ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ರಾಜ್ಯದಲ್ಲಿ ಹಲವಾರು ನಿಗಮಗಳು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಅದೇ ರೀತಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಈಗ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ನಿಯಮಿತ
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ “ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭವೃದ್ದಿ ನಿಗಮ ” ವನ್ನು 1975ನೇ ಸಾಲಿನಲ್ಲಿ ಸ್ಥಾಪಿಸಲಾಯಿತು.ನಿಗಮವು 1956ರ ಕಂಪನಿ ಕಾಯ್ದೆಯಡಿ ಸ್ಥಾಪಿಸಲಾಯಿತು.ನಂತರ ನಿಗಮವನ್ನು 13.10.2005ರಲ್ಲಿ “ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ” ಎಂದು ಮರು ನಾಮಕರಣ ಮಾಡಲಾಯಿತು.
ವಿವಿಧ ಸಬ್ಸಿಡಿ ಸಾಲ ಯೋಜನೆಗಳಿಗೆ ಅರ್ಜಿ ಆಹ್ವಾನ 2024 –
1) ಸ್ವಯಂ ಉದ್ಯೋಗ ಯೋಜನೆ
2) ಭೂ ಒಡೆತನ ಯೋಜನೆ.
3) ನೇರಸಾಲ ಯೋಜನೆ
4) ಉದ್ಯಮಶೀಲತಾ ಯೋಜನೆ
5) ಮೈಕ್ರೋ ಕ್ರೆಡಿಟ್ ಫೈನಾನ್ಸ್
6) ಗಂಗಾ ಕಲ್ಯಾಣ ಯೋಜನೆ
ಯಾವ ಯಾವ ನಿಯಮಗಳಿಗೆ ಅರ್ಜಿ ಸಲ್ಲಿಸಬಹುದು?
* ಅಂಬೇಡ್ಕರ್ ಅಭಿವೃದ್ಧಿ ನಿಗಮ
* ಆದಿಜಾಂಬವ ಅಭಿವೃದ್ಧಿ ನಿಗಮ
* ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
* ತಾಂಡಾ ಅಭಿವೃದ್ಧಿ ನಿಗದು ಹಾಲನ ಭೋವಿ ಅಭಿವೃದ್ಧಿ ನಿಗಮ
* ವಾಲ್ಟಿಕಿ ಅಭಿವೃದ್ಧಿ ನಿಗಮ
https://adcl.karnataka.gov.in/#
ಇನ್ನೂ ಈ ನಿಗಮದ ಬಗ್ಗೆ ಮಾಹಿತಿ. ಯಾರು ಈ ಸೌಲಭ್ಯ ಪಡೆಯಲು ಅರ್ಹರು, ಅರ್ಜಿ ಸಲ್ಲಿಸುವುದು ಹೇಗೆ? ಯಾವ ಯಾವ ಯೋಜನೆಗಳಿಗೆ ನಾವು ಸಾಲ ಪಡೆಯಬಹುದು ಎಂದು ಸಂಪೂರ್ಣ ವಿವರ ಈ ಲಿಂಕ್ ಮೇಲಿದೆ. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಎಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬೇಕು.
ಕರ್ನಾಟಕ ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಅಭಿವೃದ್ಧಿ ನಿಗಮಗಳ ವಿವಿಧ ಯೋಜನೆಗಳು ಹಾಗೂ ಪ್ರಮುಖವಾಗಿ ಸ್ವಯಂ ಉದ್ಯೋಗ ನೇರ ಸಾಲ ಸೌಲಭ್ಯ ಪಡೆಯಲು, ಅರ್ಜಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು
ದೂರವಾಣಿ ಸಂಖ್ಯೆ: 08375 – 234408 / ಕಲ್ಯಾಣ ಮಿತ್ರ ಸಹಾಯವಾಣಿ ಸಂಪರ್ಕ ಸಂಖ್ಯೆ 9482300400.
ಅದೇ ರೀತಿ ರೈತರು ಸರ್ಕಾರರ ಯೋಜನೆ ಪಡೆದುಕೊಳ್ಳಲು ಕೆಲವು ನಿಯಮಗಳನ್ನು ಸರ್ಕಾರವು ರೂಪಿಸಿದೆ. ಸರ್ಕಾರವು ಕೃಷಿ ಹಾಗೂ ಹಲವಾರು ಯೋಜನೆಗಳನ್ನು ರೂಪಿಸಿದ್ದು ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರ ಸಂಘಗಳ, ಹಾಗೂ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಅದೇ ರೀತಿ ರೈತರು ಯಾವುದೇ ಸರ್ಕಾರದ ಸೌಲಭ್ಯ ಅಥವಾ ಸರ್ಕಾರದ ಕಡೆಯಿಂದ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಮುಖ್ಯವಾಗಿ ದಾಖಲೆಗಳ ಅವಶ್ಯಕತೆ ಇದೆ.