ವಿಜಯಪುರ ಕೃಷಿಮೇಳ ದಿನಾಂಕ ಪ್ರಕಟ. ಕೃಷಿಮೇಳದ ವಿಶೇಷತೆ ಪಟ್ಟಿ ಬಿಡುಗಡೆ.

ಪ್ರಿಯ ಓದುಗರೇ ಇವತ್ತಿನಿಂದ ವಿಜಯಪುರ ಕೃಷಿ ಮೇಳ ಆರಂಭ. 2025-26 ನೇ ಸಾಲಿನ ಕೃಷಿ ಮೇಳವನ್ನು ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 11-13 ರವರೆಗೆ ಆಯೋಜಿಸಲಾಗಿದೆ. ಶಿರ್ಷಿಕೆ ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಸುಸ್ಥಿರ ಕೃಷಿ
ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಹಾಗೂ ಪ್ರದರ್ಶನ ಎಂಬ ಮುನ್ನುಡಿಯಲ್ಲಿ ಈ ವರ್ಷ ಕೃಷಿ ಮೇಳ ಆಯೋಜಿಸಲಾಗಿದೆ. ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಅಂದರೆ, ಜನವರಿ 11 ರಂದು ಪ್ರಾರಂಭವಾಗಲಿದ್ದು, ಮೂರು ದಿನ ಈ ಕೃಷಿ ಮೇಳ ನಡೆಯಲಿದೆ. ಕೃಷಿ ಮೇಳ ಹಲವು ಕಾರಣಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಬಾರಿಯ ಕೃಷಿ ಮೇಳದ ವಿಶೇಷತೆಗಳೇನು, ಕೃಷಿ ಮೇಳದಲ್ಲಿ ಏನೆಲ್ಲ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.


ಕೃಷಿಮೇಳದಲ್ಲಿನ ವಿಶೇಷತೆ –
* ಬರ ನಿರ್ವಹಣೆ ಪದ್ಧತಿಗಳು
* ಕೃಷಿ ಯಂತ್ರೋಪಕರಣ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ
* ಕೀಟನಾಶಕ ಸಿಂಪರಣೆಗಾಗಿ “ಡೋನ್” ಬಳಕೆ
* ಸೌರ ಚಾಲಿತ ಮತ್ತು ಕಡಿಮೆ ತೂಕದ ಡಿಸೈಲ್ ಪಂಪಸೆಟ್‌ ನಿಂದ ನೀರೆತ್ತುವುದು, ಸ್ವಯಂ ಚಾಲಿತ ಸೂಕ್ಷ್ಮ ನೀರಾವರಿ ಪದ್ದತಿ
* ಕೃಷಿ ಹವಾಮಾನ ಶಾಸ್ತ್ರ ಘಟಕ
* ವಿವಿಧ ಬೆಳೆ/ಅಂತರ ಬೆಳೆ ಪದ್ದತಿಗಳ ಪ್ರಾತ್ಯಕ್ಷಿಕೆಗಳು
* ಸಾವಯವ ಕೃಷಿ/ನೈಸರ್ಗಿಕ ಕೃಷಿ ಪ್ರಾತ್ಯಕ್ಷಿಕೆಗಳು
* ತೊಗರಿ ಆಧಾರಿತ ಬೇಸಾಯ ಪದ್ಧತಿ
* ಹಿಂಗಾರಿ ಜೋಳದಲ್ಲಿ ವಿವಿಧ ತಳಿಗಳು, ಕೀಟ, ರೋಗ ಮತ್ತು ಬರ ನಿರ್ವಹಣಾ ತಂತ್ರಜ್ಞಾನಗಳು
* ಕಡಲೆಯ ಹೊಸ ತಳಿಗಳು
* ಅಜವಾನ ಕೃಷಿ
* ಮಳೆ ಆಶ್ರಿತದಲ್ಲಿ ಚಿಕ್ಕು ಬೇಸಾಯ
* ಅರೆಶುಷ್ಕ ವಲಯಕ್ಕೆ ಸೂಕ್ತವಾದ ಜೈವಿಕ ಇಂಧನ ಮರಗಳು ಹಾಗೂ ಕೃಷಿ ಅರಣ್ಯ ಪದ್ದತಿಗಳು
* ಕೃಷಿ ಹೊಂಡದಿಂದ ಸಂದಿಗ್ಧ ಹಂತದಲ್ಲಿ ನೀರು ನಿರ್ವಹಣೆ
* ಫಲ / ಪುಷ್ಪ ಪ್ರದರ್ಶನ
* ಸಾವಯವ ಕೃಷಿ ತತ್ವಗಳು, ಮಹತ್ವ ಮತ್ತು ಪ್ರಮಾಣೀಕರಣ
* ಮಣ್ಣಿನ ಆರೋಗ್ಯ ಮತ್ತು ಸಮಗ್ರ ಪೋಷಕಾಂಶಗಳು ನಿರ್ವಹಣೆ
* ಪೌಷ್ಠಿಕ ಭದ್ರತೆಗಾಗಿ ಬೇಳೆ ಕಾಳುಗಳ ಉತ್ಪಾದನೆ
* ದ್ವಿದಳ ಧಾನ್ಯಗಳ ಉತ್ಪಾದನೆ ಮತ್ತು ಮಾರುಕಟ್ಟೆ
* ಮಾರಾಟಗಾರರು ಮತ್ತು ಖರೀದಿದಾರರ ಸಮಾವೇಶ
* ಆಧುನಿಕ ಕೃಷಿಗಾಗಿ ಸುಧಾರಿತ ಯಂತ್ರೋಪಕರಣಗಳು
* ಜೈವಿಕ ಪರಿಕರಗಳ ಉತ್ಪಾದನೆ ಮತ್ತು ಪ್ರಮಾಣೀಕರಣ
* ಅಣಬೆ ಕೃಷಿ-ಪ್ರಗತಿ ಪರ ರೈತರ ಅನುಭವ ಹಂಚಿಕೆ
* ಬೇಳೆ ಕಾಳುಗಳ ಪೌಷ್ಠಿಕತೆ ಮತ್ತು ಮೌಲ್ಯವರ್ಧನೆ
* ಪ್ರಗತಿ ಪರ ರೈತರ ಅನುಭವ ಹಂಚಿಕೆ
* ರೈತರಿಂದ ರೈತರಿಗೆ ಕಾರ್ಯಕ್ರಮ ರೈತರಿಗಾಗಿ
* ಆಹಾರ ಸಂಸ್ಕರಣೆಯಲ್ಲಿ ಯಾಂತ್ರೀಕರಣ

ಕೃಷಿಮೇಳ ನಡೆಯುವ ಸ್ಥಳ : ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (ಸಿಟ್ಟಿನಹಳ್ಳಿ ಫಾರ್ಮ), ವಿಜಯಪುರ.
ದಿನಾಂಕ – ಜನವರಿ 11 – 13


ಈ ಬಾರಿಯ ಕೃಷಿಮೇಳದಲ್ಲಿ ಅಂದಾಜು 5 ಲಕ್ಷಕ್ಕಿಂತಲೂ ಹೆಚ್ಚು ರೈತರು, ರೈತ ಮಹಿಳೆಯರು, ವಿಸ್ತರಣಾ ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಮಳಿಗೆಗಳನ್ನು ಬುಕ್ ಮಾಡಲು ಸಂಪರ್ಕ ಮಾಡಲು ಮೇಳದಲ್ಲಿ ರೈತರು ಅಥವಾ ಇತರೆ ಕಂಪನಿಯರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅಥವಾ ಪ್ರದರ್ಶನ ಮಾಡಲು ಮುಂಚಿತವಾಗಿ ಮಳಿಗೆಗಳನ್ನು ಬುಕ್ ಮಾಡಲು ತಿಳಿಸಲಾಗಿದೆ.

Spread positive news

Leave a Reply

Your email address will not be published. Required fields are marked *