ಪ್ರೀಯ ರೈತರೇ ಸರ್ಕಾರವು ಹಾಗೂ ಇನ್ನೀತರ ಖಾಸಗಿ ಹಾಗೂ ಅರೆಸರ್ಕಾರಿ ಸಂಸ್ಥೆಗಳು ರೈತರ ನೆರವಿಗೆ ಸದಾ ನಿಂತಿವೆ. ಅದೇ ರೀತಿ ರೈತರು ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಬೆಳೆದಿದ್ದು ಮಳೆಯು ಸಹ ವಾಡಿಕೆಗಿಂತ ಚೆನ್ನಾಗಿ ಆಗಿದೆ. ಹಾಗೂ ಹಿಂಗಾರು ಮಳೆ ಸಹ ಚೆನ್ನಾಗಿ ಆಗುವ ನಿರೀಕ್ಷೆಯಿದೆ. ರೈತರು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಖುಷಿಯಲ್ಲಿದ್ದಾರೆ. ರಾಜ್ಯ ಸರಕಾರವು ಹಿಂಗಾರು ಹಂಗಾಮಿಗೆ ಪ್ರಮುಖ ಬಿತ್ತನೆ ಬೀಜಗಳ ಬೆಲೆ ಇಳಿಕೆ ಮಾಡಿದೆ. ಪ್ರತಿ ಗಗನ ಮುಖಿಯಾಗಿರುತ್ತಿದ್ದ ಬಿತ್ತನೆ ಬೀಜಗಳ ಬೆಲೆ ಈ ಬಾರಿ ಕಡಿಮೆಯಾಗಿರುವುದು ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಅದೇ ರೀತಿ ಈಗ ರಾಜ್ಯ ಕೃಷಿ ಇಲಾಖೆಯ ಕೃಷಿ ಸಂಪರ್ಕ ಕೇಂದ್ರಗಳ ಮೂಲಕ ನೀಡಲಾಗುವ ಪ್ರಮಾಣಿತ. ಹಲವು ಬೆಳೆಗಳ ಬೀಜಗಳ ಬೆಲೆ 2023-24ನೇ ಸಾಲಿಗೆ 2024-25 ಸಾಲಿನಲ್ಲಿ ಇಳಿಕೆ ಮಾಡಲಾಗಿದೆ. ಸುಲಭದ ವರದಲ್ಲಿ ಬೀಜಗಳು ಸಿಗುವಂತಾಗಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಇದು ಹೆಚ್ಚು ಸಹಕಾರಿಯಾಗಿದೆ. ರೈತರು ಕೂಡಲೇ ನಿಮ್ಮ ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಕೃಷಿ ಪತ್ತಿನ ಸಹಕಾರ ಸಂಘಗಳು ಅಥವಾ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಬೀಜ ಖರೀದಿಸಿ.
ಯಾವ ಬೆಳೆಗಳ ಬೀಜಕ್ಕೆ ಎಷ್ಟು ದರ ಪ್ರತಿ ಕೆಜಿಗೆ –
ಜೋಳ -76
ಕಡಲೆ – 133
ಶೇಂಗಾ – 80
ಕುಶುಬೆ -98
ರೈತರೇ ನೀವು ಈಗಲೇ ರೈತ ಸಂಪರ್ಕ ಕೇಂದ್ರ ಅಥವಾ ನಿಮ್ಮ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ನಿಮ್ಮ ಪಹಣಿ ಅಥವಾ ಆಧಾರ್ ಕಾರ್ಡ್ ಮೂಲಕ ಬೀಜಗಳನ್ನು ಕಡಿಮೆ ದರದಲ್ಲಿ ಖರೀದಿಸಿ. ಮುಂಗಾರು ಮಳೆ ರಾಜ್ಯದಲ್ಲಿ ಭರ್ಜರಿ ಬಂದಿದ್ದರಿಂದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಪೈರು ನಳನಳಿಸುತ್ತಿದೆ. ಈಗ ಹಿಂಗಾರು ಬಿತ್ತನೆ ಶುರುವಾಗಿದ್ದು, ಇಳಿಕೆಯಾಗಿರುವುದು ನಿರಾಳ ಬೆಲೆ ಉಂಟು ಕಡಲೆ ಬೀಜಗಳ ಬೆಲೆ ಏರಿಕೆ ಅಚ್ಚರಿ ಎಂದರೆ, ಹಿಂಗಾರಿನಲ್ಲಿ ಪ್ರಮುಖವಾಗಿ ಬಿತ್ತನೆ ಮಾಡುವ ಕಡಲೆ ಬೀಜಗಳ ಬೆಲೆ ಏರಿಕೆ ಮಾಡಿರುವುದು ಅನ್ನದಾತರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ವರ್ಷ ಕೆಜಿಗೆ 85 ರೂ.ಗಳಿಗೆ ಮಾರಾಟ ಮಾಡಿದ್ದರೆ, ಈ ಬಾರಿ 96 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಬೆಳೆ ಚೆನ್ನಾಗಿ ಬಾರದೇ ಇದ್ದರಿಂದ ಕಡಲೆ ಬೆಳೆ ಬರಲಿಲ್ಲ. ಹೀಗಾಗಿ ಈ ಬೀಜದ ಕೊರತೆ ಎದುರಾಗಿತ್ತು. ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬೀಜಗಳನ್ನು ತರಿಸಲಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಲು ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಅದೇ ರೀತಿ ಸರ್ಕಾರದಿಂದ ಹೊರತು ಪಡಿಸಿ ಕೃಷಿ ವಿಶ್ವವಿದ್ಯಾಲಯಗಳು ಕೂಡ ಬೀಜಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ಕಡಿಮೆ ದರದಲ್ಲಿ ವಿತರಿಸಲು ಮುಂದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ವಿಜಯಪುರ 01, ಹಿಟ್ಟನಹಳ್ಳಿ ಫಾರ್ಮ್ ನಲ್ಲಿ ಬಿತ್ತನೆಗೆ ಯೋಗ್ಯವಿರುವ ಕಡಲೆಬೀಜ BGD 111-1 ತಳಿಯ 20 ಕೆಜಿಗೆ 2300 ರಂತೆ ಹಿಟ್ನಳ್ಳಿ ಫಾಮ್ ನಲ್ಲಿ ಲಭ್ಯವಿರುತ್ತದೆ.
ಸಂಪರ್ಕಕ್ಕಾಗಿ
ಡಾ. ಶಿವರಾಜ್ ಕಾಂಬಳೆ
8618667839.
ಅದೇ ರೀತಿ ಈಗ ಸರ್ಕಾರವು ಕೂಡ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಡಿಮೆ ಬೆಲೆಗೆ ಬೀಜಗಳನ್ನು ವಿತರಿಸಲು ಮುಂದಾಗಿದೆ. ಕಳೆದ ವರ್ಷ ತೀವ್ರ ಬರಗಾಲದಿಂದ ಬೆಳೆ ರೈತರ ಕೈ ಹಿಡಿಯಲಿಲ್ಲ. ಆದರೆ ಈ ಬಾರಿ ಹೊಸ ಆಶಾಭಾವನೆ ಮೂಡಿಸಿದೆ. ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾದ ಜೋಳದ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆಜಿಗೆ 12 ರೂ. ಇಳಿಕೆ ಮಾಡಲಾಗಿದೆ. ಶೇಗಾ ಬೀಜ ಬೆಲೆ 9 ರೂ., ಕುಸುಬೆ 10 ರೂ.ಗಳನ್ನು ಇಳಿಕೆ ಮಾಡಲಾಗಿದೆ. ಪ್ರತಿ ಬೀಜಗಳ ಬೆಲೆ ಕೆ.ಜಿ.ಗೆ 10-12 ರೂ.ಗಳವರೆಗೆ ಕಡಿಮೆ ಮಾಡಿ ರೈತರಿಗೆ ವಿತರಿಸಲಾಗುತ್ತಿದೆ.