ರೈತ ಬಾಂಧವರಿಗೆ ವಿಶೇಷ ಸೂಚನೆ ಪಿ.ಎಂ.ಕಿಸಾನ್ ಯೋಜನೆಯ ಮುಂದಿನ ಕಂತುಗಳು ನಿಮಗೆ ಜಮೆ ಆಗಬೇಕಾದರೆ *e-KYC* ಮಾಡಿಸಿಕೊಳ್ಳುವುದು ಖಡ್ಡಾಯ. ಅದೇ ರೀತಿ ಈಗಾಗಲೇ ಹಣ ಯಾರಿಗೆ ಬಂದಿಲ್ಲ ಅವರು ಸಹ ಒಮ್ಮೆ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ನಿಮ್ಮ ಪಿಎಂ ಕಿಸಾನ್ ಆರ್ ಬಗ್ಗೆ ಮಾಹಿತಿ ತಿಳಿದು ಬೇಕಾಗುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಈ ಯೋಜನೆಯ ಲಾಭ ಪಡೆಯಿರಿ.
ರೈತರೇ ಪಿಎಂ ಕಿಸಾನ್ ಕೇಂದ್ರ ಸರ್ಕಾರದ PM-KISAN Portal ನಲ್ಲಿ ಹಾಗೂ ಮೊಬೈಲ್ (https://pmkisan.gov.in)ಈ ಲಿಂಕ್ ಮೂಲಕ ಸಹ ನೀವು ನಿಮ್ಮ ಪಿಎಂ ಕಿಸಾನ್ ಹಣ ಹೊಸ ಅಪ್ಡೇಟ್ ಹಾಗೂ ಈ ಕೆವೈಸಿ ಮಾಡಬಹುದು. ಪಿ.ಎಂ.ಕಿಸಾನ್ ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ. e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು ಕೋರಿದೆ.
ಮೂರು ವಿಧದ ಕೆವೈಸಿ ಮಾಡಬಹುದು.(3 types of kyc).
OTP ಆಧಾರಿತ ಕೆವೈಸಿ. ನಿಮ್ಮ ಆಧಾರ್ ನಂಬರ್ ಹಾಕಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರಿಗೆ OTP ಬರುವ ಮೂಲಕ ಕೆವೈಸಿ ಮಾಡಬಹುದು.
Biometric pacal e-KYC
ಅದೇ ರೀತಿ ಇಲ್ಲಿ ನಿಮ್ಮ ಎಡಗೈ ಬೆರಳಿನ ಹೆಬ್ಬಟ್ಟು ಮೂಲಕ ನಾಗರೀಕ ಸೇವಾ ಕೇಂದ್ರ / ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.
(FACE AUTHENTICATION): ಇದನ್ನು ನಿಮ್ಮ ಮುಖದ ಫೊಟೋ ತೆಗೆಯುವುದರ ಮೂಲಕ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ‘ಕೃಷಿ ಇಲಾಖೆ ಕಛೇರಿ’ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ವಿನಂತಿಸಿದೆ.
ಮೊಬೈಲ್ ನಲ್ಲಿ e-KYC ಮಾಡಿಕೊಳ್ಳಲು ಇ-ಕೆವೈಸಿ ಆಗುತ್ತಿಲ್ಲಾ ಅಂದ್ರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಇ-ಕೆವೈಸಿ ಮಾಡಿಕೊಳ್ಳಿ, ಕೇವಲ ಕೆಲವು ದಿನಗಳ ಬಾಕಿ ಇದೆ ಬೇಗನೆ ರೈತರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಕೆವೈಸಿ ಸಂಪೂರ್ಣ ಮಾಡಿಕೊಳ್ಳಿ.
https://exlink.pmkisan.gov.in/aadharekyc.aspx
ಮೊಬೈಲ್ ನಲ್ಲಿ EKYC ಮಾಡುವುದು ಹೇಗೆ ಎಂದು ತಿಳಿಯಲು ಈ ವಿಡಿಯೋ ನೋಡಿ*👇
ಮೋಬೈಲ್ ಮೂಲಕ ಇ-ಕೆವೈಸಿ ಮಾಡುವ ವಿಧಾನ –
• ಗೂಗಲ್ ನಲ್ಲಿ ಪಿಎಂ ಕಿಸಾನ್ ಇ- ಕೆವೈಸಿ ಎಂದು ಹುಡುಕಬೇಕು.
• ನಂತರ ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಬೇಕು.
• ನಂತರ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಬೇಕು.
• ಓಟಿಪಿ ಬರುತ್ತದೆ. ನಂತರ ಅಲ್ಲಿ ಸಬ್ಮಿಟ್ ಕೊಡಬೇಕು ಆವಾಗ ಆಧಾರ್ ಕಾರ್ಡ್ ಆಧಾರಿತ ಓಟಿಪಿ ಬರುತ್ತದೆ. ಅಲ್ಲಿ 6 ಸಂಖ್ಯೆ ಓಟಿಪಿ ಹಾಕಿದಾಗ ಇ- ಕೆವೈಸಿ ಸಂಪೂರ್ಣ ಆಗುತ್ತದೆ.
ಪ್ರಸ್ತುತ ಪಿ.ಎಂ.ಕಿಸಾನ್ ದತ್ತಾಂಶದಲ್ಲಿ ಈಗಾಗಲೇ ಹಲವಾರು ಫಲಾನುಭವಿಗಳು ನಕಲಿ ಹಾಗೂ ಅಮಾನ್ಯ Mobile Number ಉಪಯೋಗಿಸಿಕೊಂಡು ನೋಂದಣಿಯಾಗಿರುವುದು ಕಂಡು ಬಂದಿರುತ್ತದೆ. ಆದ್ದರಿಂದ, ಎರಡಕ್ಕಿಂತ ಹೆಚ್ಚು ಫಲಾನುಭವಿಗಳು ಒಂದೇ ಮಾನ್ಯ Mobile Number ಉಪಯೋಗಿಸಿಕೊಂಡು ಅಥವಾ ಅಮಾನ್ಯ Mobile Number ಉಪಯೋಗಿಸಿಕೊಂಡು ಯೋಜನೆಯಡಿ ನೋಂದಣಿಯಾಗಿದ್ದಲ್ಲಿ, ಅಂತಹ ಫಲಾನುಭವಿಗಳಿಗೆ ಮುಂದಿನ ಕಂತುಗಳ ಆರ್ಥಿಕ ನೆರವು ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿರುತ್ತಾರೆ.
ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಗಳಿಂದ Untraceable ಎಂದು ವರದಿ ಮಾಡಿದ ನಂತರ e- KYC ಮಾಡಿಸಿಕೊಂಡಂತಹ ಫಲಾನುಭವಿಗಳ ಅರ್ಹತೆಯನ್ನು ಯೋಜನೆಯ ಮಾರ್ಗಸೂಚಿಯನ್ವಯ ಪರಿಶೀಲಿಸಿ ದಿನಾಂಕ: 10.08.2024 ರೊಳಗೆ ಕೇಂದ್ರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದ್ದು, ಅದಾಗ್ಯೂ, ಇಲ್ಲಿಯವರೆಗೆ ಯಾವುದೇ ಜಿಲ್ಲೆಯಿಂದ ವರದಿ ಕೇಂದ್ರ ಕಚೇರಿಗೆ ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ ಸದರಿ ಪರಿಶೀಲನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ವರದಿಯನ್ನು ಸಲ್ಲಿಸಬೇಕೆಂದು ಮತ್ತೊಮ್ಮೆ ತಿಳಿಸಿದೆ.