದಾಯ ಅಧಿಕಾರಿಗಳು. ಯಾವುದೇ ಹೋಟೆಲ್ ಹಾಗೂ ಮನೆಯಲ್ಲಿ ಕುಳಿತು ಬೆಳೆ ಸರ್ವೆ ಮಾಡದೇ ಹೊಲಗಳಿಗೆ ಭೇಟಿ ನೀಡಿ ಪ‍್ರಾಮಾಣಿಕವಾಗಿ ಸರ್ವೆ ಕಾರ್ಯ ಮಾಡಬೇಕು. ಎಷ್ಟು ಬೆಳೆ ನಷ್ಟವಾಗಿದೆ ಎಂದು ಸ್ಪಷ್ಟವಾಗಿ ನಮೂದಿಸಬೇಕು. ನಂತರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು’ ಎಂದರು.
‘ಈಗಾಗಲೇ ಭತ್ತದ ಬೆಲೆ ಕುಸಿದು ಹೋಗಿದೆ. ರಾಜ್ಯ ಸರ್ಕಾರ ರೈತರ ಸಮಸ್ಯೆ ಬಗ್ಗೆ ಯೋಚಿಸುತ್ತಿಲ್ಲ. ಬೆಳೆ ನಷ್ಟದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತುಟ್ಟಿ ಬಿಚ್ಚಿಲ್ಲ. ವಿರೋಧ ಪಕ್ಷಗಳು ರೈತರ ಸಮಸ್ಯೆ ಮಾತಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದೆಡೆ ಬಿಜೆಪಿಯವರು ಜನಾಕ್ರೋಶ ಯಾತ್ರೆ ನಡೆಸುತ್ತಿದ್ದಾರೆ. ಇನ್ನೊಂದೆಡೆ. ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸರ್ಕಾರ ಮತ್ತು ಅಧಿಕಾರಿಗಳು ಸ್ಪಂದಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಮರೇಶ ಆಲ್ದಾಳ,ಬೂದಯ್ಯ ಸ್ವಾಮಿ, ಲಿಂಗರೆಡ್ಡಿ, ನರಸಿಂಹಲು ಉಪಸ್ಥಿತರಿದ್ದರು.