ಮೋಜನಿ (ಹದ್ದುಬಸ್ತು) ಅರ್ಜಿ ಹಾಗೂ ಜಮೀನಿನ ಬಗ್ಗೆ ನಿಮ್ಮ ಫೋನಿನಲ್ಲಿ ಪಡೆಯುವ ಡೈರೆಕ್ಟ್ ಲಿಂಕ್.

ರೈತ ಮಿತ್ರರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚಿಸೋಣ. ರೈತರು ತಮ್ಮ ಜಮೀನಿನ ಮೋಜನಿ (ಹದ್ದುಬಸ್ತು) ಪಡೆಯಲು ಅರ್ಜಿ ಹಾಕಿರುತ್ತಾರೆ. ಆದರೆ ರೈತರಿಗೆ ಈ ಅರ್ಜಿ ಸಲ್ಲಿಸಿದ ನಂತರ ಏನು ಮಾಡಬೇಕು. ಮೋಜಿನಿ ಪೋರ್ಟಲ್ ಅನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಆನ್‌ಲೈನ್ ಪೋರ್ಟಲ್‌ನಲ್ಲಿ ತಮ್ಮ ಭೂ ದಾಖಲೆಗಳ ಮೂಲಕ ರಾಜ್ಯದ ಎಲ್ಲಾ ಭೂ ಮಾಲೀಕರಿಗೆ ಭೂಮಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಪ್ರಾರಂಭಿಸಿದೆ.

ಭೂಮಿ ಮೋಜಿನಿ ಸಹಾಯದಿಂದ, ಆನ್‌ಲೈನ್ ಪೋರ್ಟಲ್ ಮೂಲಕ ನಿಮ್ಮ ಭೂಮಿಗೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯನ್ನು ನೀವು ಸುಲಭವಾಗಿ ಪಡೆಯಬಹುದು. ಅರ್ಜಿ ಸ್ಥಿತಿ ಹಾಗೂ ಅರ್ಜಿ ಸರ್ವೆ ಬಗ್ಗೆ ಹೇಗೆ ತಿಳಿಯಬೇಕು ಎಂಬ ಗೊಂದಲದಲ್ಲಿ ಬೀಳುತ್ತಾರೆ. ಅದಕ್ಕೆ ಈಗ ಸರ್ಕಾರವು ತನ್ನದೇ ಆದ ಒಂದು ಮೊಜನಿV3 ಎಂಬ ಹೊಸ ವೆಬ್ಸೈಟ್ ಅನ್ನು ತೆಗೆದಿದ್ದಾರೆ. ಇದರ ಮೂಲಕ ನಿಮ್ಮ ಅರ್ಜಿ ಮಾಹಿತಿ ನೀವು ಪಡೆಯಬಹುದು.

ಏನಿದು ಮೋಜನಿ (ಹದ್ದುಬಸ್ತು) V3 ವೆಬ್ಸೈಟ್?
ಹೌದು ಇದು ಒಂದು ಸರ್ಕಾರದ ವೆಬ್ಸೈಟ್ ಆಗಿದೆ. https://bhoomojini.karnataka.gov.in/index.html. ಇದರ ಮೇಲೆ ಕ್ಲಿಕ್ ಮಾಡಿದ ನಂತರ ಇದರಲ್ಲಿ ರೈತರು ತಮ್ಮ ಜಮೀನಿನ ಮೋಜನಿ (ಹದ್ದುಬಸ್ತು) ಪಡೆಯಲು ಅರ್ಜಿ ಸಲ್ಲಿಸಿದಾಗ ರೈತರಿಗೆ ತಮ್ಮ ಜಮೀನಿನ ಅಳತೆ ಮಾಡಲು ಆಯ್ಕೆ ಆಗಿರುವ ಸರ್ವೇದಾರರ ಹೆಸರು, ಜಮೀನಿಗೆ ಯಾವ ದಿನಾಂಕದಂದು ಅಳೆಯಲು ಬರುತ್ತಾರೆ ಹಾಗೂ ಅರ್ಜಿ ಸ್ಥಿತಿ ಏನು ಎಂದು ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.

ಕರ್ನಾಟಕ ಸರ್ಕಾರವು ರಾಜ್ಯದ ನಿವಾಸಿ ನಾಗರಿಕರಿಗಾಗಿ ಮೋಜಿನಿ v3 ಅಪ್ಲಿಕೇಶನ್ ಸ್ಥಿತಿ ಪರಿಶೀಲನೆ 2024 ಪ್ರಕ್ರಿಯೆಯನ್ನು ಪ್ರಾರಂಭಿಸಲು ಘೋಷಿಸಿದೆ. ಭೂಮಿಯ ತುಣುಕಿನ ಸರ್ವೆ ಸಂಖ್ಯೆ, ಸರ್ವೆ ದಾಖಲೆಗಳು ಮತ್ತು ಭೂ ಸರ್ವೆ ದಾಖಲೆಗಳ ಬಗ್ಗೆ ವಿವರಗಳನ್ನು ಪಡೆಯಲು ಬಯಸುವ ನಾಗರಿಕರು ಈಗ ಕರ್ನಾಟಕ ಮೋಜಿನಿ v3 ಅರ್ಜಿ, ಹಂಚಿಕೆ, 11e ಸ್ಕೆಚ್ ಸ್ಥಿತಿ ಪರಿಶೀಲಿಸುವ ಸೌಲಭ್ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮಗಾಗಿ ಲಭ್ಯವಿದೆ.

ಇದರಿಂದ ರೈತರಿಗೆ ಲಾಭ ಏನು?
* ರೈತರಿಗೆ ಜಮೀನಿನ ಹದ್ದುಬಸ್ತಿನ ಅರ್ಜಿ ಸ್ಟೇಟಸ್ ತಿಳಿಯುತ್ತದೆ.
• ರೈತರಿಗೆ ಯಾವ ಸರ್ವೇ ದಾರರು ಆಯ್ಕೆ ಆಗಿದ್ದಾರೆ ಎಂದು ತಿಳಿಸುತ್ತದೆ.
• ರೈತರಿಗೆ ತಮ್ಮ ಜಮೀನಿನ ನಕಾಶೆ ದೊರೆಯುತ್ತದೆ.
• ರೈತರಿಗೆ ಇದರಿಂದ ಸರ್ವೇ ದಾರರು ನೀಡಿದ ನೋಟಿಸ್ ಹಾಗೂ ಪುತ್ರ (ಪುರಾವೆ) ದೊರೆಯುತ್ತದೆ.
• ನಿಮಗೆ ಬೇಕಾದ ಜಮೀನಿನ ಸಂಪೂರ್ಣ ಮಾಹಿತಿ ಇದರಲ್ಲಿ ಸಿಗುತ್ತದೆ.
• ರೈತರು ನಿರಂತರವಾಗಿ ತಮ್ಮ ಜಮೀನಿನ ನಕ್ಷೆ ಹಾಗೂ ಸರ್ವೆ ದಾರರು ನೀಡಿದ ನೋಟಿಸ್ ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ.https://bhoomojini.karnataka.gov.in/index.html.

ನಮ್ಮ ಅಕ್ಕಪಕ್ಕದಲ್ಲಿ ಇರುವ ಜಮೀನಿನ ಮಾಹಿತಿ ಪಡೆಯುವುದು ಎಂಬುದು ನಿಖರವಾಗಿ ತಿಳಿದಿಲ್ಲ, ಅದಕ್ಕೆ ಸರ್ಕಾರವು ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಏನೆಂದರೆ ಆಧಾರ್ ಕಾರ್ಡ್ ಅನ್ನು ನಿಮ್ಮ ಪಹಣಿ(ಉತಾರ್) ಲಿಂಕ್ ಮಾಡುವುದು. ಒಂದು ವೇಳೆ ನಿಮ್ಮ ಪಹಣಿಗೆ (ಉತಾರಿಗೆ) ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಯಾವುದೇ ಮಾಹಿತಿ ನಿಖರವಾಗಿ ತಿಳಿಯುವುದಿಲ್ಲ. ಅದಕ್ಕಾಗಿ ಸರ್ಕಾರವು ರೈತರಿಗೆ ಸಿಗುವ ಸಂಪೂರ್ಣ ಯೋಜನೆ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕೆಲಸಕ್ಕೆ ಕೈ ಹಾಕುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಅದೆಷ್ಟೋ ಸಮಸ್ಯೆಗಳಿಂದ ಪಾರಾಗಬಹುದು.

Spread positive news

Leave a Reply

Your email address will not be published. Required fields are marked *