
ರೈತರೇ ಎಚ್ಚರ! ತೆಂಗಿನ ಬೆಳೆಯಲ್ಲಿ ಕೀಟದ (ಹುಳದ) ಕಾಟ.
ಕಳೆದ ಕೆಲವು ವರ್ಷಗಳಿಂದ ತೆಂಗಿಗೆ ಉತ್ತಮ ದರ ದೊರೆಯುತ್ತಿದೆ. ಆದರೆ ಕೊಬ್ಬರಿ ಬೆಲೆಯಲ್ಲಿ ಏರು ಪೇರುಗಳು ಕೆಲವೊಮ್ಮೆ ಸಂಕಷ್ಟಕ್ಕೀಡು ಮಾಡುತ್ತಿದೆ. ಎಲ್ಲದಕ್ಕೂ ತೆಂಗು ಅಗತ್ಯವಾಗಿರುವುದರಿಂದ ಅದಕ್ಕೆ ಬೇಡಿಕೆಯಂತು ಕಡಿಮೆಯಾಗುವುದಿಲ್ಲ. ಇತ್ತೀಚೆಗೆ ಎಳನೀರಿಗೆ ಬೇಡಿಕೆ ಇರುವ ಕಾರಣ ರೈತರು ಅದರತ್ತ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಹೀಗಾಗಿ ತೆಂಗಿನ ಕಾಯಿ ಮತ್ತು ಕೊಬ್ಬರಿ ಬಗ್ಗೆ ತಲೆಕೆಡಿಸಿಕೊಳ್ಳದೆ ಎಳನೀರನ್ನು ಪಡೆಯುವಂತಹ ತಳಿಗಳನ್ನು ಬೆಳೆಯುತ್ತಿರುವುದು ಕಂಡು ಬರುತ್ತಿದೆ. ಎಳನೀರಿಗೆ ಎಲ್ಲ ಕಾಲದಲ್ಲಿಯೂ ಬೇಡಿಕೆ ಇರುವ ಕಾರಣ ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಹೊರ…